ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಪಶ್ಚಿಮಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರವಾಗಿ ಪ್ರಚಾರಕ್ಕೆ
ರವಿವಾರ ಮಾಜಿ ಸಚೀವ ಹೆಚ್.ಕೆ.ಪಾಟೀಲ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಹೆಚ್.ಕೆ.ಪಾಟೀಲ,ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ ಆದರೂ ದೇವರ ಆಶೀರ್ವಾದವಿದ್ದರೆ ನಾನೂ ಮುಖ್ಯಮಂತ್ರಿಯಾಗಬಹುದು. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಳ ಆಯ್ಕೆ ಶಾಸಕರಿಂದ ನಡೆಯುತ್ತದೆ ಮತ್ತು ವರಿಷ್ಠರ ತೀರ್ಮಾನವಾಗಿರುತ್ತದೆ. ಈ ಸಮಯದಲ್ಲಿ ನಮ್ಮ ಪಕ್ಷದ ಶಾಸಕರು, ಪತ್ರಕರ್ತರ ಎದುರು,ಹಾದಿಬೀದಿಯಲ್ಲಿ ಮುಖ್ಯಮಂತ್ರಿ ಆಗುವ ಬಗ್ಗೆ ಮಾತನಾಡಿ ಗೊಂದಲ ಸೃಷ್ಠಿಸುವುದು ಸರಿಯಲ್ಲ ಎಂದು ಹೇಳಿದರು.
ಬಿಜೆಪಿ ಹಾಗೂ ಪ್ರದಾನಮಂತ್ರಿ ನರೇಂದ್ರ ಮೋದಿಯವರು ಚುನಾವಣೆಯ ಮೊದಲು ಕಪ್ಪುಹಣವನ್ನು ತಂದು ಬಡವರ ಖಾತೆಗೆ ಹಾಕುತ್ತೇವೆ,ರೈತರ ಬೆಳೆ ದ್ವಿಗುಣ ಗೊಳಿಸುತ್ತೇವೆ,ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಠಿಮಾಡುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದರು ಆದರೆ ನೋಟು ಅಮಾನ್ಯೀಕರಣ ಮಾಡಿ ಜನರ ತೊಂದರೆ ಕೊಟ್ಟರೆ ಹೊರತು ಕಪ್ಪು ಹಣತರಲಿಲ್ಲ,ರೈತ ವಿರೋಧಿ ಕಾನೂನು ತರುವ ಮೂಲಕ ರೈತರನ್ನು ತುಳಿಯುತ್ತಿದ್ದಾರೆ, ಖಾಸಗೀಕರಣ ಮಾಡುವ ಮೂಲಕ ಉದ್ಯೋಗ ನಷ್ಟವುಂಟು ಮಾಡುತ್ತಿದ್ದಾರೆ ಇದು ನರೇಂದ್ರ ಮೋದಿ,ಬಿಜೆಪಿಯವರ ಬಹುದೊಡ್ಡ ಸಾಧನೆಯಾಗಿದೆ. ಸುಳ್ಳು ಹೇಳಿ ಜನರ ದಾರಿತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ಈ ಎಲ್ಲ ವಿಷಯಗಳ ಬಗ್ಗೆ ಕಾಂಗ್ರೇಸ್ ಪಕ್ಷ ನಿರಂತರ ಹೋರಾಟವನ್ನು ಮಾಡುತ್ತಿದೆ. ಸಂಸತ್ತಿನ ಒಳಗೆ ನಾವು ಈ ಕಾನೂನು ಜಾರಿಗೆ ತರಬಾರದು ಎಂದು ಒತ್ತಾಯ ಮಾಡಿದ್ದೇವು ಸಾಕಷ್ಟು ಪಕ್ಷಗಳು ನಮ್ಮನ್ನು ಬೆಂಬಲಿಸಿದ್ದವು ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಯಾವುದೇ ಚರ್ಚೆ ನಡೆಸದೆ,ಸದನದಲ್ಲಿ ಮತಕ್ಕೂ ಹಾಕದೆ ಕಾನೂನು ಅಂಗೀಕಾರವಾಗುವಂತೆ ಮಾಡಲಾಯಿತು.ಸಂಸತ್ತಿನ ಹೊರಗು ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತಿದ್ದು ಅ.31ರಂದು ಜಿಲ್ಲಾ ಕೇಂದ್ರದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದೇವೆ ನವಂಬರ14ರ ಒಳಗೆ ರೈತರಿಂದ ಎರಡಕೋಟಿ ಸಹಿ ಸಂಗ್ರಹ ಮಾಡಿ ನವಂಬರ್ 19 ದಿ.ಇಂದಿರಾಗಾಂಧಿಯವರ ಜನ್ಮ ದಿನಾಚರಣೆಯ ದಿನದಂದು ನಮ್ಮ ನಾಯಕಿ ಸೋನಿಯಾ ಗಾಂಧಿಯವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿ ಸರಕಾರವನ್ನು ಎಚ್ಚರಿಸಲಿದ್ದೇವೆ ಎಂದು ಹೆಚ್.ಕೆ.ಪಾಟೀಲ ಹೇಳಿದರು.
ರಾಜ್ಯಸರಕಾರ ಎಲ್ಲಾ ವಿಷಯದಲ್ಲೂ ವಿಫಲವಾಗಿದೆ ಬ್ರಷ್ಟಾಚಾರ,ಅವ್ಯವಹಾರ ಮಿತಿಮೀರಿದೆ, ಮಾದ್ಯಮದವರನ್ನು,ಪತ್ರಕರ್ತರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಬಿಜೆಪಿಯಲ್ಲಿರುವ ಒಳಜಗಳದ ಲಾಭ ಪಡೆದು ನಾವು ಸರಕಾರವನ್ನು ಬೀಳಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದ ಪಾಟೀಲರು, ಪಶ್ಚಿಮಪದವೀಧರ ಕ್ಷೇತ್ರ ನನ್ನ ರಾಜಕೀಯ ಮರುಹುಟ್ಟು ನೀಡಿದ ಕ್ಷೇತ್ರ ನಾನು ಈ ಕ್ಷೇತ್ರದಿಂದ ಗೆದ್ದು ಶಾಸಕನಾಗಿದ್ದೇನೆ ಸಚೀವನಾಗಿದ್ದೇನೆ,ರಾಜಕೀಯ ಏಳಿಗೆ ಕಂಡಿದ್ದೇನೆ ಈಗ ರಾಷ್ಟೀಯ ಮಟ್ಟದಲ್ಲಿ ಪಕ್ಷದ ಹುದ್ದೆಯನ್ನು ನಿಭಾಯಿಸುತ್ತಿದ್ದೇನೆ ಹೀಗಾಗಿ ಈಬಾರಿಯೂ ಕಾಂಗ್ರೆಸ್ ಪಕ್ಷವು ಇಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಚುನಾವಣೆ ರಾಜಕೀಯ ದುಡ್ಡಿನ ಪ್ರಭಾವದಿಂದಾಗಿ ಪ್ರಜಾಪ್ರಭುತ್ವ ಆದರ್ಶ ವ್ಯವಸ್ಥೆ ಹದಗೆಡುತ್ತಿದೆ ಇದರಿಂದ ಎತ್ತರದ ಆಸೆ ಇರಿಸಿಕೊಂಡಿರುವ ಪ್ರಜ್ಞಾವಂತ ಜನರು ನಿರಾಸೆ ಅನುಭವಿಸುತ್ತಿದ್ದಾರೆ, ಇದರಿಂದ ಜನರ ಭಾವನೆ ಘನೀಕರಿಸುತ್ತಿದೆ ಇದು ಆಕ್ರೋಶವಾಗುವ ಸಾಧ್ಯತೆ ಇದೆ—ಹೆಚ್.ಕೆ.ಪಾಟೀಲ