ಆದ್ಯೋತ್ ಸುದ್ದಿನಿಧಿ:
ಗದಗ ನಗರದಲ್ಲಿ ಅಗಸ್ಟ್15ರಂದು 74ನೇ ಸ್ವಾತಂತ್ರ್ಯೋತ್ಸವದ ಸಂದಭ೯ದಲ್ಲಿ “ನಾ ಅದೀನಿ” ಕಿರುಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.
ಚಿನ್ಮಯಗಾಯಿತ್ರಿ ಕೃಿಯೇಷನ್ಸ ಬ್ಯಾನರ್ ನಡಿ ನಿಮಾ೯ಣವಾಗುತ್ತಿರುವ ‘ನಾ ಅದೀನಿ‘ ಕನ್ನಡ ಕಿರುಚಿತ್ರದ
ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಗದಗ ಜಿಲ್ಲಾ ರಾಜ್ಯ ಸಕಾ೯ರಿ ನೌಕರರ ಸಂಘದ ಅಧ್ಯಕ್ಷ ರವಿ ಗುಂಜೀಕರ,ಗೀತ, ಸಾಹಿತ್ಯ, ನಾಟಕ, ಜನಪದ ಸೇರಿದಂತೆ ಅನೇಕ ಕಲೆಗಳಿಗೆ ಗದಗ ಜಿಲ್ಲೆ ಮೂಲಸೆಲೆಯಾಗಿದೆ. ನಗರದ ಕಲಾವಿದರು, ತಂತ್ರಜ್ಞರು ಹಾಗೂ ಆಸಕ್ತರು ಸೇರಿ ನಾ ಅದೀನಿ ಕಿರುಚಿತ್ರ ನಿಮಿ೯ಸುತ್ತಿರುವುದು ಸಂತಸದ ಸಂಗತಿ. ಕಲೆಗೆ ಹೆಚ್ಚು ಪ್ರೋತ್ಸಾಹ ಇರುವ ಗದಗ ನಗರದಲ್ಲಿ ಚಿತ್ರ ನಿಮಾ೯ಣ ಚಟುಟಿಕೆಗಳು ಹೆಚ್ಚಲಿ ಎಂದರು.
ಗದಗ ಜಿಲ್ಲಾ ವಿಶ್ವಕಮ೯ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ್ ಡಿ ಕಡ್ಲಿಕೊಪ್ಪ ಮಾತನಾಡಿ, ಕಲೆಯ ತವರೂರಲ್ಲಿ ಕಿರಿಯದಿರಲಿ ಹಿರಿಯದಿರಲಿ ಚಲನಚಿತ್ರಗಳು ನಿಮಾ೯ಣವಾಗಲಿ. ಚಿತ್ರ ಯಶಸ್ವಿ ಆಗಲಿ ಎಂದು ಹಾರೈಸಿದರು.
ನಿದೇ೯ಶಕರಾದ ಬಿ. ಮೌನೇಶ, ಛಾಯಾಗ್ರಹಣ ಹಾಗೂ ಸಂಕಲನಕಾರರಾದ ಚಂದ್ರಯ್ಯ ಗುಡ್ಡಿಮಠ, ಉಮೇಶ ಸಜ್ಜನ, ಸಹ ನಿರ್ದೇಶಕರಾದ ಮಹೇಶಆಚಾಯ೯, ಕಲೆ ಹಾಗೂ ಪ್ರಚಾರ ಹೊಣೆಹೊತ್ತ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ, ನಿಮಾ೯ಣ ಮೇಲ್ವಿಚಾರಕರಾದ ಸುನೀಲಸಿಂಗ್ ಲದ್ದಿಗೇರಿ, ಸ್ನೇಹ ಬಂಧು ಗೆಳೆಯರ ಬಳಗದ ಅಶೋಕ ಹಾದಿಮನಿ, ರಾಚಯ್ಯ ಹೊಸಮಠ, ಖಾಜಾಸಾಬ ಬೂದಿಹಾಳ, ಕಬಾಡಿ ಸರ್, ಹಷಾ೯ ಮಳೇಕರ, ಬುಡ್ಡಾಸಾಬ ಆಲೂರ, ಅರವಿಂದ ಹಬೀಬ ಮುಂತಾದವರು ಪಾಲ್ಗೊಂಡಿದ್ದರು.