ಲಯನ್ಸ್ ಸಂಸ್ಥೆಯಿಂದ ನೈಸರ್ಗಿಕ ವಿಕೋಪ ಸಂತ್ರಸ್ತರಿಗೆ ಕಿಟ್ ವಿತರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ವಾಜಗೋಡನಲ್ಲಿ ಗುರುವಾರ
ಲಯನ್ಸ್ ಸಂಸ್ಥೆಯವತಿಯಿಂದ ನೈಸರ್ಗಿಕ ವಿಕೋಪಕ್ಕೆ ಒಳಗಾದ ಸಂತ್ರಸ್ತರಿಗೆ ತುರ್ತುಅವಶ್ಯಕವಿರುವ ಕಿಟ್ ಗಳ ವಿತರಣೆ ಮಾಡಲಾಯಿತು.

ಲಯನ್ಸ್ 317-B ಜಿಲ್ಲೆಯ ಗವರ್ನರ್ ಡಾ.ಗಿರೀಶ ಕುಚಿನಾಡು ಮಾತನಾಡಿ,ಲಯನ್ಸ್ ಕ್ಲಬ್ ಒಂದು ಸೇವಾ ಸಂಸ್ಥೆಯಾಗಿದ್ದು ತುರ್ತುಸಮಯದಲ್ಲಿ ಸೇವೆಯನ್ನು ನೀಡಲು ಮುಂದಾಗುತ್ತದೆ.
ಈ ವರ್ಷದ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ.ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ನೈಸರ್ಗಿಕ ವಿಕೋಪ ಪರಿಹಾರಕ್ಕಾಗಿ 7ಲಕ್ಷದ 25ಸಾವಿರ ನೀಡಿದೆ. ಅದರಂತೆ ಲಯನ್ಸ್ ಜಿಲ್ಲಾ ವ್ಯಾಪ್ತಿಯ ಎಲ್ಲ ಕ್ಲಬ್‍ಗಳು ಇಷ್ಟೇ ಪ್ರಮಾಣದಲ್ಲಿ ಸಹಾಯ ಹಸ್ತ ನೀಡಿ ಸಹಕರಿಸಿದೆ. ಇದರಿಂದ ಸುಮಾರು 600 ಫಲಾನುಭವಿಗಳಿಗೆ ಅವಶ್ಯಕ ವಸ್ತುಗಳನ್ನು ನೀಡಲಾಗುತ್ತದೆ.
ಲಯನ್ಸ್ ಜಿಲ್ಲಾ ಸಂಸ್ಥೆ ವಿವಿಧ ಯೋಜನೆಯನ್ನು ಹಮ್ಮಿಕೊಂಡಿದ್ದು ಅದರಲ್ಲಿ ಮುಖ್ಯವಾಗಿ ನಿಸರ್ಗ ಸಂಪತ್ತನ್ನು ಕಾಪಾಡಿಕೊಳ್ಳುವುದು. ಕೃಷಿ ಅಭಿವೃದ್ಧಿ, ರಸ್ತೆ ಸುರಕ್ಷತೆ ಕುರಿತು ಮಾಹಿತಿ ನೀಡುವುದಲ್ಲದೇ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಉಚಿತ ಹೊಲಿಗೆ ತರಬೇತಿ ನೀಡುವುದಕ್ಕೆ ಮುಂದಾಗಿದೆ ಅಲ್ಲದೆ ಕುಮಟಾದಲ್ಲಿರುವ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಚಿಕಿತ್ಸೆ ಮಾಡಲಾಗುವುದು ಇಂತಹವರು ಇದ್ದರೆ ಸ್ಥಳಿಯ ಲಯನ್ಸ್ ಪದಾಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಡಾ.ಗಿರೀಶ ಹೇಳಿದರು.

ಲ.ಜಿಲ್ಲಾ ಮಾಜಿ ಗವರ್ನರ್ ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ, ಪ್ರಕೃತಿ ವಿಕೋಪದಂತಹ ತೊಂದರೆ ಉಂಟಾದಾಗ ಲಯನ್ಸ್ ಸಂಸ್ಥೆ ತುರ್ತು ಸೇವೆಯನ್ನು ನೀಡಲು ಮುಂದಾಗುತ್ತದೆ ಕಳೆದ ಐದಾರು ತಿಂಗಳಿನಿಂದ ಕೊವಿಡ್ ಕಾರಣದಿಂದ ಕೆಲಸಗಳು ಸಿಗುತ್ತಿಲ್ಲ ಇಂತಹ ಸಮಯದಲ್ಲಿ ಮಳೆ ಬದುಕನ್ನು ಕಸಿದುಕೊಳ್ಳುತ್ತಿದೆ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಇಂತಹವರ ನೆರವಿಗೆ ಮುಂದಾಗಿದ್ದು ಸ್ಥಳೀಯ ಲಯನ್ಸ್ ಸಹಕಾರದೊಂದಿಗೆ ಸಂತ್ರಸ್ತ ಫಲಾನುಭವಿಗಳಿಗೆ ಅವಶ್ಯಕ ಸಾಮಗ್ರಿಗಳನ್ನು ನೀಡಲಾಗುತ್ತಿದೆ.ಇದಕ್ಕೆ ಜಿಲ್ಲೆಯ ಎಲ್ಲ ಲಯನ್ಸ್ ಸಂಸ್ಥೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಮಾತನಾಡಿದರು.

ವೇದಿಕೆಯಲ್ಲಿ ಲಯನ್ಸ್ ಪದಾಧಿಕಾರಿಗಳಾದ ರಾಘವೇಂದ್ರ ಭಟ್ಟ,ನಾಗರಾಜ ಧೋಶೆಟ್ಟಿ,ಪ್ರಶಾಂತ ಶೇಟ್,ಅಭಿವೃದ್ಧಿ ಅಧಿಕಾರಿ ನಾಗೇಶ ಉಪಸ್ಥಿತರಿದ್ದರು.
ವಾಜಗೋಡ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ ಐಸೂರು, ಪ್ರಾಸ್ತಾವಿಕ ಮಾತನಾಡಿದರು.ಲಯನ್ಸ್ ಜಿ.ಜಿ.ಹೆಗಡೆಬಾಳಗೋಡು ಸ್ವಾಗತಿಸಿದರು.

About the author

Adyot

Leave a Comment