ಮಂಗನಖಾಯಿಲೆಯಿಂದ ಮರಣ ಹೊಂದಿದವರಿಗೆ ದೊರಕಿದ ಪರಿಹಾರ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಂಗನಖಾಯಿಲೆಯಿಂದ ಮರಣ ಹೊಂದಿದ ಒಟ್ಟು ಆರು ಜನರ ಕುಟುಂಬಸ್ಥರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗುರುವಾರ ಪರಿಹಾರ ಮಂಜೂರಾದ ಆದೇಶ ಪ್ರತಿಯನ್ನು ವಿತರಿಸಿದರು.

2019 ರಲ್ಲಿ ಮಂಗನಖಾಯಿಲೆಯಿಂದ ಮೃತರಾದ 5 ಜನರಿಗೆ ಹಾಗೂ2020ರಲ್ಲಿ ಮೃತರಾದ ಒಬ್ಬರಿಗೆ ಮುಖ್ಯಮಂತ್ರಿ ವಿಶೇಷ ಪರಿಹಾರವೆಂದು ತಲಾ 2ಲಕ್ಷರೂ.ನ್ನು ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಕೆಎಂಎಪ್ ವತಿಯಿಂದ ಆಶಾಕಾರ್ಯಕರ್ತೆಯರಿಗೆ ನೀಡಲಾದ 3000ರೂ.ನ ಚೆಕ್ ನ್ನು ಕಾಗೇರಿಯವರು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿಯವರು,ಕಳೆದ ಎರಡು ವರ್ಷದಿಂದ ಮಂಗನಖಾಯಿಲೆ
ತಾಲೂಕಿನ ಜನರನ್ನು ಕಾಡುತ್ತಿದೆ ಮಂಗನಖಾಯಿಲೆಯಿಂದ ಮರಣ ಹೊಂದಿದವರಿಗೆ ಪರಿಹಾರ ನೀಡಬೇಕೆಂದು ಸತತವಾಗಿ ಪ್ರಯತ್ನಿಸಿ ಈಗ ಯಶಸ್ವಿಯಾಗಿದ್ದೇವೆ. ಪ್ರತಿಯೊಬ್ಬರ ಜೀವವು ಅಮೂಲ್ಯವಾಗಿದ್ದು ಬರುವ ವರ್ಷಗಳಲ್ಲಿ ಈ ಮಂಗನಖಾಯಿಲೆಯಿಂದ ಯಾರೂ ಮರಣ ಹೊಂದದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಕೊವಿಡ್ ಖಾಯಿಲೆಯಿಂದ ಆತಂಕದ,ಭಯದ ವಾತಾವರಣ ಮೂಡಿದೆ ಇದನ್ನುಎದುರಿಸುವಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯವರು ದುಡಿದಿದ್ದೀರಿ ಆದರೆ ಆರೋಗ್ಯ ಇಲಾಖೆಯ ಆಶಾಕಾರ್ಯಕರ್ತೆಯರು ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಮುಂಚೂಣಿಯಲ್ಲಿ ಕೆಲಸ ಮಾಡುವ ಮೂಲಕ ಸರಕಾರಕ್ಕೆ,ಸಮಾಜಕ್ಕೆ ಸೇವೆ ಸಲ್ಲಿಸಿದ್ದಿರಿ
ನಿಮ್ಮ ಹಲವು ಬೇಡಿಕೆಗಳ ಬಗ್ಗೆ ಪ್ರತಿಭಟನೆಯನ್ನು ಮಾಡುತ್ತಿದ್ದೀರಿ ಆದರೆ ನಮ್ಮ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಪ್ರತಿಭಟನೆ ಮಾಡಿದ್ದೀರಿ ಇದು ಆದರ್ಶದ ಕೆಲಸವಾಗಿದ್ದು ನಿಮ್ಮ ನ್ಯಾಯಯುತ ಬೇಡಿಕೆಯ ಬಗ್ಗೆ ಸರಕಾರದ ಜೊತೆಗೆ ಮಾತುಕತೆಯಾಡುತ್ತೇನೆ ಎಂದ ಭರವಸೆ ನೀಡಿದರು.

ಸಭೆಯಲ್ಲಿ ತಾಲೂಕುಪಂಚಾಯತ್ ಅಧ್ಯಕ್ಷ ಸುಧೀರ್ ಗೌಡರ್,ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ, ಹೆಗಡೆ,ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ
ತಹಸೀಲ್ದಾರ ಮಂಜುಳಾ ಭಜಂತ್ರಿ,ಕೆಎಂಎಪ ನಿರ್ದೇಶಕ ಪಿ.ವಿ.ನಾಯ್ಕ ಉಪಸ್ಥಿತರಿದ್ದರು.
ನಂತರ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪಟ್ಟಣದ ಹೊಸೂರು ತೋಟಗಾರಿಕಾ ಫಾರ್ಮನಲ್ಲಿ 45ಲಕ್ಷರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಸತಿ ಗೃಹದ ಅಡಿಗಲ್ಲು ಸಮಾರಂಭ ನೆರವೇರಿಸಿದರು.

About the author

Adyot

Leave a Comment