ಆದ್ಯೋತ್ ಸುದ್ದಿನೀಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಸೋಮವಾರ ಭೇಟಿ ನೀಡಿದ ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದರಲ್ಲದೆ ಕಡಲಕೊರೆತ ಪ್ರದೇಶವನ್ನು ವೀಕ್ಷಿಸೊದರು.
ಹೊನ್ನಾವರದ ಪಾವಿನಕುರ್ವೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಡಲಕೊರೆತದಿಂದ ಜನರು ಭೀತರಾಗಿದ್ದಾರೆ ಸಚೀವ ಶಿವರಾಮ ಹೆಬ್ಬಾರ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ಪರಿಹಾರ ಕಾರ್ಯಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಹೊನ್ನಾವರ ಪಟ್ಟಣದ ರಾಯಲಕೇರಿಯಲ್ಲಿ ಪಟ್ಟಣಪಂಚಾಯತ್ ಪೌರಕಾರ್ಮಿಕರಿಗಾಗಿ ಗೃಹಭಾಗ್ಯ ಯೋಜನೆಯಡಿಯಲ್ಲಿ ನಿರ್ಮಿಸಲಾದ ಜಿ+2ಗಳ 12 ಮನೆಯನ್ನು ಉದ್ಘಾಟಿಸಿದರು.
ನಂತರ ಕರ್ಕಿಯ ಹವ್ಯಕ ಸಭಾಭವನದಲ್ಲಿ ಆಯೋಜಿಸಲಾಗಿದ್ದ
ಸಭೆಯಲ್ಲಿ ಪಾಲ್ಗೊಂಡು 12 ಜನ ಪೌರ ಕಾರ್ಮಿಕರಿಗೆ ನೂತನ ಮನೆಗಳ ಪಟ್ಟಾ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮ ಹೆಬ್ಬಾರ,
ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ಪಟ್ಟಣದ ಸ್ವಚ್ಛತೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಪೌರ ಕಾರ್ಮಿಕರಿಗೆ ತಲಾ 7.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮನೆಗಳನ್ನು ನೀಡುತ್ತಿದ್ದೇವೆ. ಇದು ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದರು
ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ತಂದಾಗ ರಾಜಕೀಯ ಪ್ರೇರಿತ ಅಡ್ಡಗಾಲು ಹಾಕುವುದು ಸರಿಯಲ್ಲ. ಅಂಕೋಲಾದಲ್ಲಿ ನಿರ್ಮಿಸಲು ಉದೇಶಿಸಿರುವ ವಿಮಾನ ನಿಲ್ದಾಣಕ್ಕೆ ವಿರೋಧ ಮಾಡುವುದು ಸರಿಯಲ್ಲ ವಿಮಾನ ನಿಲ್ದಾಣ ನಿರ್ಮಿಸುವುದಕ್ಕೆ 12 ಸಾವಿರ ಹೆಕ್ಟೇರ್ ಜಾಗ ಬೇಕು. ಜಾಗ ಬಿಟ್ಟುಕೊಡುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರವೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗುತ್ತೇವೆ. ಜನರ ಸಮಸ್ಯೆಗೆ ನನ್ನ ಮೊದಲ ಆಧ್ಯತೆ ವಿಮಾನ ನಿಲ್ದಾಣ ಎರಡನೆಯದು ಹತ್ತು ಹಲವು ರಾಷ್ಟ್ರೀಯ ಯೋಜನೆಗೆ ಜಿಲ್ಲೆಯ ಜನರು ಮಹತ್ತರ ತ್ಯಾಗ ಮಾಡಿದ್ದಾರೆ ಎಂಬ ಅರಿವು ನನಗಿದೆ
ಹಿರಿಯರಾದ ಆರ್.ವಿ.ದೇಶಪಾಂಡೆ, ಜೆ.ಡಿ.ಎಸ್ ಪಕ್ಷದ ಆನಂದ ಅಸ್ನೋಟಿಕರ್ ಮುಂತಾದವರು ವಿಮಾನ ನಿಲ್ದಾಣ ನಿರ್ಮಾಣವನ್ನು ಸ್ವಾಗತಿಸಿದ್ದಾರೆ ಇದು ಒಳ್ಳೆಯ ಬೆಳವಣಿಗೆ. ಅಂಕೋಲಾ ನಾನು ಬೆಳೆದ ಊರಾಗಿರುವುದರಿಂದ ಅಲ್ಲಿನ ಜನರ ನಾಡಿಮಿಡಿತದ ಅರಿವಿದೆ. ಜನರ ಮನವೊಲಿಸಿ ಯೋಜನೆಯನ್ನು ಕಾರ್ಯಗತಗೊಳಿಸುವ ವಿಶ್ವಾಸವಿದೆ ಎಂದು ಹೇಳಿದ ಶಿವರಾಮ ಹೆಬ್ಬಾರ್,ಒಂದು ಹಂತದಲ್ಲಿ ಕೊವಿಡ್ ನಿಯಂತ್ರಣಕ್ಕೆ ಪರ್ಯಾಯ ದಾರಿಗಳು ಕಾಣದಿದ್ದಾಗ ಲಾಕ್ ಡೌನ್ ಘೋಷಿಸಲಾಯಿತು ಇದರಿಂದ ಬಡವ-ಬಲ್ಲಿದ ಸೇರಿದಂತೆ ದೇಶದ ಪ್ರತಿ ಪ್ರಜೆಯೂ ನಷ್ಟ ಅನುಭವಿಸಿದರು ಮುಂದಿನ ದಿನಗಳಲ್ಲಿ ಲಾಕ್ ಡೌನ್ ಮಾಡುವುದಿಲ್ಲ ಆರೋಗ್ಯ ಇಲಾಖೆಯ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊವಿಡ್ ನಿಯಂತ್ರಣಕ್ಕೆ ತರಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ, ಕ್ಷೇತ್ರದಲ್ಲಿ ತನ್ನ ಅವಧಿಯಲ್ಲಿ ತಂದ ಯೋಜನೆಗಳನ್ನು ಪ್ರಸ್ಥಾಪಿಸಿ ಹೊನ್ನಾವರ ನೂತನ ಬಸ್ನಿಲ್ದಾಣ ಕಾಮಗಾರಿ, ಶರಾವತಿ ಕುಡಿಯುವ ನೀರಿನ ಯೋಜನೆಗಳು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರ ಪಡೆದು ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತೇನೆ ಎಂದರು.
Hey There. I found your blog using msn. This is a really well written article.
I will be sure to bookmark it and come back to read more of your useful info.
Thanks for the post. I will certainly return.
Also visit my blog :: Buy CBD