ಅಪಾಯಕ್ಕೆ ಹತ್ತಿರವಿರುವ ಕೊವಿಡ್ ವಾರಿಯಸ್೯ “ಪ್ರಯೋಗ ತಂತ್ರಜ್ಞರು”

,ಆದ್ಯೋತ್ ಸುದ್ದಿನಿಧಿ:
ದೇಶಾದ್ಯಂತ ಕೊವಿಡ್ ಸಾಂಕ್ರಾಮಿಕ ರೋಗ ಹರಡಲು ಪ್ರಾರಂಭವಾಗಿ ಸುಮಾರು ಆರು ತಿಂಗಳು ಕಳೆದಿದ್ದು. ಕೊವಿಡ್ ಕ್ವಾರೆಂಟೆನ್,ಐಸೋಲೇಷನ್,ಲಾಕ್ ಡೌನ್,ಸೀಲ್ ಡೌನ್ ಗಳಲ್ಲಿ ಹಂತ ಹಂತವಾಗಿ ಸಾಕಷ್ಟು ಬದಲಾವಣೆಗಳಾಗಿವೆ.
ಆದರೆ ಕೊವಿಡ್ ಕಂಡು ಹಿಡಿಯುವ ವಿಧಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸಾಮಾನ್ಯವಾಗಿ ಮನುಷ್ಯನಿಗೆ ಬರುವ ಖಾಯಿಲೆಯನ್ನು ರಕ್ತಪರೀಕ್ಷೆ,ಮೂತ್ರಪರೀಕ್ಷೆ ಮೂಲಕ ಕಂಡುಹಿಡಿಯುತ್ತಾರೆ.ಆದರೆ ಕೊವಿಡ್ ಕಂಡುಹಿಡಿಯುವ ಏಕೈಕ ಹಾಗೂ ಖಚಿತ ಪರೀಕ್ಷೆ ಎಂದರೆ ಗಂಟಲು ದ್ರವದ ಪರೀಕ್ಷೆ.ಇತ್ತೀಚೆಗೆ ಮೂಗಿನ ಹಾಗೂ ಕಿವಿಯ ದ್ರವದ ಪರೀಕ್ಷೆಯನ್ನೂ ಮಾಡುತ್ತಿದ್ದಾರೆ.
ಈ ಗಂಟಲುದ್ರವವನ್ನು ಪರೀಕ್ಷೆ ಮಾಡುವವರು ಪ್ರಯೋಗಶಾಲಾ ತಂತ್ರಜ್ಞರು.
ಇದು ಅಪಾಯಕ್ಕೆ ತೀರಾ ಹತ್ತಿರವಾಗಿದ್ದು ಸ್ವಲ್ಪ ನಿರ್ಲಕ್ಷಿಸಿದರು ಪ್ರಯೋಗಶಾಲಾ ತಂತ್ರಜ್ಞರು ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಲಿದ್ದಾರೆ.ಸರಕಾರಿ ವ್ಯವಸ್ಥೆಯಲ್ಲಿ ನೀಡುವ ಪಿಪಿಕಿಟ್,ಮಾಸ್ಕ್ ಇತ್ಯಾದಿ ಸಲಕರಣೆಗಳ ಗುಣಮಟ್ಟ ಹೇಳುವ ಹಾಗಿಲ್ಲ ಇದರಿಂದಾಗಿಯೇ ರಾಜ್ಯದಲ್ಲಿ 100ಕ್ಕೂ ಹೆಚ್ಚು ಪ್ರಯೋಗಶಾಲಾ ತಂತ್ರಜ್ಞರಲ್ಲಿ ಕೊವಿಡ್ ಕಾಣಿಸಿಕೊಂಡಿದೆ ಗುಲ್ಬುರ್ಗ ಮತ್ತು ಶಿವಮೊಗ್ಗದಲ್ಲಿ ತಲಾ ಒಬ್ಬರಂತೆ ಕೊವಿಡ್ ನಿಂದಾಗಿ ಮರಣ ಹೊಂದಿದ್ದಾರೆ.

ಕೊವಿಡ್ ವಾರಿಯಸ್೯ ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವುದು ಆಶಾ ಕಾರ್ಯಕರ್ತೆಯರು,ಪೊಲೀಸ್ ರು,ಆರೋಗ್ಯ ಕಾರ್ಯಕರ್ತೆಯರು,ವೈದ್ಯರು,ಕಂದಾಯ ಇಲಾಖೆಯವರು,ಗ್ರಾಪಂ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು.
ಸರಕಾರವಾಗಲಿ,ಮಾದ್ಯಮದವರಾಗಲಿ,ಸಾರ್ವಜನಿಕರಾಗಲಿ ಕೊವಿಡ್ ವಾರಿಯಸ್೯ ಎಂದು ಇವರನ್ನೆ ಗುರುತಿಸುತ್ತಾರೆ ಆದರೆ ಪ್ರಯೋಗಶಾಲಾ ತಂತ್ರಜ್ಞರು ಇವರೆಲ್ಲರಿಗಿಂತ ಪ್ರಮುಖ ಕೊವಿಡ್ ವಾರಿಯಸ್೯ ಆಗಿದ್ದು ಅಪಾಯಕಾರಿ ಕೆಲಸವನ್ನು ಮಾಡುತ್ತಾರೆ.ಉಳಿದ ಕೊವಿಡ್ ವಾರಿಯಸ್೯ ರೋಗಿಯಿಂದ,ಶಂಕಿತರಿಂದ, ಅಂತರವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸಬಹುದು ಆದರೆ ಇವರು ಹಾಗೆ ಮಾಡುವಂತಿಲ್ಲ ರೋಗಿಯನ್ನು ಸಂಪರ್ಕಿಸಿಯೇ ಕೆಲಸ ಮಾಡಬೇಕಾಗುತ್ತದೆ.
ಇದು ಅಪಾಯಕಾರಿಯಾಗಿದ್ದರೂ ಅನಿವಾರ್ಯವಾಗಿದೆ.
ರಾಜ್ಯದಲ್ಲಿ ಸುಮಾರು 2600 ಪ್ರಯೋಗಶಾಲಾ ತಂತ್ರಜ್ಞರಿದ್ದಾರೆ ಇವರಲ್ಲಿ ಸುಮಾರು 800 ಜನರು ವಿವಿಧ ಯೋಜನೆಗಳಿಡಿಯಲ್ಲಿ ನೇಮಕವಾದವರು ಇವರೆಲ್ಲರ ಕೆಲಸ ಒಂದೇ ಆದರೆ ವೇತನದಲ್ಲಿ ಮಾತ್ರ ತೀವ್ರ ತಾರತಮ್ಯವಿರುವುದು ಕಂಡುಬರುತ್ತದೆ.

ಇತ್ತೀಚೆಗೆ ಕೊವಿಡ್ ವಾರಿಯಸ್೯ ಎಂದು ನೇಮಕಗೊಂಡವರಿಗೆ ಸುಮಾರು20000ರೂ. ಸಂಬಳವಿದ್ದರೆ,ಎನ್.ಎಚ್.ಎಮ್. ಯೋಜನೆಯಡಿ ನೇಮಕಗೊಂಡವರಿಗೆ 13000ರೂ. ಹಾಗೂ ಹೊರಗುತ್ತಿಗೆಯ ಮೇಲೆ ನೇಮಕಗೊಂಡವರಿಗೆ 9000ರೂ. ಸಂಬಳವಿದೆ.
ಆರೋಗ್ಯ ಇಲಾಖೆಯ ಕೆಲವು ಸಿಬ್ಬಂದಿಗಳಿಗೆ ರಿಸ್ಕ್ ಅಲೆಯನ್ಸ್ ನೀಡಲಾಗುತ್ತದೆ.ಆದರೆ ಪ್ರಯೋಗಶಾಲಾ ತಂತ್ರಜ್ಞರಿಗೂ ಈ ಸೌಲಭ್ಯ ನೀಡಬೇಕು ಎಂಬುದು ಪ್ರಯೋಗಶಾಲಾ ತಂತ್ರಜ್ಞರ ಆಗ್ರಹವಾಗಿದೆ.

ಅಲ್ಲದೆ ಕೆಲವು ಯೋಜನೆಗಳ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ಪ್ರಯೋಗಶಾಲಾ ತಂತ್ರಜ್ಞರನ್ನು ಖಾಯಂಗೊಳಿಸಬೇಕು.ಕನಿಷ್ಠ ಎಲ್ಲರಿಗೂ ಸಮಾನ ವೇತನ ಹಾಗೂ ಸರಕಾರದಿಂದ ಸಿಗುವ ಸೌಲಭ್ಯವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೊವಿಡ್ ಪರೀಕ್ಷೆಯನ್ನು ಹೆಚ್ಚು ಮಾಡುವಂತೆ ಸರಕಾರ ಒತ್ತಡ ಹೇರುತ್ತಿದೆ.ಇದರಿಂದ ಆಸ್ಪತ್ರೆಯಿಂದ ಹೊರಬಂದು ಗ್ರಾಮಗಳಿಗೆ ತೆರಳಿ ಪರೀಕ್ಷೆ ಮಾಡಲಾಗುತ್ತಿದೆ.ಗಂಟಲು ದ್ರವ ಪರೀಕ್ಷೆ ಮಾಡುವಾಗ ಪಿಪಿಕಿಟ್ ಧರಿಸಲಾಗುತ್ತದೆ.ಒಮ್ಮೆ ಧರಿಸಿದರೆ 4050 ಜನರನ್ನು ಪರೀಕ್ಷಿಸಲಾಗುತ್ತದೆ ಇಷ್ಟು ಜನರ ಪರೀಕ್ಷೆ ಮಾಡಲು 5 ಗಂಟೆ ಬೇಕಾಗುತ್ತದೆ. ಅಲ್ಲಿಯವರೆಗೆ ಇವರು ಪಿಪಿಕಿಟ್ ಧರಿಸಿಕೊಂಡೇ ಇರಬೇಕಾಗುತ್ತದೆ.ಒಮ್ಮೆ ಪಿಪಿಕಿಟ್ ನಿಂದ ಹೊರಬಂದರೆ ಪುನಃ ಕಿಟನ್ನು ಧರಿಸುವಂತಿಲ್ಲ.ಪಿಪಿಕಿಟ್ ಕೊರತೆ ಇರುವುದರಿಂದ ಪ್ರಯೋಗಶಾಲಾ ತಂತ್ರಜ್ಞರು
ತೊಂದರೆಯಾಗುತ್ತಿದ್ದರೂ
5 ಗಂಟೆ ಪಿಪಿಕಿಟ್ ಧರಿಸಿಕೊಂಡಿರುತ್ತಾರೆ.
****
ಸರಕಾರವಾಗಲಿ,ಮಾದ್ಯಮದವರಾಗಲಿ ಪ್ರಯೋಗಶಾಲಾ ತಂತ್ರಜ್ಞರನ್ನು ಮಂಚೂಣಿಯಲ್ಲಿರುವ ಕೊವಿಡ್ ವಾರಿಯಸ್೯ ಎಂದು ಪರಿಗಣಿಸುತ್ತಿಲ್ಲ ಇದು ನಮಗೆ ಬೇಸರ ಮೂಡಿಸುತ್ತಿದೆ ಉಳಿದವರಿಗಿಂತ ಹೆಚ್ಚು ಅಪಾಯಕಾರಿ ಕೆಲಸವನ್ನು ನಾವು ಮಾಡುತ್ತಿದ್ದೆವೆ.ಇಲ್ಲಿಯವರೆಗೆ ರಾಜ್ಯದಲ್ಲಿ ಸುಮಾರು 26ಲಕ್ಷಕ್ಕೂ ಹೆಚ್ಚು ಗಂಟಲು ದ್ರವವನ್ನು ಪರೀಕ್ಷಿಸಲಾಗಿದೆ ಖಾಸಗಿಯವರು ಶೇ.10ರಷ್ಟನ್ನು ಖಾಸಗಿಯವರು ಪರೀಕ್ಷಿಸಿದರೆ ಶೇ.90 ರಷ್ಟನ್ನು ನಾವು ಪರೀಕ್ಷಿಸಿದ್ದೇವೆ.ನಮ್ಮವರು ಕೊವಿಡ್ ಗೆ ಒಳಗಾಗಿದ್ದಾರೆ.ಸಾವನ್ನಪ್ಪಿದ್ದಾರೆ.ಹೀಗಾಗಿ ಕೊವಿಡ್ ವಾರಿಯಸ್೯ರಲ್ಲಿ ನಾವು ಮಂಚೂಣಿಯಲ್ಲಿದ್ದೇವೆ.
ರಾಜಣ್ಣ
ಅಧ್ಯಕ್ಷರು
ಕರ್ನಾಟಕರಾಜ್ಯ ಪ್ರಯೋಗಶಾಲಾ ತಂತ್ರಜ್ಞರ ಸಂಘ
ಬೆಂಗಳೂರು

About the author

Adyot

Leave a Comment