ಆದ್ಯೋತ್ ಸುದ್ದಿನಿಧಿ:
ಪಶ್ಚಿಮಪದವೀಧರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಗುರಿಕಾರ
ಸೋಮವಾರ ಗದಗ ಜಿಲ್ಲೆಯ ನರೆಗಲ್ ಪಟ್ಟಣದ ವಿವಿಧ ಭಾಗದಲ್ಲಿ ಪ್ರಚಾರ ನಡೆಸಿದರು.
ಮನೆಮನೆ ಪ್ರಚಾರದ ನಂತರ ಶ್ರೀ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರಚಾರಸಭೆಯಲ್ಲಿ ಮಾತನಾಡಿದ ಗುರಿಕಾರ,ಪ್ರಸ್ತುತ ಪದವೀಧರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಸಮಸ್ಯೆಗಳ ನಿವಾರಣೆಗೆ ಶ್ರಮಿಸುತ್ತೇನೆ ಸದ್ಯ ಉದ್ಯೋಗದಲ್ಲಿರುವ ಮತ್ತು ಉದ್ಯೋಗ ಇಲ್ಲದ ಅಪಾರ ಪ್ರಮಾಣದ ಪದವೀಧರರು ಸರಕಾರದ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ. ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಿದರೆ, ಸಮಸ್ಯೆಗಳ ನಿವಾರಣೆಗೆ ನಿರಂತರ ಶ್ರಮಿಸುವೆ. ಪ್ರಮುಖವಾಗಿ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವಂತೆ ಸರಕಾರದ ಮೇಲೆ ಒತ್ತಡ ತರುವ ಮೂಲಕ ಪದವೀಧರರ ಸೇವೆ ಮಾಡುವುದಾಗಿ ಭರವಸೆ ನೀಡಿದರು.
ನ್ಯಾಯವಾದಿ ಎ.ಕೆ.ಮುಧೊಳ, ಶಿವಾನಂದ ಮೂಲಿಮನಿ, ರಾಜು ರಾಠೋಡ ಸೇರಿದಂತೆ ಅನೇಕರು ಗುರಿಕಾರ ಅವರ ಜೊತೆಯಲ್ಲಿದ್ದರು.
ದಾಂಡೇಲಿ ಮತ್ತು ಹಳಿಯಾಳ ದಲ್ಲಿ ಬಸವರಾಜ ಗುರಿಕಾರ ರವರ ಪರವಾಗಿ ಪದವೀಧರರ ಯುವಕರ ತಂಡವು ಪ್ರಚಾರ ಕಾರ್ಯವನ್ನು ಮಾಡಿದರು.
ಕಲಘಟಗಿಯ ಗುಡ್ ನ್ಯೂಸ್ ಪಧವಿ ಮಹಾವಿದ್ಯಾಲಯ ಹಾಗೂ ಪಿಯು ಕಲಾ ಹಾಗೂ ವಾಣಿಜ್ಯ ವಿದ್ಯಾಲಯ ಮತ್ತು ದಾಸ್ತಿಕೊಪ್ಪ ಸರಕಾರಿ ಪಿಯು ಕಲಾ ಹಾಗೂ ವಾಣಿಜ್ಯ ಕಾಲೇಜ್ ಹಾಗೂ ಸೈನ್ಸ್ ವಿಭಾಗ ದಲ್ಲಿ ವಿನಾಯಕ ಗುಡ್ಡದಕೇರಿ ರವರ ತಂಡವು ಪ್ರಚಾರ ಕಾರ್ಯವನ್ನು ಮಾಡಿತು.
ಯಾದವಾಡ ಲೋಕುರ, ಅದರಗುಂಚಿ, ಅಮ್ಮಿನಭಾವಿ ಯಲ್ಲಿ ಎಸ್.ಡಿ.ಎಮ್.ಸಿ ಯ ಪದಾಧಿಕಾರಿಗಳು ಬಸವರಾಜ ಗುರಿಕಾರ ರವರ ಪರವಾಗಿ ಪ್ರಚಾರ ಕಾರ್ಯವನ್ನು ಮಾಡಿದರು.
ಹಾವೇರಿ ಜಿಲ್ಲೆಯಲ್ಲಿ ನಯನಾ, ಮಲ್ಲಿಕಾರ್ಜುನ, ಚಂದ್ರು ಪೋಟೇರ ಶಂಕರ ಸಾವೂರ, ವೇಣುಗೋಪಾಲ ಬಸವರಾಜ ಗುರಿಕಾರ ರವರ ಪರವಾಗಿ ಪ್ರಚಾರ ಕಾರ್ಯವನ್ನು ಮಾಡಿದರು.
ಧಾರವಾಡದಲ್ಲಿ ಶಂಕರ ಉಪ್ಪಿನ, ರಾಧಿಕಾ ಕೆಂಗಾರ, ರಾಘು ಕಠಾರೆ ಇವರ ತಂಡವು ಪ್ರಚಾರ ಕಾರ್ಯವನ್ನು ಮಾಡಿದರು. ಹೆಬ್ಬಾಳ, ತಿರ್ಲಾಪೂರದಲ್ಲಿ ಗಿರೀಶ ಬಗರಿ, ತಿಪ್ಪಣ್ಣಾ ಇವರ ತಂಡವು ಪ್ರಚಾರ ಕಾರ್ಯವನ್ನು ಮಾಡಿತು. ಹಾಗೂ ಬಸವರಾಜ ಗುರಿಕಾರ ಪರವಾಗಿ ಪಕ್ಕಿರ ಮುಗದ, ಮಂಜುನಾಥ ಹಂಚಿನಮನಿ, ಪ್ರಕಾಶ ಮುಗದ,ಯಲ್ಲಪ್ಪ ಜೀರಗೂಡ, ಆಕಾಶ ಜಿರಗೂಡ, ಕಲಮೇಶ ಮುಗದ, ಗಣೇಶ ಜಿರಗೂಡ, ಸೋಮೇಶ ಹಂಚಿನಮನಿ, ಧಾರವಾಡ ತಾಲೂಕಿನ ಗ್ರಾಮಗಳಾದ ಮಂಗಳ ಗಟ್ಟಿ, ಮುಳಮುತ್ತಲ, ಕುರುಬಗಟ್ಟಿ, ಲೂಕುರ, ಅಮ್ಮಿನಭಾವಿ, ಕಬೇನೂರ, ಕಲ್ಲೇ, ಹನಮನಾಳ, ಪ್ರಚಾರ ಮಾಡಲಾಯಿತು.
ಕುಂದಗೋಳ ತಾಲೂಕಿನಲ್ಲಿ ನಾಗರಾಜ ಉಣಕಲ್, ರಾಘು ನರಗುಂದ ಪ್ರವೀಣ ಇವರ ತಂಡವು ಪ್ರಚಾರ ಕಾರ್ಯವನ್ನು ಮಾಡಿದರು
ಕಾರವಾರ ನಗರದಲ್ಲಿ ಗುರಿಕಾರ ರವರ ಪರವಾಗಿ ಪದವೀಧರರ ತಂಡವು ಪ್ರಚಾರ ಕಾರ್ಯವನ್ನು ಮಾಡಿತು. ಪದವೀಧರರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.