ಹಿಂದಿ ಹೇರಿಕೆ ವಿರುದ್ದ “ನಾವು ಕನ್ನಡಿಗರು” ಸಂಘಟನೆಯಿಂದ ಮನವಿ ಸಲ್ಲಿಕೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹಿಂದಿ ದಿನಾಚರಣೆ ವಿರುದ್ದ ಸ್ಥಳೀಯ ನಾವು ಕನ್ನಡಿಗರು ಸಂಘಟನೆಯ ಪದಾಧಿಕಾರಿಗಳು ವಾಟಾಳ್ ಬಳಗದ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರಲ್ಲದೆ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರದ ಹೇರಿಕೆಯಾದ ಹಿಂದಿ ದಿವಸ ದಿನಾಚರಣೆಯಿಂದಾಗಿ ಸೆ.14 ಕನ್ನಡಿಗರಿಗೆ ಕರಾಳದಿನವಾಗಿದೆ.’
ಬ್ಯಾಂಕ್ ಗಳಲ್ಲಿ ಈಗಲೂ ಇಂಗ್ಲೀಷ ಮತ್ತು ಹಿಂದಿಗಳಲ್ಲಿ ವ್ಯವಹರಿಸಲಾಗುತ್ತಿದೆ ಕೂಡಲೇ ಬ್ಯಾಂಕ್ ಗಳಲ್ಲಿ ಹಾಗೂ ಕೇಂದ್ರಸರಕಾರದ ಕಚೇರಿಗಳ್ಲಿ ಕನ್ನಡದಲ್ಲೆ ವ್ಯವಹಾರ ಮಾಡುವಂತೆ ಸೂಚಿಸಬೇಕು.ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು.ಹಿಂದಿದಿನಾಚರಣೆಯ ಮೂಲಕ ಹಿಂದಿ ಹೇರಲು ಹೊರಟಿರುವ ಕೇಂದ್ರಸರಕಾರದ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂಧರ್ಭದಲ್ಲಿ ನಾವು ಕನ್ನಡಿಗರು ಸಂಘಟನೆಯರಾಜ್ಯಾಧ್ಯಕ್ಷ ಗಣೇಶ ಭಟ್ಟ ಪ್ರದಾನಕಾರ್ಯದರ್ಶಿ ಸುಶೀಲ್ ಕುಮಾರ,ಜಿಲ್ಲಾಸಂಚಾಲಕ ಪ್ರಸನ್ನ ನಾಯ್ಕ,ವಾಟಾಳ್ ಬಳಗದ ಜಿಲ್ಲಾಧ್ಯಕ್ಷ ಹರೀಶ್ ನಾಯ್ಕ,ತಾಲೂಕಾಧ್ಯಕ್ಷ ಪರಮೇಶ್ವರ ಉಪಸ್ಥಿತರಿದ್ದರು.

About the author

Adyot

Leave a Comment