ಆದ್ಯೋತ್ ಸುದ್ದಿನಿಧಿ:
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಡಿಯಲ್ಲಿ ವೈದ್ಯರು,ಶುಶ್ರೂಷಕರು,ತಂತ್ರಜ್ಞರು,ಕಂಪ್ಯೂಟರ್ ಅಪರೇಟರ್ ಗಳು ಸೇರಿದಂತೆ ಸುಮಾರು 30000 ನೌಕರರು ಕಳೆದ 12 ದಿನದಿಂದ ನಡೆಸುತ್ತಿರುವ ಪ್ರತಿಭಟನೆಗೆ ಇಷ್ಟು ದಿನ ಸ್ಪಂದಿಸದ ಸರಕಾರ ಕೊನೆಗೂ ಮಣಿದಂತೆ ಕಾಣುತ್ತಿದ್ದು ಮಂಗಳವಾರ ಮಾತುಕತೆಗೆ ಆಹ್ವಾನಿಸಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ,ಸೇವಾಭದ್ರತೆ,ಆರೋಗ್ಯ ವಿಮೆ,ಜೀವವಿಮೆ ಸೇರಿದಂತೆ 14 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಸೆಪ್ಟಂಬರ್ 24 ರಿಂದ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದ ನೌಕರರು ಅಕ್ಟೋಬರ್-2 ರಿಂದ ಆರೋಗ್ಯ ಇಲಾಖೆಯ ಕಚೇರಿ ಹಾಗೂ ತಹಸೀಲ್ದಾರ ಕಚೇರಿಯ ಎದುರು ಪ್ರತಿಭಟನೆ ಪ್ರಾರಂಭಿಸಿದ್ದರು.
ಆದರೆ ಸರಕಾರ ಈ ಪ್ರತಿಭಟನೆಗೆ ಸೋಮವಾರದವರೆಗೂ ಸ್ಪಂದಿಸಲಿಲ್ಲ ಆದರೆ ನೌಕರರ ಸಂಘಟನೆಯನ್ನು ಒಡೆಯುವ ಉದ್ದೇಶದಿಂದ ವೈದ್ಯರು,ದಾದಿಯರಿಗೆ ಒಂದಿಷ್ಟು ಕೊವಿಡ್ ಭತ್ಯೆ ನೀಡುವುದಾಗಿ ಘೋಷಿಸಿತು ಇದು ಸುಮಾರು16000 ನೌಕರರಿಗೆ ಸಿಕ್ಕಿದರೆ ಉಳಿದ 14000 ನೌಕರರು ವಂಚಿತರಾದರು.
ಕೊವಿಡ್ ಕಾಣಿಸಿಕೊಂಡ ಈ ಎಂಟು ತಿಂಗಳ ಅವಧಿಯಲ್ಲಿ ಈ ಎಲ್ಲಾ 30000 ನೌಕರರು ಕೊವಿಡ್ ವಾರಿಯರ್ಸ ಆಗಿ ಕೆಲಸ ಮಾಡಿದ್ದಾರೆ. ಆದರೆ ಸರಕಾರ ಕೆಲವರಿಗೆ ಕೊವಿಡ್ ಭತ್ಯೆ ನೀಡಲು ಮುಂದಾಯಿತು ಆದರೆ ಸರಕಾರದ ಈ ಕುತಂತ್ರಕ್ಕೆ ನೌಕರರು ಬಲಿಯಾಗಲಿಲ್ಲ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು ಈಗ ಸರಕಾರ ಮಾತುಕತೆಗೆ ಕರೆದಿದೆ ನೌಕರರ ನ್ಯಾಯಯುತ ಬೇಡಿಕೆಯನ್ನು ಈಡೇರಿಸುತ್ತದೆಯೋ ಕಾದು ನೋಡಬೇಕು.
ಈ ಬಗ್ಗೆ ಆದ್ಯೋತ್ ನ್ಯೂಸ್ ಜೊತೆಗೆ ಮಾತನಾಡಿದ
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಎಚ್.ಯಮೋಜಿ,ನಮ್ಮ14 ಬೇಡಿಕೆಗಳನ್ನು ಈಡೇರಿಸಬೇಕೆಂದು ಕಳೆದ3-4 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ.ಸೆ.24ರಿಂದ ನಾವು ಕೆಲಸ ಬಹಿಷ್ಕರಿಸಿ ಹೋರಾಟ ಪ್ರಾರಂಭಿಸಿದ್ದೇವೆ ನಮ್ಮ ಹೋರಾಟ ಕಾನೂನಾತ್ಮಕವಾಗಿದ್ದು ಸರಕಾರಕ್ಕೆ ಮೊದಲೇ ನೊಟಿಸ್ ನೀಡಿದ್ದೇವೆ ಅ.2 ರಿಂದ ಪ್ರತಿಭಟನೆ ಮಾಡುವ ಮೂಲಕ ಹೋರಾಟವನ್ನು ಹೆಚ್ಚಿಸಿದ್ದೇವೆ.ನಾವು ಆರೋಗ್ಯ ಇಲಾಖೆಯಲ್ಲಿರುವ ನೌಕರರಂತೆ ಕೆಲಸ ಮಾಡುತ್ತಿದ್ದೇವೆ ಆದರೆ ನಮಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ.ಕೊವಿಡ್ ಕಾರಣದಿಂದ ನಮ್ಮ16 ನೌಕರರು ಮರಣ ಹೊಂದಿದ್ದಾರೆ ಆದರೆ ಅವರಿಗೆ ಪರಿಹಾರ ಸಿಕ್ಕಿಲ್ಲ ನಾವು ಇಷ್ಟು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಪೂರಕವಾಗಿ ಸ್ಪಂದಿಸುತ್ತಿಲ್ಲ ಸರಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ
*******
ಸರಕಾರ ಮನೆಗೆಲಸದವರಿಗೆ,ದಿನಗೂಲಿಗಳಿಗೆ ಮಾಸಿಕ18000ರೂ.ನೀಡಬೇಕು ಎಂದು ಹೇಳುತ್ತದೆ ಆದರೆ ತನ್ನ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ಕೂಲಿ ನೀಡಲು ಹಿಂದೆಮುಂದೆ ನೋಡುತ್ತಿದೆ ಇದು ಯಾವ ರೀತಿಯ ನ್ಯಾಯ ಎಂದು ತಿಳಿಯುತ್ತಿಲ್ಲ