ವಿಧಾನಪರಿಷತ್ ಅಭ್ಯರ್ಥಿ ಬಸವರಾಜ ಗುರಿಕಾರ ರಿಂದ ಮತಯಾಚನೆ

ಆದ್ಯೋತ್ ಸುದ್ದಿನಿಧಿ
ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಗುರಿಕಾರ ಗದಗ ಜಿಲ್ಲೆಯ ಗಜೇಂದ್ರಗಡ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಪ್ರಚಾರ ಕಾರ್ಯ ಮಾಡಿದರು,
ಈ ಸಂಧರ್ಭದಲ್ಲಿ ಪದವೀಧರರು ತಮ್ಮ ಅಳಲನ್ನು ತೋಡಿಕೊಂಡರು.

ಪದವೀಧರರ ಸಂಕಷ್ಟಕ್ಕೆ ಸ್ಪಂದಿಸಿ ಮಾತನಾಡಿದ ಗುರಿಕಾರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷನಾಗಿ ಶಿಕ್ಷಕರ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುವಂತೆ ಮಾಡಿದ್ದೇನೆ ಪರಿಷತ್ ಗೆ ಆಯ್ಕೆಯಾದರೆ ಪದವೀಧರರ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಗದಗನ ಜೆ.ಟಿ ಕಾಲೇಜು, ಪುಟ್ಟರಾಜ ಗವಾಯಿಗಳ ಮಹಾವಿದ್ಯಾಲಯ ಸಂಗೀತ ಕಾಲೇಜು, ಸರಕಾರಿ ಪದವಿ ಕಾಲೇಜು, ಅಬ್ದಲ್ ಕಲಾಂ ಕಾಲೇಜು, ಉರ್ದು ಆಂಗ್ಲ ಮಾಧ್ಯಮ ಶಾಲೆ, ಎಲ್.ಐ.ಸಿ, ಕೆ.ಇ.ಬಿ ಹಾಗೂ ಗದಗನ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಿದರು.
ಪ್ರೇಮನಾಥ ಗರಗ, ನ್ಯಾಯವಾದಿಗಳಾದ ಎ.ಕೆ ಮುದೋಳ, ಪುನೇದ ಉಮಚಗಿ, ಶಿವು ಹೊಸಳ್ಳಿಮಠ, ದಜರತಸಾಬ್ ಮೆನಸಗಿ, ಡಿ.ಬಿ ಕಂಬಳಿ, ಶಿವಾನಂದ ಇತರರು ಇದ್ದರು.

ಕುಂದಗೋಳ ತಾಲೂಕಿನ ವಿವಿದ ಗ್ರಾಮಗಳಲ್ಲಿ ರವಿಕುಮಾರ ಜಮಕಂಡಿ, ನಾಗರಾಜ ಉಣಕಲ್, ರಾಘು ನರಗುಂದ ಇವರ ತಂಡವು ಪ್ರಚಾರ ಕಾರ್ಯವನ್ನು ಮಾಡಿದರು.
ಬಸವರಾಜ ಗುರಿಕಾರ ಪರವಾಗಿ ರಮೇಶ ಕುಂಬಾರ ಹಾಗೂ ಸುರೇಶ್ ಕುಂಬಾರ ಇವರು ಉಮಾಚಗಿ,ಮಲ್ಲಿಗ್ವಾಡ್ ಹಾಗೂ ಕೋಳಿವಾಡ ಗ್ರಾಮಗಳಲ್ಲಿ ಪ್ರಚಾರ ಮಾಡಿದರು.

ವಿನಾಯಕ ಗುಡ್ಡದಕೇರಿ, ಗಣೇಶ ಜೀರಗೋಡ, ಸೋಮೇಶ್ ಹಂಚಿನಮನಿ, ಯಲ್ಲಪ್ಪ ಜೀರಗೋಡ, ಕಲ್ಮೇಶ ಮುಗದ, ಫಕ್ಕೀರ ಮುಗದ, ಆಕಾಶ ಜೀರಗೋಡ, ಪ್ರಕಾಶ ಮುಗದ, ಮಂಜು ಹಂಚಿನಮನಿ ಇವರು ಇಂದು ಕಲಘಟಗಿ ತಾಲೂಕಿನ ಹಳ್ಳಿಗಳಾದ ಕುರುವಿನಕೊಪ್ಪ, ಉಗ್ಗೇನಕೇರಿ, ಮಿಶ್ರಿಕೋಟೆ, ಹಿರೇಹೊನ್ನಳ್ಳಿ, ಬೇಗೂರು, ಹುಲಗಿನಕಟ್ಟಿ, ಸಂಗೆದೇವರಕೊಪ್ಪ, ಸೂರಶೆಟ್ಟಿಕೊಪ್ಪ, ಗಂಜೀಗಟ್ಟಿ, ಬೊಗೆ ನಗರಕೊಪ್ಪ, ನಾಗನೂರ, ಪರಸಾಪುರ, ಸೋಲಾರಕೊಪ್ಪ, ಜಿ ಬಸವನಕೊಪ್ಪ, ಹುಣಸಿಕಟ್ಟಿ, ಬಿರವಳ್ಳಿ , ತಬಕದ ಹೊನ್ನಳ್ಳಿ, ಗಂಬ್ಯಾಪೂರ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಮಾಡಿದರು.

ಹುಬ್ಬಳ್ಳಿಯಲ್ಲಿ ಶಂಕರ ಉಪ್ಪಿನ, ರಾಧಿಕಾ ಕೆಂಗಾರ, ರಾಘು ಕಠಾರೆ ಇವರ ತಂಡವು ಪ್ರಚಾರ ಕಾರ್ಯವನ್ನು ಮಾಡಿದರು. ಧಾರವಾಡದ ಹೆಬ್ಬಳ್ಳಿಯಲ್ಲಿ ಆನಂದ ಹಾರಿಕೊಪ್ಪ ರವರ ತಂಡವು ಪ್ರಚಾರ ಕಾರ್ಯ ಮಾಡಿತು‌
ನರಗುಂದ ತಾಲೂಕಿನ ಕಲಕೇರಿ, ಹುನಸಿನಕಟ್ಟಿ, ಜಗತಾಪೂರ, ಸಿದ್ದಾಪೂರ, ಕನಕಿನಕೊಪ್ಪ, ಗುರಲಕಟ್ಟಿ ಗ್ರಾಮಗಳಲ್ಲಿ ಗುರಿಕಾರ ರವರ ಪರವಾಗಿ ಪ್ರಚಾರ ಕಾರ್ಯವನ್ನು ಮಾಡಿದರು ಈ ಸಂಧರ್ಭದಲ್ಲಿ ಗಿರೀಶ ಬಗರಿ, ವೆಂಕಟೇಶ.ಬಿ, ಮಂಜುನಾಥ ಟಿ, ಇತರರು ಇದ್ದರು.

ಜೋಯಿಡಾ, ಸಿರಸಿ, ಸಿದ್ದಾಪೂರ, ಅಂಕೋಲಾ, ಹಾಗೂ ಕಾರವಾರ ನಗರದಲ್ಲಿ ಗುರಿಕಾರ ರವರ ಪರವಾಗಿ ಪದವೀಧರರ ತಂಡವು ಪ್ರಚಾರ ಕಾರ್ಯವನ್ನು ಮಾಡಿತು.

About the author

Adyot

Leave a Comment