ಮಂಗಳೂರಿನಲ್ಲಿ ನಡೆಯಿತು ಬಿಜೆಪಿ ಕಾರ್ಯಕಾರಣಿ

ಆದ್ಯೋತ್ ಸುದ್ದಿನಿಧಿ:
ಮುಂಬರುವ ಗ್ರಾಪಂ ಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾಪಕ್ಷವು ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕಾರಣಿ ಸಭೆಯನ್ನು ಗುರುವಾರ ಮಂಗಳೂರಿನಲ್ಲಿ ಆಯೊಜಿಸಿತ್ತು.

ಬಿಜೆಪಿಯ ಪ್ರಮುಖರು ಭಾಗವಹಿಸಿದ್ದ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿ, ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಕೊವಿಡ್‍ನಂತಹ ಕಠಿಣ ಪರಿಸ್ಥಿತಿಯಲ್ಲೂ ರಾಜ್ಯಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ನೀರಾವರಿ ಯೋಜನೆ ಸಹಿತ ಬಜೆಟ್‍ನಲ್ಲಿ ಘೋಷಿಸಿದ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ರಾಜ್ಯದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ವರದಿ ಬರುತ್ತಿದೆ. ಸಣ್ಣ ವಯಸ್ಸಿನ ಹೆಣ್ಣುಮಕ್ಕಳಿಗೆ ಹಣ,ಪ್ರೀತಿ,ಪ್ರೇಮ ಎಂಬೆಲ್ಲ ಆಮೀಷ ಒಡ್ಡಿ ಮತಾಂತರಗೊಳಿಸುತ್ತಿರುವುದನ್ನು ಭಾರತೀಯ ಜನತಾಪಕ್ಷ ಗಂಭೀರವಾಗಿ ಪರಿಗಣಿಸಿದೆ ಈ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದು ಇದಕ್ಕೆ ತಾರ್ಕಿಕ ಅಂತ್ಯವನ್ನು ಕಾಣಿಸಲಿದ್ದೇವೆ. ಸಮಗ್ರ ಪರಿಶೀಲನೆಯ ನಂತರ ಕಠಿಣ ಕಾನೂನು ರೂಪಿಸಲಿದ್ದೇವೆ,

ಕೊವಿಡ್ ಸಂಕಷ್ಟದಿಂದ ಹದಗೆಟ್ಟಿದ್ದ ಆರ್ಥಿಕ ಪರಿಸ್ಥಿತಿ ಈಗ ಸುಧಾರಿಸುತ್ತಿದೆ. ಶಾಸಕರ ನಿಧಿಯ ಮೊದಲನೇ ಕಂತು 50ಲಕ್ಷರೂ.ವನ್ನು ನೀಡಲಾಗಿದ್ದು ಎರಡನೇ ಕಂತನ್ನು ಬಿಡುಗಡೆ ಮಾಡಲಾಗುತ್ತಿದೆ.ಮಹಾತ್ಮಾ ಗಾಂದಿ ನಗರ ವಿಕಾಸ ಯೋಜನೆಯಡಿಯಲ್ಲಿ 125ಕೊಟಿರೂ.ವರೆಗೂ ಖರ್ಚು ಮಾಡುವ ಅವಕಾಶವಿರುತ್ತದೆ ನಮ್ಮ ಸರಕಾರದ ಮಹತ್ವದ ಯೋಜನೆ ಇದಾಗಿದ್ದು ಮಂಗಳೂರು,ಹುಬ್ಬಳ್ಳಿ-ಧಾರವಾಡ,ಬೆಳಗಾವಿ,ಕಲಬುರ್ಗ,ಬಳ್ಳಾರಿ,ದಾವಣಗೆರೆ,ಶಿವಮೊಗ್ಗ,ವಿಜಯಪುರ,ಮೈಸೂರು,ತುಮಕೂರು ನಗರಗಳ ಮಹಾನಗರಪಾಲಿಕೆಗೆ 50ಕೋಟಿರೂ. ಬಿಡುಗಡೆ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ದೇಶಕ್ಕೆ ಮಾದರಿಯಾಗುವಂತೆ ಡ್ರಗ್ಸ್ ಮಾಫಿಯಾ ಮಟ್ಟಹಾಕಲು ದೃಢವಾದ ಹೆಜ್ಜೆಯನ್ನು ನಮ್ಮ ಸರಕಾರ ಇಟ್ಟಿದೆ.ಡ್ರಗ್ಸ್ ಜಾಲಕ್ಕೆ ಬಲಿಯಾಗುವ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಡ್ರಗ್ಸ್ ವಿರುದ್ಧ ಕಠಿಣ ಕಾನೂನು ಕ್ರಮತೆಗೆದುಕೊಳ್ಳುತ್ತಿದ್ದೇವೆ.ಮೀನುಗಾರರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಆಂತರಿಕ ಭದ್ರತೆಗಾಗಿ
ವಿಶೇಷ ಗಮನಹರಿಸಲಾಗುತ್ತಿದೆ.ಸಾಗರದ ಅಲೆಯಿಂದ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದ್ದು ಇನ್ನು ಆರು ತಿಂಗಳಲ್ಲಿ ರಾಜ್ಯ ಪ್ರವಾಸೋದ್ಯಮ ಬದಲಾವಣೆ ಕಾಣಲಿದೆ ಎಂದು ಹೇಳಿದರು.

ನಳಿನಕುಮಾರ ಕಟೀಲ್ ಭಾರತೀಯ ಜನತಾಪಕ್ಷದ ಅಧ್ಯಕ್ಷರಾದ ಮೇಲೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಮೂರು ಮೂರು ಬಾರಿ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಬೂತ್ ಮಟ್ಟದಿಂದ ಬಲಪಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಕಾರ್ಯಕರ್ತರು ಮುಂದಿನ ಎಲ್ಲಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮಾತ್ರ ಪಕ್ಷ ಮತ್ತು ಸಂಘಟನೆ ಕಟ್ಟಿದ ಶ್ರಮ ಸಾರ್ಥಕವಾಗುತ್ತದೆ.ನಾವು ಮುಂದಿನ ದಿನಗಳಲ್ಲೂ ಅಧಿಕಾರಕ್ಕೆ ಬರಬೇಕು ಕಾರಣ ನಮ್ಮ ಜನ ನೆಮ್ಮದಿಯಿಂದ,ಗೌರವದಿಂದ,ಸ್ವಾಭಿಮಾನದಿಂದ ಬದುಕಿಬಾಳಲು ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುವುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಎಂದು ಯಡಿಯೂರಪ್ಪ ಹೇಳಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳು,ಸಚೀವರಾದ ಅಶೋಕ,ಜಗದೀಶ ಶೆಟ್ಟರ್, ಸಿ.ಟಿ.ರವಿ,ಈಶ್ವರಪ್ಪ,ಶ್ರೀನಿವಾಸ ಪೂಜಾರಿ,ಕೇಂದ್ರ ಸಚೀವರಾದ ಪ್ರಹ್ಲಾದ ಜೋಷಿ,ಸದಾನಂದ ಗೌಡ, ಉಪಸ್ಥಿತರಿದ್ದು ಮಾತನಾಡಿದರು.

****

****

ಭಾರತೀಯ ಜನತಾಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅಧ್ಯಕ್ಷತೆವಹಿಸಿದ್ದರು.

About the author

Adyot

Leave a Comment