ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ,ಸರಕಾರವು ಪ್ರಸಕ್ತ ವಿಧಾನಸಭಾ ಅಧಿವೇಶನದಲ್ಲಿ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಹೊರಟಿದ್ದನ್ನು ವಿರೋಧಿಸಿ ಭೂಮಿಹಕ್ಕು ಹೋರಾಟಗಾರರು ಮಸೂದೆಯ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟಿಸಿದರು.
ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶಿರಸಿಯ ಬಿಡ್ಕಿಬೈಲ್ ನಲ್ಲಿರುವ ಮಹಾತ್ಮಾಗಾಂಧಿ ಪ್ರತಿಮೆಗೆ ಹಾರಹಾಕಿ ಗೌರವಿಸಿ ನಂತರ ಪ್ರತಿಭಟನಾರ್ಥವಾಗಿ ರೈತವಿರೋಧಿ ಮಸೂದೆಯ ಪ್ರತಿಯನ್ನು ಸುಡಲಾಯಿತು.
ರೈತರ ಹಿತಕಾಪಾಡುವ ಭೂಸುಧಾರಣಾ ಕಾಯ್ದೆಯನ್ನು ಮೂಲ ಕಾಯ್ದೆಯ ತತ್ವ,ಸಿದ್ದಾಂತಕ್ಕೆ ವ್ಯತಿರಿಕ್ತವಾಗಿ ಕೃಷಿಕರ ಹಿತಕ್ಕೆ ದಕ್ಕೆ ತರುವ ರೀತಿಯಲ್ಲಿ ಕರಾಳ ತಿದ್ದುಪಡಿಯನ್ನು ಸರಕಾರ ಮಾಡಿದೆ
ಇದನ್ನು ಬಲವಾಗಿ ವಿರೋಧಿಸುವುದು ಅನಿವಾರ್ಯವಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
ಕರ್ನಾಟಕದಲ್ಲಿ 123100 ಸ್ಕ್ವೇರ್ ಕಿ.ಮಿ. ವಿಸ್ತೀರ್ಣದಲ್ಲಿ ಕೃಷಿಭೂಮಿ ಇರುತ್ತದೆ.ಅಂದರೆ ಶೇ.64.67 ಆಗಿರುತ್ತದೆ.ಸದ್ರಿಕ್ಷೇತ್ರದಲ್ಲಿ 13.74 ಮಿಲಿಯನ್ ರೈತಕೃಷಿಕಾರ್ಮಿಕರು ಅವಲಂಬಿತರಾಗಿದ್ದಾರೆ.ಶೇ.23.61 ರೈತರು ಭೂಮಾಲಿಕತ್ವವನ್ನು ಹೊಂದಿದ್ದರೆ,ಶೇ.25.67 ಕೃಷಿಕಾರ್ಮಿಕರಾಗಿದ್ದಾರೆ ಸರಕಾರ ಈಗ ತಿದ್ದುಪಡಿ ಮಾಡಿರುವುದ
ರಿಂದ ಭೂ ಮಾಫಿಯ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ರವೀಂದ್ರ ನಾಯ್ಕ
ಉತ್ತಮ ಸುದ್ದಿ