ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಇಬ್ಬರು ಅಂಗನವಾಡಿ ಶಿಕ್ಷಕಿಯರು ಹಾಗೂ ಒಬ್ಬರು ಆಶಾಕಾರ್ಯಕರ್ತೆ ಸೇರಿದಂತೆ ಒಟ್ಟೂ 7 ಕೊವಿಡ್ ಪ್ರಕರಣಗಳು ಸೋಮವಾರ ದಾಖಲಾಗಿದೆ.
ಕೊವಿಡ್ ಪ್ರಕರಣ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಇಷ್ಟು ಪ್ರಕರಣ ದಾಖಲಾಗಿದ್ದು ಇದೇ ಪ್ರಥಮವಾಗಿದೆ.ಅಲ್ಲದೆ ಕೊವಿಡ್ ವಾರಿಯರ್ಸ ಆದ ಆಶಾಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇಲ್ಲಿಯವರೆಗೆ ತಾಲೂಕಿನಲ್ಲಿ 45 ಕೊವಿಡ್ ಪ್ರಕರಣಗಳು ದಾಖಲಾಗಿದ್ದು 13 ಸಕ್ರೀಯ ಕೊವಿಡ್ ಪ್ರಕರಣ ಹಾಲಿ ಇದೆ.
ಪಟ್ಟಣದ ಹಾಳದಕಟ್ಟಾದಲ್ಲಿ-1,ತಾಲೂಕಿನ ಕಾನಗೋಡ-1,ಇಟಗಿ-1,ಗೋಳಗೋಡ-1,ಕಲ್ಯಾಣಪುರ-1,ಅರೆಂದೂರು-2 ಪ್ರಕರಣಗಳು ಸೋಮವಾರ ದಾಖಲಾಗಿದೆ.