ಗಂಗಾವತಿ ನಗರಸಭಾ ಸದಸ್ಯನ ಅಪಹರಣ: ಹಳಿಯಾಳದಲ್ಲಿ ಆರೋಪಿಗಳ ಬಂಧನ

ಆದ್ಯೋತ್ ಸುದ್ದಿನಿಧಿ:
ನವಂಬರ್ 2ರಂದು ನಡೆಯಲಿರುವ ಗಂಗಾವತಿ ನಗರಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಮನೋಹರ ಸ್ವಾಮಿಯನ್ನು ಗಂಗಾವತಿ ನಗರದ ಬಾರ್ & ರೆಸ್ಟೋರೆಂಟ್ ನಿಂದ ಅಪಹರಣ ಮಾಡಲಾಗಿತ್ತು.ಘಟನೆ ಅ.29ರಂದು ನಡೆದಿದ್ದರೂ ಅ.30 ರ ತಡರಾತ್ರಿ ದೂರು ದಾಖಲಾಗಿತ್ತು.ದೂರು ದಾಖಲಾದ ದಿನ ಬೆಳಗಿನಜಾವ 5-30 ರ ಸುಮಾರಿಗೆ ಹಳಿಯಾಳ ಪೊಲೀಸ್ ಠಾಣೆಗೆ ಬಂದ ವ್ಯಕ್ತಿಯೊಬ್ಬ ತಾನು ಕೊಪ್ಪಳದ ಗಂಗಾವತಿ ನಗರಸಭಾ ಸದಸ್ಯನಿದ್ದು ಮನೋಹರ ಸ್ವಾಮಿ ಎಂದು ನನ್ನ ಹೆಸರು ನಿನ್ನೆ ರಾತ್ರಿ ನಾಲ್ಕು ಜನರು ನನ್ನನ್ನು ಅಪಹರಿಸಿ ಒಯ್ಯುತ್ತಿರುವಾಗ ಮೂತ್ರವಿಸರ್ಜನೆಯ ನೆಪ ಹೇಳಿ ಕಾರಿನಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ.

ಪೊಲೀಸ್ ರು ನಗರದಲ್ಲಿ ತಲಾಷ್ ನಡೆಸಿದಾಗ ಕಾರು ಬಾಬುರಾವ್ ಲಾಡ್ಜ್ ಹತ್ತಿರ ನಿಂತಿರುವುದು ಕಂಡು ಬಂದಿದೆ.ನಗರದ ಜವಹಾರ ರಸ್ತೆಯಲ್ಲಿ ರಾಕೇಶ್ ಅಡಿವೆಪ್ಪ ನಾಯ್ಕ,ಗಂಗಾವತಿ, ಶರಣ್ಬಸಪ್ಪ ಬಸವರಾಜ್ ಒಂಕಣಿಕೋಂಟಿ
ಗಂಗಾವತಿ,ಹಾಗೂ ಕಾರ್ ಡ್ರೈವರ್ ಬಸವರಾಜ್ ಮಲ್ಲಪ್ಪ ಉಪ್ಪಾರ ಎಂಬುವವರನ್ನು ಬಂಧಿಸಲಾಗಿದೆ.ರವಿ ಕುರಬ ಎನ್ನುವವನು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆರೋಪಿಗಳು ನಗರ ಸಭಾ ಸದಸ್ಯನನ್ನು ಧರ್ಮಸ್ಥಳಕ್ಕೆ ಕರೆದೊಯ್ಯುವ ಯೋಚನೆಯಲ್ಲಿದ್ದರು ಎಂದು ಪ್ರಥಮ ಮಾಹಿತಿಯಲ್ಲಿ ತಿಳಿದುಬಂದಿದೆ.

KA04MW 6187 ನೊಂದಣಿಯ ಕಾರನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.
ಸದರ ಅಪಹರಣ ಪ್ರಕರಣದ ಬಗ್ಗೆ ಈಗಾಗಲೇ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನ ನಂ 150/2020 U/s 143,147,365,506 R/w 149 IPC ಪ್ರಕಾರ ಪ್ರಕರಣ ದಾಖಲಾಗಿದೆ.

About the author

Adyot

Leave a Comment