ಸಿದ್ದಾಪುರದಲ್ಲಿ ಕೊವಿಡ್ ಹೆಚ್ಚಳ- ಪಟ್ಟಣಪಂಚಾಯತ್, ಮೀನುಮಾರುಕಟ್ಟೆ ಸೀಲ್ ಡೌನ್

ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೊವಿಡ್ ಸಂಖ್ಯೆ ಹೆಚ್ಚಳವಾಗುತ್ತಿದ್ದು ರವಿವಾರ 15 ಪ್ರಕರಣ ದಾಖಲಾಗಿದೆ. ಅಲ್ಲದೆ ಪಟ್ಟಣಪಂಚಾಯತ್, ಮೀನುಮಾರುಕಟ್ಟೆ ಸೀಲ್ ಡೌನ್ ಆಗಿರುವುದರ ಜೊತೆಗೆ ಪೊಲೀಸ್ ಠಾಣೆಗೂ ಎಚ್ಚರಿಕೆ ನೀಡಿದೆ.

ರವಿವಾರ ಪಟ್ಟಣ ಪಂಚಾಯತ್ ನ 51 ಸಿಬ್ಬಂದಿಗಳ ಕೊವಿಡ್ ಟೆಸ್ಟ್ ನಡೆಸಲಾಗಿದೆ. ಅದರಲ್ಲಿ 7 ಸಿಬ್ಬಂದಿಗಳಿಗೆ ಕೊವಿಡ್ ಪಾಸಿಟಿವ್ ಆಗಿದ್ದು ಎರಡು ದಿನಗಳ ಕಾಲ ಪಟ್ಟಣ ಪಂಚಾಯತ್ ಕಚೇರಿಯನ್ನು ಸಿಲ್ ಡೌನ್ ಮಾಡಲಾಗಿದೆ. ಆದರೆ ಸ್ವಚ್ಚತಾ ಕಾರ್ಯಗಳು, ನೀರು ಪೂರೈಕೆ ಎಂದಿನಂತೆ ಇರುತ್ತದೆ ಎಂದು ಪಪಂ ಅಧಿಕಾರಿಗಳು ತಿಳಿಸಿದ್ದಾರೆ.
8 ಮೀನುಮಾರಾಟಗಾರರಲ್ಲಿ ಕೊವಿಡ್ ಕಾಣಿಸಿಕೊಂಡಿದ್ದು ಪಟ್ಟಣದ ಮೀನುಮಾರುಕಟ್ಟೆಯನ್ನು 7 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಪೊಲೀಸ್ ಪೇದೆ, ಎ.ಎಸ್.ಐ ಸೇರಿದಂತೆ ಪೊಲೀಸ್ ಕುಟುಂಬದಲ್ಲಿ ಕೆಲವರಿಗೆ ಕೊವಿಡ್ ಪೊಸಿಟಿವ್ ಇರುವುದು ಖಚಿತವಾದ್ದರಿಂದ ಪೊಲೀಸ್ ಠಾಣೆಗೆ ಸಾರ್ವಜನಿಕರ ಭೇಟಿಯನ್ನು ನಿರ್ಭಂಧಿಸಲಾಗಿದೆ.


ಒಟ್ಟಾರೆ ಪಟ್ಟಣದಾದ್ಯಂತ ಕೊವಿಡ್ ಬಿರುಗಾಳಿ ಎಬ್ಬಿಸುತ್ತಿದೆ. ಸರಕಾರವೇನೋ ಲಾಕ್ ಡೌನ್ ತೆರವುಗೊಳಿಸಿದೆ. ಆದರೆ ಜನರು ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಸಾಮಾಜಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದು ಮಾಡುವುದರ ಜೊತೆಗೆ ಅನಗತ್ಯ ಓಡಾಟವನ್ನು ನಿಲ್ಲಿಸಬೇಕು. ಈ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಕೊವಿಡ್ ಹರಡದಂತೆ ತಡೆಯಬಹುದು.

About the author

Adyot

Leave a Comment