ರಾಜ್ಯಸರಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಆದ್ಯೋತ್ ಸುದ್ದಿನಿಧಿ:
ರಾಜ್ಯಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಉತ್ತರಕನ್ನಡ ಜಿಲ್ಲೆಯಾದ್ಯಂತ ರಾಜೀವ್ ಗಾಂಧಿ ಜನ್ನ ದಿನ ಹಾಗೂ ದೇವರಾಜ ಅರಸ ಜನ್ಮದಿನವಾದ ಗುರುವಾರ ಕಾಂಗ್ರೆಸ್
ಪ್ರತಿಭಟನೆ ನಡೆಸಿತು.

ಸಿದ್ದಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ನೇತೃತ್ವದಲ್ಲಿ,ಬಿಜೆಪಿ ಸರಕಾರ ತಂದಿರುವ ರೈತವಿರೋಧಿ ಭೂಸುಧಾರಣಾ ತಿದ್ದುಪಡಿ,ಎಪಿಎಂಸಿ ಕಾಯ್ದೆ ತಿದ್ದುಪಡಿ,ಕಾರ್ಮಿಕ ವಿರೋಧಿಕಾಯ್ದೆ ಇತ್ಯಾದಿಗಳನ್ನು ಹಿಂಪಡೆಯಬೇಕು ಹಾಗೂ ಕೊವಿಡ್ ನಿಯಂತ್ರಣದಲ್ಲಿ ನಡೆಯುತ್ತಿರುವ ವ್ಯಾಪಕ ಬ್ರಷ್ಟಾಚಾರದ ವಿಷಯದಲ್ಲಿ ಉಚ್ಚನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಮಂಜುಳಾ ಭಜಂತ್ರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ,ಶಿರಸಿ-ಸಿದ್ದಾಪುರ ವಿದಾನಸಭಾ ಕ್ಷೇತ್ರದ ವೀಕ್ಷಕಿ ಸುಷ್ಮಾ ರಾಜಗೋಪಾಲ ರೆಡ್ಡಿ,ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಜನಸಾಮನ್ಯರನ್ನು ಶೋಷಣೆ ಮಾಡುತ್ತಿದ್ದು ಕೊವಿಡ್ ಹೆಸರಿನಲ್ಲಿ ಸಾವಿರಾರು ಕೋಟಿರೂ.ಲೂಟಿ ಹೊಡೆಯುತ್ತಿದೆ.
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೂಲಿಕಾರ್ಮಿಕರು,ರಿಕ್ಷಾ,ಟೆಂಪೋಚಾಲಕರು,ಸಣ್ಣ-ಪುಟ್ಟ ವ್ಯಾಪಾರ ಮಾಡುವವರು ಕೊವಿಡ್‍ನಿಂದ ತೊಂದರೆಗೊಳಗಾಗಿದ್ದಾರೆ.ತೊಂದರೆಗೊಳಗಾದವರ ಸಹಾಯಕ್ಕೆ ಸ್ಥಳೀಯ ಶಾಸಕರಾಗಲಿ,ಸಂಸದರಾಗಲಿ ಬಂದಿಲ್ಲ.ಉಸ್ತುವಾರಿ ಸಚೀವರು ವಿತರಣೆ ಮಾಡಿರುವ ಆಹಾರದ ಕಿಟ್ ಕೇವಲ ಬಿಜೆಪಿ ಬೆಂಬಲಿತರಿಗೆ ಸೀಮಿತವಾಗಿರುವುದು ವಿಪರ್ಯಾಸವಾಗಿದೆ. ಅಲ್ಲದೆ ಅದು ಸರಕಾರದಿಂದ ವಿತರಣೆ ಮಾಡಿರುವ ಕಿಟ್ ಆದರೆ ಸಚೀವರು ತಾನು ವಿತರಣೆ ಮಾಡಿದ್ದು ಎನ್ನುತ್ತ ಓಡಾಡುತ್ತಿದ್ದಾರೆ ಎಂದು ಹೇಳಿದರು.

ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ,ದೇಶದ ಕೆಲವು ರಾಜ್ಯಗಳಲ್ಲಿ ಅತಿಕಡಿಮೆ ವೆಚ್ಚದಲ್ಲಿ ವೆಂಟಿಲೆಟರ್ ಸೇರಿದಂತೆ ಕೊವಿಡ್ ಚಿಕಿತ್ಸೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಿದ್ದರೆ ನಮ್ಮ ರಾಜ್ಯದ ಬಿಜೆಪಿ ಸರಕಾರ ಎರಡು ಲಕ್ಷರೂ.ವೆಚ್ಚದ ವೆಂಟಿಲೆಟರ್‍ಗೆ 18ಲಕ್ಷರೂ. ಕೊಟ್ಟು ಖರೀದಿಸುತ್ತಿದೆ. ಒಟ್ಟೂ4065ಲಕ್ಷ ಕೋಟಿರೂ.ಖರ್ಚು ಮಾಡಿದ್ದೆನೆಂದು ಹೇಳುವ ಸರಕಾರ ಅದರಲ್ಲಿ 2000ಕೋಟಿರೂ. ಬ್ರಷ್ಟಾಚಾರಿಗಳಿಗೆ ಸೇರಿದೆ ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಲು ಯಡಿಯೂರಪ್ಪ ಹಿಂದೇಟು ಹಾಕುತ್ತಿದ್ದಾರೆ. ನಮ್ಮ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಳೆದ 25ವರ್ಷದಿಂದ ಅಧಿಕಾರ ಅನುಭವಿಸುತ್ತಿದ್ದಾರೆ ಆದರೆ ತಾಲೂಕಿನ ಯಾವುದೇ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ.ಕಂದಾಯ,ಅರಣ್ಯ,ಆರೋಗ್ಯ ಇಲಾಖೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಅನುದಾನ ಬಂದರೂ ಲೊಕೋಪಯೋಗಿ ಇಲಾಖೆ ರಸ್ತೆಗಳ ಹೊಂಡ ಮುಚ್ಚುತ್ತಿಲ್ಲ ಶಾಸಕರು ಅಧಿಕಾರಿಗಳ ಪರವಾಗಿ ಮಾತನಾಡುತ್ತಾರೆ ರೈತರ ಗೋಳಂತೂ ಮುಗಿಲು ಮುಟ್ಟಿದೆ ಅವರ ಸಮಸ್ಯೆ ಆಲಿಸುವ ಶಾಸಕರೇ ಇಲ್ಲವಾಗಿದೆ. ಜನರ ಸಮಸ್ಯೆ ಬಗ್ಗೆ ಲಕ್ಷಕೊಡದೆ ಸಂಸದರು ಯಾರು ಯಾರನ್ನೋ ದೇಶದ್ರೋಹಿಗಳು ಎಂದು ಹೇಳುತ್ತಾ ಬಾಯಿಚಪಲ ತೀರಿಸಿಕೊಳ್ಳುತ್ತಿದ್ದಾರೆ ಇಂತಹವರನ್ನು ಆಯ್ಕೆ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.

ಮಾಜಿ ಜಿಪಂ ಸದಸ್ಯ ವಿ.ಎನ್.ನಾಯ್ಕ,ಎಸ್.ಆರ್.ಹೆಗಡೆ ಕುಂಬಾರಕುಳಿ,ಸಿ.ಆರ್.ನಾಯ್ಕ,ಎನ್.ಡಿ.ನಾಯ್ಕ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಸುಮಂಗಲಾ ನಾಯ್ಕ, ಡಿಸಿಸಿ ಕಾರ್ಯದರ್ಶಿ ಸಾವೇರ್ ಡಿಸಿಲ್ವಾ,ತಾಪಂ ಸದಸ್ಯ ನಾಸೀರ್ ವಲ್ಲಿಖಾನ್,ವಿವೇಕ ಭಟ್ಟ,ಚಂದ್ರಕಾಂತ ನಾಯ್ಕ,ಮುಂತಾದವರು ಭಾಗವಹಿಸಿದ್ದರು.
*******
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಶಿರಸಿಯಲ್ಲಿ ಜನಧ್ವನಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದಿ.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ದಿ.ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನಾಚರಣೆಯ ಪ್ರಯಕ್ತ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಹಾನ್ ವ್ಯಕ್ತಿಗಳ ಭಾವಚಿತ್ರಗಳಿಗೆ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್ ಪುಷ್ಪನಮನ ಸಲ್ಲಿಸುವುದರೊಂದಿಗೆ ಜನಧ್ವನಿ ಪ್ರತಿಭಟನೆಗೆ ಚಾಲನೆ ನೀಡಿದರು.

ಬ್ಲಾಕ್ ಅಧ್ಯಕ್ಷ ಜಗದೀಶ ಗೌಡ,ಪ್ರಧಾನ ಕಾರ್ಯದರ್ಶಿ ಎಸ್ ಕೆ ಭಾಗವತ್,ಸೂರ್ಯಪ್ರಕಾಶ ಹೊನ್ನಾವರ, ಬ್ಲಾಕ್ ಮಾಜಿ ಅಧ್ಯಕ್ಷ ರಮೇಶ ದುಭಾಶಿ,ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಬ್ಬಾಸ್ ತೋನ್ಸೆ,ಮಾಧ್ಯಮ ವಕ್ತಾರ ದೀಪಕ್ ಹೆಗಡೆ,ಜಿಲ್ಲಾ ಪಂಚಾಯತ ಸದಸ್ಯ ಜಿ ಎನ್ ಹೆಗಡೆ ಮುರೇಗಾರ,ಕಾರ್ಯದರ್ಶಿ ಸತೀಶ್ ನಾಯ್ಕ್,ಮುಖಂಡರಾದ ಎಚ್ ಯು ಪಠಾಣ್,ಮಾಧವ ರೇವಣಕರ್,ಗಾಯತ್ರಿ ನೇತ್ರೇಕರ್,ಮಹಿಳಾ ಅಧ್ಯಕ್ಷೆ ಗೀತಾ ಶೆಟ್ಟಿ, ತಾರಾ ನಾಯ್ಕ್,ನಗರಸಭಾ ಸದಸ್ಯರಾದ ವನಿತಾ ಶೆಟ್ಟಿ,ಶಮೀಮ್ ಬಾನು ಶಿಕಾರಿಪುರ, ಪ್ರದೀಪ್ ಶೆಟ್ಟಿ, ದಯಾನಂದ ನಾಯಕ,ಪ್ರಮುಖರಾದ ಶಂಕರ ಗುಡ್ಡದಮನೆ,ಶಾಂತಾರಾಮ ನಾಯ್ಕ್,ವಿನಾಯಕ ಹೊಸಪಟ್ಟಣ,ಮುಕ್ತೇಶ ಗೌಡ,ಶ್ರೀಧರ ನಾಯ್ಕ್,ಶ್ರೀನಿವಾಸ ನಾಯ್ಕ್,ಖಲೀಲ್ ಗೌಡಳ್ಳಿ, ಅಜರುದ್ದೀನ್ ಮೂಸಾ,ಪ್ರದೀಪ್ ವಿ ಉಪಸ್ಥಿತರಿದ್ದರು

About the author

Adyot

Leave a Comment