ಅರಣ್ಯ ಇಲಾಖೆಯ ನೌಕರರು ಕೆಲಸ ಮಾಡುವುದನ್ನು ಕಿರುಕುಳ ಎಂದು ಭಾವಿಸಬಾರದು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ವಿಭಾಗದ ಶಿರಸಿ,ಸಿದ್ದಾಪುರ,ಯಲ್ಲಾಪುರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಪದೆ ಪದೆ ಸಂಘರ್ಷಗಳು ಏರ್ಪಡುತ್ತಿದ್ದು ಜನರು ಅರಣ್ಯ ಇಲಾಖೆಯವರನ್ನು ತಮ್ಮ ವಿರೋಧಿಗಳು ಎಂದು ಭಾವಿಸುವಂತಾಗಿದೆ.

ಇದಕ್ಕೆ ಸಾರ್ವಜನಿಕರಲ್ಲಿರುವ ತಪ್ಪು ಮಾಹಿತಿ ಎಷ್ಟು ಕಾರಣವೋ ಇಲಾಖೆಯ ಕೆಳಹಂತದ ನೌಕರರು ಅಷ್ಟೇ ಕಾರಣ.
ನೆರೆಯ ಶಿವಮೊಗ್ಗ ಜಿಲ್ಲೆಯಲ್ಲಿ ಅತಿಕ್ರಮಣದಾರರಿಗೆ ಆಗದ ಸಮಸ್ಯೆ ಉತ್ತರಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವುದಕ್ಕೆ ಅರಣ್ಯ ಇಲಾಖೆಯವರಷ್ಟೆ,ಜಿಲ್ಲೆಯ ಜನಪ್ರತಿನಿಧಿಗಳ,ಅಧಿಕಾರಿಗಳ ಜೊತೆಗಿನ ಹೊಂದಾಣಿಕೆಯೂ ಕಾರಣ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಜನರಿಗೆ ಅರಣ್ಯ ಇಲಾಖೆಯ ಮೇಲೆ ಇರುವ ಅಸಹನೆ ತಗ್ಗಿಸಲು
ಹಾಗೂ ಅತಿಕ್ರಮಣ ಖುಲ್ಲಾಪಡಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಲು ಸಿದ್ದಾಪುರ ಹೊಸೂರು ಟ್ರೀ ಪಾಕ್೯ನಲ್ಲಿ,ಶಿರಸಿ ವಿಭಾಗದ ಉಪಅರಣ್ಯಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಸುದ್ದಿಗೋಷ್ಠಿ ನಡೆಸಿದರು
ಅರಣ್ಯ ಇಲಾಖೆ ಯಾವಾಗಲೂ ಅಭಿವೃದ್ಧಿಯ ಪರವಾಗಿದ್ದು ಯಾವುದೇ ರೀತಿಯ ಅಭಿವೃದ್ಧಿಗೂ ನಾವು ವಿರೋಧಿಸುತ್ತಿಲ್ಲ
ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದು ಕಿರುಕಳ ಎಂದು ಯಾರೂ ಭಾವಿಸಬಾರದು ಅರಣ್ಯ ನೌಕರರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ ಅರಣ್ಯ ಹಕ್ಕು ಸಮಿತಿಯಡಿಯಲ್ಲಿ ದಾಖಲಾಗಿರುವ 10530 ಅತಿಕ್ರಮಣ ಪ್ರಕರಣದಲ್ಲಿರುವ ಯಾರನ್ನು ನಾವು ಖುಲ್ಲಾಪಡಿಸುತ್ತಿಲ್ಲ.ಹೊಸ ಅತಿಕ್ರಮಣದಾರರನ್ನು ಖುಲ್ಲಾಪಡಿಸುತ್ತೇವೆ ಇದು ಕಾನೂನಿನ ಪ್ರಕಾರ ನಡೆಯುತ್ತದೆ ಅರಣ್ಯ ಇಲಾಖೆಯವರಿಗೂ ಮಾನವೀಯತೆ ಇದೆ ಇದರಲ್ಲಿ ಅರಣ್ಯ ಇಲಾಖೆಯ ನೌಕರರ ಸ್ವಹಿತಾಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ ಎಸ್.ಜಿ.ಹೆಗಡೆ
ಅರಣ್ಯ ಇಲಾಖೆ ಯಾವಾಗಲೂ ಅಭಿವೃದ್ಧಿ ಪರವಾಗಿದ್ದು ಯಾವುದೇ ರೀತಿಯ ಅಭಿವೃದ್ಧಿಗೂ ನಾವು ವಿರೋಧಿಸುತ್ತಿಲ್ಲ ಎಂದು ಹೇಳಿದರು
ಸಿದ್ದಾಪುರ ತಾಲೂಕಿನಲ್ಲಿರುವ ಅರಣ್ಯ ಪ್ರದೇಶ ಅತಿಅಪರೂಪದ ಸಸ್ಯ ಪ್ರಭೇದಗಳನ್ನು ಹೊಂದಿದೆ .ಇಲ್ಲಿಯ ಕತ್ತಲೆಕಾನನಿನಲ್ಲಿರುವ ಸಸ್ಯ ಪ್ರಭೇದ ಈಡೀ ಪ್ರಪಂಚದಲ್ಲೆ ಇಲ್ಲ,ಮಳೆಗಾಲದಲ್ಲಿ ನೀರನ್ನು ಹಿಡಿದಿಟ್ಟು ಬೇಸಿಗೆಯಲ್ಲಿ ನೀರನ್ನು ಬಿಡುವ ಗುಣವುಳ್ಳ ರಾಮಪತ್ರೆಜಡ್ಡಿಯಂತಹ ಸಸ್ಯಪ್ರಭೇದ ಇಲ್ಲಿದೆ.ದೇವರಕಾಡು,ವಿವಿಧ ಬಗೆಯ ನೈಸರ್ಗಿಕ ಜಲಪಾತಗಳೂ ಇಲ್ಲಿವೆ,2009ರ ಗಣತಿಯ ಪ್ರಕಾರ ಜಗತ್ತಿನಲ್ಲಿ ಸಿಂಗಳೀಕ ಇರುವುದು ಕೇವಲ 3000 ಅದರಲ್ಲಿ ಸಿದ್ದಾಪುರ,ಗೆರುಸೊಪ್ಪದಲ್ಲಿ 638 ಇದೆ. ಕ್ಯಾದಗಿ ವಲಯದಲ್ಲಿ ಸಿಂಗಳೀಕಗಳ 15 ಗುಂಪು ಹಾಗೂ ಸಿದ್ದಾಪುರ ವಲಯದಲ್ಲಿ 2 ಗುಂಪುಗಳಿವೆ ಹೀಗೆ ಅರಣ್ಯ ಇಲಾಖೆಯ,ಅರಣ್ಯದ ಬಗ್ಗೆ ಹೇಳಿರುವ ಎಲ್ಲವೂ ಸಿದ್ದಾಪುರದಲ್ಲಿದೆ ಇದೆಲ್ಲವನ್ನು ನಮ್ಮ ಹಿರಿಯರು ನಮಗಾಗಿ ಉಳಿಸಿದ್ದಾರೆ.ನಾವು ನಮ್ಮ ಮುಂದಿನ ಪೀಳಿಗೆಗೆ ಇದನ್ನು ಉಳಿಸಬೇಕಾದಂತಹ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಅರಣ್ಯ ಇಲಾಖೆ ಅರಣ್ಯ ಉಳಿಸುವ ಸಲುವಾಗಿ ಸಾಕಷ್ಟು ಕಾನೂನು ತಂದಿದ್ದು ಸ್ಯಾಟಲೈಟ್ ಮೂಲಕ ಹದ್ದಿನಕಣ್ಣಿನಿಂದ ಅರಣ್ಯವನ್ನು ರಕ್ಷಿಸುತ್ತಿದೆ. ಗ್ರಾಮಅರಣ್ಯ ಸಮಿತಿಯನ್ನು ರಚಿಸಿರುವುದರಿಂದ ಸಾಕಷ್ಟು ಪ್ರಯೋಜನವಾಗಿದ್ದು ಜನರಿಗೆ ಅರಣ್ಯ ಬೆಳೆಸುವ ಸಹಭಾಗಿತ್ವ ದೊರಕುತ್ತಿದೆ ಜೊತೆಗೆ ಸಾಕಷ್ಟು ಆದಾಯವೂ ದೊರಕುತ್ತಿದೆ ಬೆಟ್ಟದ ಆದಾಯದಲ್ಲಿ ಶೇ75ರನ್ನು ರೈತರಿಗೆ ನೀಡಲಾಗುತ್ತಿದೆ. ಅತಿಕ್ರಮಣದಾರರು ಅರಣ್ಯಹಕ್ಕು ಸಮಿತಿಯಡಿಯಲ್ಲಿ ಅರ್ಜಿ ಸಲ್ಲಿಸಿದ್ದರೆ ಅಂತಹ ಜಾಗವನ್ನು ಖುಲ್ಲಾಪಡಿಸಲು ಅರಣ್ಯ ನೌಕರರು ಮುಂದಾರೆ ಅಂತಹವರು ವಲಯ ಅರಣ್ಯ ಅಧಿಕಾರಿಗಳನ್ನು ಭೇಟಿ ಮಾಡಿ ದಾಖಲೆ ತೋರಿಸಿದರೆ ಅಂತಹ ಜಾಗವನ್ನು ಖುಲ್ಲಾಪಡಿಸುವುದಿಲ್ಲ ಅಂತಹ ನೌಕರರ ಮೇಲೆ ಕ್ರಮತೆಗೆದುಕೊಳ್ಳಲಾಗುವುದು ಆದ್ದರಿಂದ ಅತಿಕ್ರಮಣದಾರರು ಯಾರೊ ನೀಡುವ ತಪ್ಪು ಮಾಹಿತಿಗಳನ್ನು ಆದರಿಸಿ ಅರಣ್ಯ ಇಲಾಖೆಯವರ ಮೇಲೆ ತಪ್ಪುತಿಳಿಯಬಾರದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸಿಎಪ್ ಅಜೀಜ್ ಅಹ್ಮದ್,ಪ್ರಭು ಬಿರಾದಾರ,ಆರ್‍ಎಪ್‍ಓ ಶಿವಾನಂದ ನಿಂಗಾಣಿ,ಹರೀಶ ಉಪಸ್ಥಿತರಿದ್ದರು.
*****
ಸಿದ್ದಾಪುರ ತಾಲೂಕಿನಲ್ಲಿ65984 ಹೆಕ್ಟೇರ್ ಅರಣ್ಯಪ್ರದೇಶವಿದೆ 12224 ಹೆಕ್ಟೇರ್ ಬೆಟ್ಟಪ್ರದೇಶವಿದೆ
ಬುರುಡೆ ಜೋಗಫಾಲ್ಸ್,ಉಂಚಳ್ಳಿ ಜಲಪಾತ,ಹುಸೂರು ಜಲಪಾತ,ನೆಟ್ಟಗೋಡು ಜಲಪಾತ ಸೇರಿದಂತೆ ಹತ್ತಾರು ಜಲಪಾತವಿದೆ.
ಪ್ರಪಂಚದ ಬೇರಾವ ಅರಣ್ಯದಲ್ಲೂ ಇಲ್ಲದ ಸೆಮಿಕಾರ್ನರ್ ಕತ್ತಲೆಕಾನ್ಸ ಎನ್ನುವ ಸಸ್ಯ ಪ್ರಭೇದ ಇಲ್ಲಿದೆ.
ಸುಮಾರು 300 ಪ್ರಭೇಧವುಳ್ಳ ರಾಮಪತ್ರೆಜಡ್ಡಿಯ 97 ಪ್ರಭೇದಗಳು ಇಲ್ಲಿವೆ
ತಾಲೂಕಿನ 66 ಗ್ರಾಮಸಮಿತಿಗೆ ಕಳೆದ ವರ್ಷ 39.71ಕೋಟಿರೂ ನೀಡಲಾಗಿದೆ. ಈ ವರ್ಷ 1.25ಕೋಟಿರೂ. ಅನುದಾನ ಮಂಜೂರಾಗಿದ್ದು ಅದನ್ನು ಸದ್ಯದಲ್ಲೆ ವಿತರಿಸಲಾಗುವುದು.ಕಾಡುಪ್ರಾಣಿಗಳಿಂದ ಬೆಳೆ ನಾಶದ 73 ಪ್ರಕರಣದಲ್ಲಿ 2.46ಲಕ್ಷರೂ. ನೀಡಲಾಗಿದೆ.3.68ಲಕ್ಷರೂ. ಮಂಜೂರಾಗಿದೆ.
ಎಸ್.ಜಿ.ಹೆಗಡೆ

About the author

Adyot

Leave a Comment