ಬೆಂಗಳೂರಿನಲ್ಲಿ ಗ್ರಾಮರಾಜ್ಯ ಸ್ವದೇಶಿ ವಸ್ತುಗಳ ಮಾರಾಟ ಮಳಿಗೆ ಲೋಕಾರ್ಪಣೆ

ಆದ್ಯೋತ್ ಸುದ್ದಿನಿಧಿ:
ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯಯೋಜನೆಯ ಸ್ವದೇಶಿ ವಸ್ತುಗಳ ಮಾರಾಟಮಳಿಗೆ ಗ್ರಾಮರಾಜ್ಯವನ್ನು ಬೆಂಗಳೂರಿನ ಆರ್.ಟಿ.ನಗರ ಮುಖ್ಯರಸ್ತೆಯ ಪೊಲೀಸ್ ಠಾಣೆ ಮುಂಬಾಗದಲ್ಲಿರುವ ಮಲ್ಲಿಕಾರ್ಜುನ ಸಂಕೀರ್ಣದಲ್ಲಿ ರವಿವಾರ ಲೋಕಾರ್ಪಣೆಗೊಂಡಿತು.

ಗ್ರಾಮರಾಜ್ಯ ಸ್ವದೇಶಿಮಳಿಗೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚೀವ ಸದಾನಂದ ಗೌಡ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿಯವರ ಆತ್ಮ ನಿರ್ಭರ ಯೋಜನೆಗೆ ಪೂರಕವಾಗಿ ಸ್ವದೇಶಿ ಆಹಾರ ವಸ್ತುಗಳ ಮಾರಾಟ ಕೇಂದ್ರ ಪ್ರಾರಂಭಿಸಿರುವುದು ಸ್ವಾಗತಾರ್ಹ. ಇಂತಹ ಸ್ವದೇಶಿ ಮಳಿಗೆಗಳು ಇನ್ನಷ್ಟು ಹೆಚ್ಚಲಿ ಈ ಮಳಿಗೆ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು .

ಡಾ.ಗಿರಿಧರ ಕಜೆ ಮಾತನಾಡಿ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ದಿವ್ಯ ಯೋಜನೆ ಗ್ರಾಮರಾಜ್ಯ.ವಿಷಮುಕ್ತ ಆಹಾರ ವಸ್ತುಗಳ ಮಾರಾಟ ಮಾಡುತ್ತಿರುವ ಗ್ರಾಮರಾಜ್ಯದ ಮಳಿಗೆ ಇದೀಗ ಆರ್ ಟಿ ನಗರದಲ್ಲಿ ಪ್ರಾರಂಭವಾಗಿದ್ದು ಸಂತಸ ತಂದಿದೆ . ವಿಷಮುಕ್ತ ಆಹಾರ ಸೇವಿಸಿ ಆರೋಗ್ಯವಂತರಾಗಿ ಬಾಳೋಣ ಎಂದು ಶುಭ ಹಾರೈಸಿದರು
.
ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ವಿಧಾನ ಪರಿಷತ್ತಿನ ಸದಸ್ಯ ವೈ ಎ ನಾರಾಯಣ ಸ್ವಾಮಿ,ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷ ಡಾ ಸೀತಾರಾಮ ಪ್ರಸಾದ,ಮಹಾನಂದಿ ಗೋಲೋಕ ಅಧ್ಯಕ್ಷ ಜಿ ಜಿ ಹೆಗಡೆ,ಹವ್ಯಕ ಮಹಾಮಂಡಲ ಕೋಶಾಧ್ಯಕ್ಷ ಗೋಪಾಲಕೃಷ್ಣ ಪುಳು,ಬೆಂಗಳೂರು ಉತ್ತರ ಮಂಡಲ ಅಧ್ಯಕ್ಷ ಅಶೋಕ ಹಾರ್ನಹಳ್ಳಿ,ಸ್ವದೇಶಿ ಜಾಗರಣ ಮಂಚನ ಜಗದೀಶ.
ಗ್ರಾಮರಾಜ್ಯದ ಸಂಯೋಜಕ ಕೃಷ್ಣ ಪ್ರಸಾದ ಅಮ್ಮಂಕಲ್ಲು , ಸಂಯೋಜಕ ಶಶಾಂಕ ಕಂಗಿಲ ಮತ್ತು ಪದಾಧಿಕಾರಿಗಳು ಉಪಸ್ಠಿತರಿದ್ದರು .

About the author

Adyot

Leave a Comment