ಸಿದ್ದಾಪುರ ನಾಮಧಾರಿ ಸಮುದಾಯ ಭವನಕ್ಕೆ 2ಕೋಟಿ ರೂ.ಅನುದಾನ ಬಿಡುಗಡೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿರುವ ನಾಮಧಾರಿ
ಸಮುದಾಯ ಭವನಕ್ಕೆ ಸಂಸದ ಅನಂತಕುಮಾರ ಹೆಗಡೆ ಮನವಿಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಕ್ಷಣದಲ್ಲಿ 2ಕೋಟಿರೂ. ಅನುದಾನ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಆದೇಶಿಸಿದ್ದಾರೆ ಎಂದು ಬಿಜೆಪಿ ಮುಖಂಡ,ನಾಮಧಾರಿ ಸಮುದಾಯ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಹೇಳಿದ್ದಾರೆ.
ಅವರು ಶನಿವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಕುರಿತು ಮಾತನಾಡಿದರು

ಪಟ್ಟಣದ ಹೊಸೂರು ಸರ್ವೆನಂ.162ರಲ್ಲಿ ಕಳೆದ 20 ವರ್ಷದ ಹಿಂದೆ 18 ಗುಂಟೆ ಜಾಗವನ್ನು ಖರೀದಿಸಿ,ನಾಮಧಾರಿ ಸಮುದಾಯದ ಧಾರ್ಮಿಕ,ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯವಿರುವ ಸಮುದಾಯಭವನ ನಿರ್ಮಿಸಲು ನಮ್ಮ ಸಮಾಜದ ಮುಖಂಡರು ತೀರ್ಮಾನಿಸಿದರು. ಆ ಸಮಯದಲ್ಲಿ ಸಂಸದ ಅನಂತಕುಮಾರ ಹೆಗಡೆಯವರು ಸಂಸದರ ನಿಧಿಯಿಂದ 10ಲಕ್ಷರೂ. ನೀಡಿದ್ದರು. ಅದರಿಂದ ಪ್ರಾರಂಭಿಕ ಹಂತವನ್ನು ಪ್ರಾರಂಭಿಸಲಾಯಿತು ಆದರೆ ಜಾಗವನ್ನು ವಸತಿ ನಿರ್ಮಾಣಕ್ಕೆ ಎಂದು ನೊಂದಣಿಯಾದ್ದರಿಂದ ಸರಕಾರದ ಅನುದಾನ ತರಲು ಅಡ್ಡಿಯಾಗತೊಡಗಿತು, ರಾಜ್ಯಸಭಾ ಸದಸ್ಯರಾಗಿದ್ದ ಬಿ.ಕೆ.ಹರಿಪ್ರಸಾದ 40 ಲಕ್ಷರೂ. ನೀಡಿದ್ದರು ಆದರೆ ತಾಂತ್ರಿಕ ತೊಂದರೆಯಾದ ಕಾರಣ ಅದು ವಾಪಸ್ಸ ಹೋಗಿತ್ತು, ನಂತರ ನಾನು ಅಧ್ಯಕ್ಷನಾದ ನಂತರ ಜಾಗವನ್ನು ವಾಣಿಜ್ಯ ಎಂದು ಬದಲಾಯಿಸಿದೆ ಆ ಸಮಯದಲ್ಲಿ ಕಾಗೋಡು ತಿಮ್ಮಪ್ಪನವರು ಸ್ಪೀಕರ್ ಆಗಿದ್ದರು ಅಂದಿನ ಸಚೀವ ಆರ್.ವಿ.ದೇಶಪಾಂಡೆಯವರ ಮೂಲಕ ಹಿಂದುಳಿದ ವರ್ಗದ ಇಲಾಖೆಯಿಂದ 30ಲಕ್ಷರೂ. ಮಂಜೂರು ಮಾಡಿದ್ದರು ಅದರ ಪ್ರಥಮ ಕಂತು 7.50ಲಕ್ಷರೂ. ನೀಡಲಾಗಿತ್ತುಉಳಿದ ಕಂತು ಬರಲಿಲ್ಲ ಎಂದು ಹೇಳಿದರು.
ಕಳೆದ ನವಂಬರ್ ತಿಂಗಳಲ್ಲಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾಗ ಒಂದುಕೋಟಿರೂ. ಬಿಡುಗಡೆ ಮಾಡಿದ್ದರು ಆದರೆ ಅದು ಬಂದಿರಲಿಲ್ಲ. ಸೆ.4ರಂದು ಸಂಸದ ಅನಂತಕುಮಾರ ಹೆಗಡೆಯವರು ಸಚೀವ ಶಿವರಾಮ ಹೆಬ್ಬಾರ,ಕಾರವಾರ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸುನಿಲ ಹೆಗಡೆಯವರ ಜೊತೆಯಲ್ಲಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಇನ್ನೊಮ್ಮೆಮನವಿ ನೀಡಿದಾಗ ಅವರು ತಕ್ಷಣ ಸ್ಪಂದಿಸಿ ಹಣಕಾಸು ಇಲಾಖೆಗೆ ಆದೇಶ ನೀಡಿದರಲ್ಲದೆ ತಕ್ಷಣದಲ್ಲೆ ಮಂಜೂರಾಗುವಂತೆ ಮಾಡಿದ್ದಾರೆ ಈ ಕಾರಣದಿಂದ ನಮ್ಮ ಪಕ್ಷದವತಿಯಿಂದ ಯಡಿಯೂರಪ್ಪ,ಅನಂತಕುಮಾರ ಹೆಗಡೆ,ರೂಪಾಲಿನಾಯ್ಕ ಹಾಗೂ ಸುನಿಲ ಹೆಗಡೆಯವರನ್ನು ಅಭಿನಂದಿಸುತ್ತಿದ್ದೇವೆ ಎಂದು ಹೇಳಿದರು.

ಹಿಂದೆ ಒಂದು ಕೋಟಿರೂ. ಮಂಜೂರಾಗಿದ್ದು ಸಿಗದಂತೆ ಕಾಣದ ಕೈಗಳು ಪ್ರಯತ್ನ ಮಾಡಿವೆ ಎನ್ನಲಾಗುತ್ತಿದೆ ಇದರ ಬಗ್ಗೆ ಏನು ಹೇಳುತ್ತೀರಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೆ.ಜಿ.ನಾಯ್ಕ,ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಈ ಸಮುದಾಯ ಭವನಕ್ಕೆ ವಿವೇಕಾನಂದ ವ್ಯದ್ಯರು 3ಲಕ್ಷರೂ.ವಿಶ್ವೇಶ್ವರ ಹೆಗಡೆ ಕಾಗೇರಿ 3 ಲಕ್ಷರೂ.ಅನಂತಕುಮಾರ ಹೆಗಡೆ 10 ಲಕ್ಷರೂ.ಕಾಗೋಡು ತಿಮ್ಮಪ್ಪ 7.50ಲಕ್ಷರೂ. ಸೇರಿದಂತೆ ಒಟ್ಟೂ 23ಲಕ್ಷರೂ.ಸರಕಾರದ ಅನುದಾನ ನೀಡಲಾಗಿದೆ.ಇಲ್ಲಿಯವರೆಗೆ ಜಾಗ ಖರೀದಿ ಹೊರತುಪಡಿಸಿ ಸುಮಾರು 50ಲಕ್ಷರೂ. ಖರ್ಚುಮಾಡಲಾಗಿದೆ.ಈಗಾಗಲೇ ಕಟ್ಟಡದ ನೀಲನಕ್ಷೆ ಸಿದ್ದಪಡಿಸಲಾಗಿದ್ದು ಒಟ್ಟೂ3.50ಕೋಟಿರೂ ಅಂದಾಜು ಮಾಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ನಾಗರಾಜ ನಾಯ್ಕ,ಬಿಜೆಪಿ ಪದಾಧಿಕಾರಿಗಳಾದ ಗುರುರಾಜ ಶಾನಭಾಗ,ರವಿ ನಾಐಕ ಜಾತಿಕಟ್ಟೆ,ಕೃಷ್ಣಮೂರ್ತಿ ಕಡಕೆರಿ,ಎಸ್.ಕೆ.ಮೆಸ್ತ,ಸುಧಿರ್ ನಾಯ್ಕ,ಮುಂತಾದವರು ಉಪಸ್ಥಿತರಿದ್ದರು.
——-
ಸ್ಥಳಿಯ ಶಾಸಕರು ಅಧ್ಯಕ್ಷರ ಬದಲಾವಣೆ ಮಾಡಿದರೆ 2ಕೋಟಿ ಅನುದಾನ ಕೊಡಿಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ ಎಂಬ ಪತ್ರಕರ್ತರು ಪ್ರಶ್ನಿಸಿದರು.
ಇದರ ಬಗ್ಗೆ ನನಗೆ ತಿಳಿದಿಲ್ಲ ಕಳೆದ 31 ವರ್ಷದಿಂದ ನಾನು ರಾಜಕೀಯದಲ್ಲಿದ್ದೇನೆ ನಾನಿದ್ದ ಸ್ಥಾನದಲ್ಲಿ ನ್ಯಾಯಕೊಡಲು ನನ್ನೆಲ್ಲ ಪ್ರಯತ್ನ ಮಾಡುತ್ತೇನೆ ಒಂದು ಸಮುದಾಯದ ಅಧ್ಯಕ್ಷನಾಗಿ ರಾಜಕೀಯ ಮಾಡುವ ಅವಶ್ಯಕತೆ ನನಗಿಲ್ಲ ನನ್ನ ಸಮುದಾಯದವರು ಬಯಸಿದರೆ ನಾನು ರಾಜಿನಾಮೆ ಕೊಡುತ್ತೇನೆ ಯಾರೋ ಕೇಳಿದರು ಎಂದು ನಾನು ರಾಜಿನಾಮೆ ಕೊಡುವುದಿಲ್ಲ ಎಂದು ಕೆ.ಜಿ.ನಾಯ್ಕ ಹೇಳಿದರು.

About the author

Adyot

Leave a Comment