ಆದ್ಯೋತ್ ಸುದ್ಸಿನಿಧಿ:
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಹಿತ್ಲಳ್ಳಿಯ ಶಾಂತಾರಾಮ ಸಿದ್ದಿ ವಿಧಾನಪರಿಷತ್ ಗೆ ನಾಮಕರಣಗೊಳ್ಳುವ ಮೂಲಕ ಬಿಜೆಪಿ ತನ್ನ ಕೆಳಮಟ್ಟದ ಕಾರ್ಯಕರ್ತರನ್ನು ಗುರುತಿಸುತ್ತದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.
ಹಾಗೆ ನೋಡಿದರೆ ಶಾಂತಾರಾಮ ಸಿದ್ದಿಯವರ ಆಯ್ಕೆ ಅರ್ಹ ವ್ಯಕ್ತಿಗೆ ಸಂದ ಗೌರವ ಎನ್ನಬಹುದು.
ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯ ಬಡ ಕುಟುಂಬದಿಂದ ಬಂದ ಇವರು ಸಿದ್ದಿಜನಾಂಗದ ಮೊದಲ ಪದವೀಧರರು ವನವಾಸಿಗಳ ಸರ್ವತೋಮುಖ ಅಭಿವೃದ್ದಿಗೆ ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದವರು.ವನವಾಸಿ ಕಲ್ಯಾಣದ ಶಾಖೆಯಲ್ಲಿ ಸಕ್ರೀಯರಾಗಿದ್ದವರು. ಕಳೆದ ಮೂರು ದಶಕಗಳಿಂದ
ಪಶ್ಚಿಮ ಘಟ್ಟದ ವನವಾಸಿಗಳ ನಡುವೆ ಕೆಲಸ ಮಾಡುತ್ತಿರುವ ಶಾಂತಾರಾಮ ಸಿದ್ಧಿಯವರು ಆರ್.ಎಸ್.ಎಸ್.ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಿತ್ತಾ ಬಂದವರು.
ಈ ಸಿದ್ಧಿ ಸಮುದಾಯ ಅರಣ್ಯಗಳಲ್ಲೇ ವಾಸಿಸಿ ಅರಣ್ಯ ರಕ್ಷಣೆಯಲ್ಲಿ ತೊಡಗಿಸಿಕೊಂಡ ಪುಟ್ಟ ಸಮುದಾಯ. ಈ ಸಮುದಾಯದಲ್ಲಿ ಶಾಲೆಗಳಿಗೆ ಹೋಗಿ ಅಕ್ಷರಸ್ಥರಾದವರ ಸಂಖ್ಯೆ ಕಡಿಮೆ. ಕಷ್ಟದ ಸಮಯದಲ್ಲೂ 7 ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಪ್ರತಿಭಾವಂತ ಇವರು. ಪದವಿಯ ನಂತರ ವನವಾಸಿಗಳ ನಡುವೆ ಕೆಲಸ ಮಾಡಲು ವನವಾಸಿ ಕಲ್ಯಾಣಾಶ್ರಮದ ಪೂರ್ಣಾವಧಿ ಕಾರ್ಯಕರ್ತರಾದರು. ಈ ಸಮಯದಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ವನವಾಸಿಗಳ ಕಲ್ಯಾಣದ ಬಗ್ಗೆ ಅಧ್ಯಯನ ನಡೆಸಿದ್ದರು.
ಶಿರಸಿ – ಯಲ್ಲಾಪುರ ನಡುವಿನ ಹಿತ್ಲಳ್ಳಿ ಗ್ರಾಮದಲ್ಲಿನ ಪುಟ್ಟ ಮನೆಯಲ್ಲಿ ನೆಲಸಿರುವ ಶಾಂತಾರಾಮ ಸಿದ್ಧಿ ಈ ಹಿಂದೆ ಪಶ್ಚಿಮ ಘಟ್ಟ ಕಾರ್ಯಪಡೆಯ ಸದಸ್ಯರಾಗಿದ್ದರು. ಇವರು ಕಾಲೇಜು ದಿನಗಳಿಂದ ಆರೆಸ್ಸೆಸ್ ಕಾರ್ಯಕರ್ತರಾಗಿದ್ದವರು.
—-
ಅನೇಕ ವರ್ಷಗಳಿಂದ ವನವಾಸಿ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಶಾಂತಾರಾಮ ಸಿದ್ದಿಯವರು ಸಿದ್ದಿ ಸಮುದಾಯದ ಪ್ರಥಮ ಪದವೀಧರ.ವನವಾಸಿಗಳ ಏಳ್ಗೆಗೆಗಾಗಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡ ಈ ಹಿರಿಯ ಕಾರ್ಯಕರ್ತರನ್ನು ಪಕ್ಷವು ಗುರುತಿಸಿರುವುದು ಸಂತಸವನ್ನು ತಂದಿದೆ.
ಗುರುಪ್ರಸಾದ ಹೆಗಡೆ
ಬಿಜೆಪಿ ಜಿಲ್ಲಾ ಕಾರ್ಯದರ್ಶಿ
ಉತ್ತರಕನ್ನಡ
—
ಶಾಂತಾರಾಮ ಸಿದ್ದಿಯವರು ಪಾರಂಪರಿಕ ವೈದ್ಯರನ್ನು ಗುರುತಿಸಿ
ಸಂಘಟಿಸಲು ಸಕ್ರೀಯವಾಗಿ ಸಹಕರಿಸಿದ್ದರು.ಈಗಾಗಲೇ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸರಕಾರ ಪಾರಂಪರಿಕ ವೈದ್ಯರನ್ನು ಸರಕಾರ ಗುರುತಿಸುವಂತೆ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಈಗ ಸಿದ್ದಿಯವರು ವಿಧಾನಪರಿಷತ್ ಗೆ ಹೋಗುತ್ತಿರುವುದರಿಂದ ನಮಗೆ ಇನ್ನೊಂದು ಗಟ್ಟಿ ಧ್ವನಿ ದೊರಕಿದಂತಾಯಿತು.
ವಿಶ್ವನಾಥ ಹೆಗಡೆ
ಪ್ರಧಾನ ಸಂಯೋಜಕರು
ಜನಪದ ಹಾಗೂ ಪಾರಂಪರಿಕ ವೈದ್ಯ ಸಂಘ
ಉತ್ತರಕನ್ನಡ
ಅಭಿನಂದನೆಗಳು ಶ್ರೀ ಶಾಂತಾರಾಮ್ ಸಿದ್ದಿಯವರಿಗೆ ಇವರು ಕಾಲೇಜು ದಿನಗಳಲ್ಲಿ ನನಗೆ ಪರಿಚಿತರಿರುವ ಪ್ರತಿಭಾನ್ವಿತ ಮಿತ್ರ ಹಾಗೂ ಅತ್ಯುತ್ತಮ ಕ್ರೀಡಾಪಟುವಾಗಿದ್ದರು. ಅವರಿಗೆ ಮತ್ತೊಮ್ಮೆ ಅಭಿನಂದನೆಗಳು. 👌👍👏👏👏👏👍🙏