ಆದ್ಯೋತ್ ಸುದ್ದಿನಿಧಿ;
ಇಂದು ಸಾಯಂಕಾಲ ಮಾರುಕಟ್ಟೆ ಪೊಲೀಸ್ ಠಾಣೆಯ ಆವರಣದಲ್ಲಿ ಶಿರಸಿ ತಾಲೂಕಿನ ಅಕ್ರಮ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತರಾದ ಪುಂಡ ರೌಡಿಗಳ ಪರೇಡ್ ನಡೆಸಲಾಯಿತು
ಶಿರಸಿ ಉಪವಿಭಾಗದ ಡಿ.ಎಸ್ಪಿ ಗೋಪಾಲಕೃಷ್ಣ ನಾಯಕರವರ ಮಾರ್ಗದರ್ಶದಲ್ಲಿ
ಶಿರಸಿ ವೃತ್ತ ನಿರೀಕ್ಷಕರಾದ ಪ್ರದೀಪ್ ಬಿ.ಯು ರವರು ರೌಡಿಶೀಟರ್ ಗಳಿಗೆ ಸಮಾಜದಲ್ಲಿ ಅಶಾಂತಿ,ಗಲಭೆ,ಕಾನೂನು ವಿರೋಧಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಕಠಿಣಕ್ರಮ ಕೈಗೊಂಡು ಗಡಿಪಾರು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡುವುದರೊಂದಿಗೆ ಸಮಾಜದಲ್ಲಿಉತ್ತಮ ರೀತಿಯಿಂದ ಗೌರವಯುತವಾದ ಜೀವನ ನಡೆಸಿಕೊಂಡು ಹೋಗಿ ಎಂಬ ಕಿವಿಮಾತು ಹೇಳಿದರು ಶಿರಸಿ ಮಾರುಕಟ್ಟೆ ಠಾಣೆಯ ಪಿಎಸ್ಐ ನಾಗಪ್ಪ,ನಗರಠಾಣೆಯ ಪಿಎಸ್ಐ ಶಿವಾನಂದ ನಾವದಗಿ ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ಯಾಮ ಪವಾಸ್ಕರ ಹಾಗೂ ಸಿಬ್ಬಂದಿಗಳು ಹಾಜರಿದ್ದರು