ಆದ್ಯೋತ್ ಸುದ್ದಿನಿಧಿ:
ನಿಗಮ–ಮಂಡಳಿಗೆ ಕೆ.ಜಿ.ನಾಯ್ಕರ ನೇಮಕಕ್ಕೆ ನಾಮಧಾರಿ ಸಂಘದ ಆಗ್ರಹ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಗುರುವಾರ ತಾಲೂಕು ನಾಮಧಾರಿ ಸಮಾಜದ ಅಭಿವೃದ್ಧಿ ಸಂಘದ ಸಭೆ ನಡೆಸಲಾಯಿತು.
ನಾಮಧಾರಿ ಸಮಾಜದ ತಾಲೂಕ ಅಧ್ಯಕ್ಷರಾಗಿರುವ ಬಿಜೆಪಿಯ ಮುಂಚೂಣಿ ನಾಯಕ ಕೆ.ಜಿ.ನಾಯ್ಕ ಹಣಜೀಬೈಲ್ ಅವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮುಖ್ಯಂತ್ರಿಗಳ ಆಗ್ರಹಿಸುವುದಕ್ಕೆ ನಾಮಧಾರಿ ಸಮಾಜದ ಅಭಿವೃದ್ಧಿ ಸಂಘ ತೀರ್ಮಾನಿಸಿದೆ.
ಸಂಘದ ಗೌರವಾಧ್ಯಕ್ಷ ಅನಂದ ಈರಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಠರಾವಿಸಲಾಗಿದೆ.
ಬಿಜೆಪಿಯಲ್ಲಿರುವ ನಮ್ಮ ಸಮಾಜದ ನಾಯಕರಾದ ಕೆ.ಜಿ.ನಾಯ್ಕ ಹಣಜೀಬೈಲ್ ರಿಗೆ ನಿಗಮಮಂಡಳಿಯ ಅಧ್ಯಕ್ಷರನ್ನಾಗಿ ಮಾಡಬೇಕು ಬಹುಸಂಖ್ಯಾತರಾಗಿರುವ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ನೇಮಕದ ಸಮಯದಲ್ಲಿ ಮೊದಲ ಆದ್ಯತೆ ನೀಡಬೇಕು. ಆ ಸಂದರ್ಭದಲ್ಲಿ ಇವರನ್ನು ಪರಿಗಣಿಸಬೇಕು. ಈ ಕುರಿತು ಮುಖ್ಯ ಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕ್ಷೇತ್ರದ ಶಾಸಕರಾಗಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ನೀಡಿ ಆಗ್ರಹಿಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಮಂಜುನಾಥ ನಾಯ್ಕ ಸುಂಕತ್ತಿ ವಿಷಯವನ್ನು ಪ್ರಸ್ತಾಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕೆ.ಆರ್.ವಿನಾಯಕ ಕೋಲಶಿರ್ಸಿ ಕಾಲಕಾಲಕ್ಕೆ ಇರುವ ಸರ್ಕಾರದಲ್ಲಿ ಆಯಾ ಪಕ್ಷದ ಮುಂಚೂಣಿಯಲ್ಲಿ ಇರುವ ಸಮಾಜದ ಪ್ರಮುಖರಿಗೆ ಸ್ಥಾನ ಮಾನಗಳು ಸಿಗುವುದಕ್ಕೆ ಸಮಾಜ ಸಹಕರಿಸಬೇಕು. ನಮ್ಮ ಒತ್ತಾಯ ಸರ್ಕಾರಕ್ಕೆ ಮುಟ್ಟಬೇಕು ಎಂದರು.
ಇದಕ್ಕೆ ಸಭೆಯು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದೆ. ಅದರಂತೆ ಮುಖ್ಯ ಮಂತ್ರಿಗಳಿಗೆ ಸಮಾಜದ ನಿಯೋಗ ಭೇಟಿಯಾಗಿ ಮನವಿ ನೀಡುವುದಕ್ಕೆ ತೀರ್ಮಾನಿಸಿದೆ.
ನಿರ್ಮಾಣ ಹಂತದಲ್ಲಿ ಇರುವ ನಾಮಧಾರಿ ಸಮುದಾಯ ಭವನಕ್ಕೆ 2 ಕೋಟಿರೂ.ಅನುದಾನ ಮಂಜೂರಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯ್ಯೂರಪ್ಪನವರಿಗೆ ಮತ್ತು ಅದಕ್ಕೆ ವಿಶೇಷ ಪ್ರಯತ್ನ ನಡೆಸಿ ಸಹಕರಿಸಿದ ಸಂಸದ ಅನಂತಕುಮಾರ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ, ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸಭೆಯಲ್ಲಿ ಅಭಿನಂದಿಸಲಾಯಿತು.
ಮುಂದಿನ ದಿನಗಳಲ್ಲಿ ಸಮಾಜದ ಕುಲ ಗುರುಗಳಾದ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸುವಂತೆ ಚೆರ್ಚಿಸಲಾಯಿತು.
ಸರ್ಕಾರದ ಅನುದಾನಗಳೊಂದಿಗೆ ಸಮುದಾಯದ ದೇಣಿಗೆಯನ್ನು ಪಡೆದು ಮುಂದಿನ ಒಂದು ವರ್ಷದಲ್ಲಿ ಸಮುದಾಯ ಭವನವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತಾಗಬೇಕು. ಈ ಕಾರ್ಯದಲ್ಲಿ ಎಲ್ಲರೂ
ಕೈಜೋಡಿಸಬೇಕು ಎಂದು ಸಭೆಯಲ್ಲಿ ಮಾತನಾಡಿದ ಕೆ.ಜಿ.ನಾಯ್ಕ ಮತ್ತು ಕೆ.ಜಿ.ನಾಗರಾಜ ಹೇಳಿದರು.
ವೇದಿಯಲ್ಲಿ ಸಂಘದ ಉಪಾಧ್ಯಕ್ಷ ಹನುಮಂತ ಎಂ.ನಾಯ್ಕ ಹೊಸೂರು, ಪ್ರಧಾನ ಕಾರ್ಯದರ್ಶಿ ಎಸ್.ಎಮ.ನಾಯ್ಕ, ಜಿಲ್ಲಾ ಪಂಚಾಯತ ಸದಸ್ಯನಾಗರಾಜ ನಾಯ್ಕ ಬೇಡ್ಕಣಿ, ಪ್ರಮುಖರಾದ ಕೆ.ಜಿ.ನಾಗರಾಜ, ಡಿ.ಸಿ.ನಾಯ್ಕ ಅವರಗುಪ್ಪ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಸಮಾಜದ ಪ್ರಮುಖರು ಉಪಸ್ಥಿತರಿದ್ದರು.ಮಹಾಲೇಶ್ವರ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಎಂ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಅಣ್ಣಪ್ಪ ನಾಯ್ಕ ಶಿರಳಗಿ ಕಾರ್ಯಕ್ರಮ ನಿರ್ವಹಿಸಿದರು.