ಸಿದ್ದಾಪುರದಲ್ಲಿ ಕೊವಿಡ್ ಗೆ ಇನ್ನೊಂದು ಬಲಿ

ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಸಿದ್ದಾಪುರದಲ್ಲಿ ಮಳೆಯ ಆರ್ಭಟದ ಜೊತೆಗೆ ಕೊವಿಡ್ ಆರ್ಭಟವೂ ಹೆಚ್ಚಾಗುತ್ತಿದ್ದು ಸೋಮವಾರ ತಾಲೂಕಿನ ತಂಡಾಗುಂಡಿ ಗ್ರಾಮದ 53 ವರ್ಷದ ಮಹಿಳೆ ಮರಣ ಹೊಂದುವುದರೊಂದಿಗೆ ಕೊವಿಡ್ ಗೆ ಬಲಿಯಾದವರ ಸಂಖ್ಯೆ 3 ಕ್ಕೆ ಏರಿದೆ.
ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಸೆ.14ರಂದು ಸ್ವಾಬ್ ಸಂಗ್ರಹಿಸಲಾಗಿತ್ತು ಕ್ಯಾನ್ಸರ್ ಜೊತೆಗೆ ಕೊವಿಡ್ ಲಕ್ಷಣಗಳು ಇದ್ದ ಕಾರಣ ಕಾರವಾರಕ್ಕೆ ಕಳುಹಿಸಲಾಗಿತ್ತು ಅಲ್ಲಿಂದ ಮಂಗಳೂರಿಗೆ ಕಳುಹಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮರಣ ಹೊಂದಿದ್ದಾರೆ ದೇಹವನ್ನು ಮುಂಜಾಗ್ರತ ಕ್ರಮದೊಂದಿಗೆ ಗ್ರಾಮಕ್ಕೆ ತರಲಾಗಿದ್ದು ಕೊವಿಡ್ ನಿಯಮಾನುಸಾರ ಸಂಸ್ಕಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸೆಪ್ಟಂಬರ್ ತಿಂಗಳ ಪ್ರಾರಂಭದಲ್ಲಿ ಸಿದ್ದಾಪುರ ಪಟ್ಟಣದ ಹಾಳದಕಟ್ಟಾದ 56 ವರ್ಷ ದ ವ್ಯಕ್ತಿ ಕೊವಿಡ್ ನಿಂದ ಮರಣಹೊಂದಿದ್ದ ಕಳೆದ ವಾರ ಕವಂಚೂರಿನ 52 ವರ್ಷದ ವ್ಯಕ್ತಿ ಮರಣ ಹೊಂದಿದ್ದರೆ ಸೋಮವಾರ 53 ವರ್ಷದ ಮಹಿಳೆ ಮರಣಹೊಂದಿದ್ದಾರೆ.
ಮರಣ ಹೊಂದಿದವರು 50 ವರ್ಷದ ಅಕ್ಕ-ಪಕ್ಕದ ವಯಸ್ಸಿನವರಾಗಿದ್ದು ಜನರು ಕೊವಿಡ್ ನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಮ್ಮ ಬದುಕಿನಲ್ಲಿ ಕೆಲವು ನಿಯಮಗಳನ್ನು ಅಳವಡಿಸಿಕೊಂಡಲ್ಲಿ ಕೊವಿಡ್ ನಿಂದ ದೂರ ಇರಲು ಸಾಧ್ಯವಿದೆ. ಸಾರ್ವಜನಿಕರು ಸರಕಾರದ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಕೊವಿಡ್ ನಿಯಂತ್ರಣ ಮಾಡಬೇಕು ಎಂದು ಆದ್ಯೊತ್ ನ್ಯೂಸ್ ಮನವಿ ಮಾಡುತ್ತಿದೆ.

About the author

Adyot

1 Comment

Leave a Comment