ಯಲ್ಲಾಪುರದಲ್ಲಿ ಅಂತರರಾಜ್ಯ ಎ.ಟಿ.ಎಮ್.ಕಳ್ಳನ ಬಂಧನ :: ಇನೋವಾ ಕೊಡುತ್ತೇನೆಂದು ಹಣ ವಂಚನೆ ಮಾಡಿದವನ ಬಂಧನ

ಆದ್ಯೋತ್ ಸುದ್ದಿನಿಧಿ:
ಅಂತರ್‍ರಾಜ್ಯ ಕಳ್ಳನ ಬಂಧನ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಎ.ಟಿ.ಎಮ್. ಕಾರ್ಡ ಬದಲಿಸಿ ಹಣ ತೆಗೆಯುತ್ತಿದ್ದ ಅಂತರ್‍ರಾಜ್ಯ ಕಳ್ಳನನ್ನು ಬುಧವಾರ ಬಂಧಿಸಿ 18000ರೂ. ವಶಪಡಿಸಿಕೊಳ್ಳಲಾಗಿದೆ.
ಆರೋಪಿತನನ್ನು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರ ತಾಲೂಕಿನ ಬೊಟ್ಟದಪ್ಪನಹಲ್ಳಿ ವೇಣುಗೋಪಾಲ ಕೃಷ್ಣ ರೆಡ್ಡಿ(50) ಗುರುತಿಸಲಾಗಿದೆ.

3-11-2020 ರಂದು ಇಂತಹದ್ದೆ ಘಟನೆಯ ಪರಿಶೀಲನೆ ನಡೆಸುತ್ತಿದ್ದಾಗ ಎಟಿಎಮ್‍ನಲ್ಲಿರುವ ಸಿ.ಸಿ.ಟಿ.ವಿಯಲ್ಲಿ ದಾಖಲಾದ ಫೊಟೋ ಮೂಲಕ ಆರೋಪಿಯನ್ನು ಪತ್ತೆಹಚ್ಚಲಾಗಿದೆ.
2019ರಲ್ಲಿ ಯಲ್ಲಾಪುರದಲ್ಲೂ ಈ ವ್ಯಕ್ತಿ ಹಣಲಪಟಾಯಿಸಿರುವ ಬಗ್ಗೆ ದೂರು ದಾಖಲಾಗಿತ್ತು. ಇದಲ್ಲದೆ ಗೌರಿಬಿದನೂರು,ಮಧುಗಿರಿ,ಬಾಗೇಪಲ್ಲಿ,ಮಡಿವಾಳ,ಹಳಿಯಾಳ,ಶಿರಸಿ,,ಚಿತ್ರದುರ್ಗ,ಬೀದರ,ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲೂ ಇದೇ ತರಹದ ಅಪರಾಧ ಎಸಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.

ಎಸ್.ಪಿ.ಶಿವಪ್ರಕಾಶ ದೇವರಾಜು,ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ನ ನಾಯಕ ಮಾರ್ಗದರ್ಶನದಲ್ಲಿ ಯಲ್ಲಾಪುರ ಠಾಣೆಯ ಪಿ.ಐ.ಸುರೇಶ ಯಳ್ಳೂರು ನೇತೃತ್ವದಲ್ಲಿ ಪಿ.ಎಸ್.ಐ ಮಂಜುನಾಥ ಗೌಡರ್,ಭೀಮಸಿಂಗ ಲಮಾಣಿ ಹಾಗೂ ಸಿಬ್ಬಂದಿಗಳು ದಸ್ತಗಿರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
—-
ಕಡಿಮೆ ಹಣಕ್ಕೆ ಇನೋವಾ ಕಾರು ನೀಡುತ್ತೆನೆಂದು ನಂಬಿಸಿ ಹಣದೋಚುತ್ತಿದ್ದ ಆರೋಪಿಯ ಬಂಧನ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಕಳೆದ ಜುಲೈನಲ್ಲಿ ಇನೋವಾ ಕಾರನ್ನು ಕಡಿಮೆ ಹಣಕ್ಕೆ ನೀಡುತ್ತೇನೆಂದು ನಂಬಿಸಿ ಹಣದೋಚಿದ್ದ ಆರೋಪಿಯನ್ನು ಬುಧವಾರ ಬಂಧಿಸಿರುವ ಯಲ್ಲಾಪುರ ಪೊಲೀಸ್‍ರು ಆರೋಪಿಯಿಂದ 8 ಲಕ್ಷರೂ. ಮೌಲ್ಯ ಬಲೆನೋ ಕಾರು ಹಾಗೂ 2.30ಲಕ್ಷರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಶಿವಗಂಗಾದ ಮಂಜುನಾಥ ಬಿ.,ಎಸ್.(32) ಆರೋಪಿತನಾಗಿದ್ದು ಹಾಲಿ ಬೆಂಗಳುರಿನ ಯಲಹಂಕಾದಲ್ಲಿ ವಾಸ್ತವ್ಯ ಇದ್ದು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ,ಆಂದ್ರಪ್ರದೇಶದ ಕಡಪ ಜಿಲ್ಲೆಯಲ್ಲೂ ಇದೇ ಮಾದರಿಯಲ್ಲಿ ವಂಚನೆ ಮಾಡಿರುವ ಬಗ್ಗೆ ತನಿಖೆಯ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.

About the author

Adyot

Leave a Comment