ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ದೊಡ್ಮನೆ ಸಮೀಪದ
ಬಿಳಗೋಡು-ನೆಟ್ಟಗೋಡು ಗ್ರಾಮದ ಮನೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಪೊಲೀಸ್ ರು ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ.
ಗೌರಿ ಈಶ್ವರ ನಾಯ್ಕ(50) ಮೃತಳಾಗಿದ್ದು ಕಳೆದ ಎರಡು- ಮೂರು ವರ್ಷದ ಹಿಂದೆ ಗಂಡ ತೀರಿಕೊಂಡಿದ್ದ.ಮಗಳು ಮದುವೆಯಾಗಿದ್ದು ಮಗ ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ
ಎನ್ನಲಾಗಿದೆ.
ಒಂಟಿಯಾಗಿದ್ದ ಮಹಿಳೆ ಬಹುಶ: ಶನಿವಾರ ರಾತ್ರಿಯೇ ಮೃತಳಾಗಿರುವ ಸಾಧ್ಯತೆ ಇದೆ.ಮನೆಯ ವರಾಂಡದಲ್ಲಿ ಶವವಾಗಿ ಬಿದ್ದಿರುವ ವಿಷಯ ವಿದ್ಯುತ್ ಬಿಲ್ ಕೊಡಲು ಬಂದ ಬಿಲ್ ಕಲೆಕ್ಟರ್ ಗೆ ಗೋಚರಿಸಿದ್ದು ಅವನು ಊರಿನವರಿಗೆ ತಿಳಿಸಿದ್ದಾನೆ
ಪೊಲೀಸ್ ರು ಸ್ಥಳದಲ್ಲಿದ್ದು,ಶವದ ಮೇಲೆ ಕಲ್ಲಿನಿಂದ ಜಜ್ಜಿರುವ
ಗುರುತು ಇದೆ ಎನ್ನಲಾಗುತ್ತಿದೆ. ಮಹಿಳೆ ಕೊಲೆಯಾಗಿರುವ ಶಂಕೆಯನ್ನು ಪೊಲೀಸ್ ರು ವ್ಯಕ್ತಪಡಿಸಿದ್ದಾರೆ.