ಆದ್ಯೋತ್ ಸುದ್ದಿನಿಧಿ:
ಪಶ್ಚಿಮಪದವೀಧರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ ಪಶ್ಚಿಮ ಪದವೀಧರರ ಕ್ಷೇತ್ರದ ಹಾವೇರಿ, ಗದಗ, ಧಾರವಾಡ, ಕಾರವಾರ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಲಾಯಿತು.
ಬಸವರಾಜ ಗುರಿಕಾರರವರು ಧಾರವಾಡದ ಬಾಸೆಲ್ ಮಿಶನ ಸ್ಕೂಲ, ಹಂಚಿನಮನಿ ಕಾಲೇಜ, ಸೇಂಟ್ ಜೋಸೆಫ್ ಶಾಲೆ, ಜೆ.ಎಸ್.ಎಸ್ ಕಾಲೇಜ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವಿವಿಧ ಕಡೆ ಪ್ರಚಾರ ಕಾರ್ಯ ಮಾಡಿದರು. ಈ ಸಂಧರ್ಭದಲ್ಲಿ ವಿ.ವಿ ಬಾಗಿದ, ಎಮ್ ಆರ್ ಪಾಟೀಲ ಎಮ್.ಪಿ ಜಾದವ, ಎನ್.ಬಿ ಜಕ್ಕನಕಟ್ಟಿ, ಎಸ.ಕೆ ರಾಮದುರ್ಗ, ಬಸವರಾಜ, ಗಿರೀಶ ಪಾಟೀಲ, ಕೆ.ಎಸ್ ಭೀಮಣ್ಣವರ, ಎಮ್ ಎಸ್ ಕಳ್ಳಿಮನಿ, ಎಸ್.ಎಸ್ ಕಣವಿ, ಸಿ.ಆರ್ ರಡ್ಡೇರ ಶಿವಾನಂದ ಮೂಲಿಮನಿ ಇತರರು ಇದ್ದರು.
ಕಾರವಾರ ಜಿಲ್ಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಬೀರಣ್ಣ ನಾಯಕ ಹಾಗೂ ಶಾಂತಾ ಮುಂಡರಗಿಯವರ ನೇತೃತ್ವದಲ್ಲಿ ಗುರಿಕಾರ ಅವರ ಪರವಾಗಿ ಅಂಕೋಲಾ, ಹೊನ್ನಾವರ, ಭಟ್ಕಳ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪ್ರಚಾರ ನಡದಿದ್ದು ಪದವಿದರರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.
ಎ.ಕೆ ಮುದೋಳ ಹಿರಿಯ ನ್ಯಾಯವಾದಿಗಳು, ಧರ್ಮಪ್ಪ ಕಂಬಳಿ ಯವರನ್ನು ಒಳಗೊಂಡ ತಂಡವು ಗದಗ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಿದರು.
ಶಂಕರ ಸಾವೂರ, ಶಿವರಾಜ ಕರಿಗಾರ, ಯಲ್ಲಪ್ಪ ಜಿರಗೋಡ, ಪ್ರಕಾಶ ಮುಗದ, ಮಂಜುನಾಥ ಹಂಚಿನಮನಿ, ಕಲಮೇಶ ಮುಗದ, ಸಂಗಮೇಶ್ ಕುಂಬಾರ ಹಾಗೂ ಸುರೇಶ್ ಕುಂಬಾರ
ಗಣೇಶ ಜೀರಗೋಡ, ಸೋಮೇಶ ಹಂಚಿನಮನಿ, ಜಗದೀಶ ಜೀರಗೋಡ, ಆಕಾಶ ಜೀರಗೋಡ ರವರು ಹಾವೇರಿ ಜಿಲ್ಲೆ ಹಾಗೂ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಿದರು