ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ ಫೋನ್ ವಿತರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಂಗನವಾಡಿ ಕಾರ್ಯಕರ್ತೆಯರಿಗೆ,ಮೇಲ್ವಿಚಾರಕರಿಗೆ ಸುಮಾರು ಹತ್ತುಸಾವಿರರೂ. ಮೌಲ್ಯದ ಸ್ಮಾರ್ಟ ಫೋನ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,
ಮಕ್ಕಳ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಕೇಂದ್ರಸರಕಾರ ಪೋಷಣ ಅಭಿಯಾನವನ್ನು ಪ್ರಾರಂಭಿಸಿದೆ.
ಇದರ ಅಂಗವಾಗಿಅಂಗನವಾಡಿ ವ್ಯವಸ್ಥೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟಫೋನ್ ವಿತರಿಸಲಾಗುತ್ತಿದೆ. ಇದು ಮಕ್ಕಳ ಶೈಕ್ಷಣಿಕ ಚಟುವಟಿಕೆಗಾಗಿ ನೀಡುತ್ತಿರುವ ಸಾಧನವಲ್ಲ ಇದು ಆಡಳಿತಾತ್ಮಕ ಅನುಕೂಲಕ್ಕಾಗಿ ನೀಡುತ್ತಿರುವುದು. ಈ ಸ್ಮಾರ್ಟಫೋನ್ ನಿಮ್ಮ ಮಕ್ಕಳಿಗಾಗಲಿ,ಅಂಗನವಾಡಿ ಮಕ್ಕಳಿಗಾಗಲಿ ಸಿಗುವಂತೆ ಇಡಬೇಡಿ, ಮಕ್ಕಳು ಬಾಲ್ಯದಲ್ಲೇ ಮೊಬೈಲ್,ಟಿ.ವಿ. ಗೀಳು ಹಚ್ಚುವುದು ಸರಿಯಲ್ಲ ಎಂದು ಹೇಳಿದ ಕಾಗೇರಿ,ಕೊವಿಡ್ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಕೆಲಸವನ್ನು ಮಾಡಿದ್ದಾರೆ ಅವರ ಸಮಸ್ಯೆಗಳ ಬಗ್ಗೆ ರಾಜ್ಯಸರಕಾರ,ಕೇಂದ್ರಸರಕಾರಗಳಿಗೆ ಅರಿವಿದೆ
ಎಂದು ಹೇಳಿದರು.

ತಾಪಂ ಅಧ್ಯಕ್ಷ ಸುಧೀರ್ ಗೌಡರ್ ಅಧ್ಯಕ್ಷತೆವಹಿಸಿದ್ದರು.ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ,ಎಂ.ಜಿ.ಹೆಗಡೆ ಗೆಜ್ಜೆ,ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ನಂತರ ಸಿದ್ದಾಪುರ ಪ್ರವಾಸಿ ಮಂದಿರದಲ್ಲಿ ವಿವಿಧ ಅಧಿಕಾರಿಗಳ ಸಭೆ ನಡೆಸಿದ ಕಾಗೇರಿಯವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮನೆ ಹಾನಿಯಾದಾಗ ಕಡಿಮೆ ಮೊತ್ತವನ್ನು ಅಂದಾಜಿಸಿ ಜನರಿಗೆ ತೊಂದರೆಯಾದರೆ ಅದಕ್ಕೆ ಜಿಪಂ ಇಂಜನೀಯರ್ ಗಳನ್ನೆ ಹೊಣೆ ಮಾಡುತ್ತೇನೆ ಕಾನೂನಿನ ಮಿತಿಯೊಳಗೆ ಹೆಚ್ಚುಪರಿಹಾರ ದೊರಕುವಂತಾಗಬೇಕು ಇಲ್ಲವಾದರೆ ನಿರ್ದಾಕ್ಷಣ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅನುದಾನ ದೊರೆತು ಸಮಸ್ಯೆ ಬಗೆಹರಿದಿದ್ದರೂ ಲೊಕೋಪಯೋಗಿ ಇಲಾಖೆಯವರು ರಸ್ತೆಗಳಲ್ಲಿ ಬಿದ್ದಿರುವ ಹೊಂಡವನ್ನು ಮುಚ್ಚುತ್ತಿಲ್ಲ ಎಂದು ಇಂಜನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡರು‌
ಕೊವಿಡ್ ಖಾಯಿಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ,
ಮಾತನಾಡುವಾಗ ಏನೇನೋ ಸಲ್ಲದ್ದನ್ನು ಹೇಳುತ್ತಾರೆ ಇದೊಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು ಮಾರಣಾಂತಕವೂ ಆಗಿದೆ
ಸರಕಾರ ನೀಡಿರುವ ಮಾರ್ಗದರ್ಶನವನ್ನು ಕಡ್ಡಾಯವಾಗಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕಾಗೇರಿ ಹೇಳಿದರು.

ಸಭೆಯಲ್ಲಿ ಜಿಪಂಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ,ಎಂ.ಜಿ.ಹೆಗಡೆ ಗೆಜ್ಜೆ,ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ,ತಹಸೀಲ್ದಾರ ಮಂಜುಳಾ ಭಜಂತ್ರಿ,ತಾಪಂ ಮುಖ್ಯಕಾರ್ಯದರ್ಶಿ ಪ್ರಶಾಂತ ರಾವ್,ಪಪಂ
ಮುಖ್ಯಾಧಿಕಾರಿ ಕುಮಾರ ನಾಯ್ಕ,ಸಿಪಿಐ ಪ್ರಕಾಶ ಮುಂತಾದವರು ಉಪಸ್ಥಿತರಿದ್ದರು‌

About the author

Adyot

Leave a Comment