ಆದ್ಯೋತ್ ಸುದ್ದಿನಿಧಿ:
ಬಿಹಾರ ಚುನಾವಣೆಯಲ್ಲಿ ಗೆದ್ದರೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವುದು ಖಂಡನೀಯವಾಗಿದ್ದು, ಕೊರೋನಾ ಲಸಿಕೆಯನ್ನು ಮತಕ್ಕಾಗಿ ಮಾರುವುದು ಸರಿಯಲ್ಲ ಎಂದು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಭರಮಸಾಗರ ಹೇಳಿದರು
ಅವರು ಶನಿವಾರ ಭರಮಸಾಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಜನರು ಕಟ್ಟಿರುವ ತೆರಿಗೆ ರೂಪದಲ್ಲಿನ ಹಣದಿಂದ ಲಸಿಕೆ ತಯಾರು ಮಾಡಲಾಗುತ್ತಿದೆ ಇದು ಬಿಜೆಪಿ ಹಣದಿಂದಲ್ಲ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಈ ರೀತಿ ಘೋಷಣೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ ಪ್ರವೀಣ
ಲಸಿಕೆ ಕಂಡು ಹಿಡಿಯಲು ಇಡೀ ವಿಶ್ವದ ವೈದ್ಯಲೋಕದ ತಜ್ಞರು ಪ್ರಯತ್ನ ಮಾಡುತ್ತಿದ್ದಾರೆ ಆದರೆ ಬಿಜೆಪಿಯವರು ಔಷಧಿ ಬರುವ
ಮೊದಲೇ ಲಸಿಕೆ ಉಚಿತವಾಗಿ ನೀಡುತ್ತೇವೆ ಎನ್ನುವುದು ವ್ಯಂಗ್ಯವಾಗಿದೆ ಎಂದು ಹೇಳಿದರು.
ಮಾಜಿ ಅಧ್ಯಕ್ಷ ಕೆ.ಪಿ.ಶ್ರೀನಿವಾಸ್ ನಾಯಕ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಟಿ.ನಿರಂಜನ್ ಮೂರ್ತಿ ಬಿ.ಪಿ. ಪ್ರಸನ್ನ,ಎಂ.ಕೆ.ಸಂತೋಷ, ಸಯದ್ ಜಾಫರ್ ಶರೀಫ್ ಹಾಗೂ ಜಹೀರ್ ಹರೀಶ ಇಂತಿಯಾಜ್ ಮುಂತಾದ
ಕಾಂಗ್ರೆಸ್ ಯೂತ್ಸ್ ಮುಖಂಡರುಗಳು ಭಾಗಿಯಾಗಿದ್ದರು