ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ 401 ಕೊವಿಡ್ ಸಕ್ರೀಯ ಪ್ರಕರಣವಿದ್ದು ಒಟ್ಟೂ 30268 ಕೊವಿಡ್ ಪ್ರಕರಣವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ ನಾಯಕ ತಿಳಿಸಿದರು.
ಅವರು ಮಂಗಳವಾರ ಸಿದ್ದಾಪುರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ನಡೆದ ಕೆ.ಎಪ್.ಡಿ ಟಾಸ್ಕಫೋರ್ಸ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆದ್ಯೋತ್ ನ್ಯೂಸ್ ಜೊತೆ ಮಾತನಾಡಿದರು.
191 ಕೊವಿಡ್ ಪೀಡಿತರು ಆಸ್ಪತ್ರೆಯಲ್ಲಿ ಐಸೋಲೇಷನ್‍ಲ್ಲಿದ್ದಾರೆ ಉಳಿದ 210 ಜನರು ಮನೆಯಲ್ಲೆ ಐಸೋಲೆಷನ್‍ಲ್ಲಿದ್ದಾರೆ 167 ಜನರು ಸಾವನಪ್ಪಿದ್ದಾರೆ. ಸಿದ್ದಾಪುರ ತಾಲೂಕಿನಲ್ಲಿ ಒಟ್ಟೂ 593 ಪ್ರಕರಣಗಳಿದ್ದು 22 ಸಕ್ರೀಯ ಪ್ರಕರಣಗಳಿವೆ. 6 ಸ್ಥಳಿಯ ಆಸ್ಪತ್ರೆಯಲ್ಲಿ ಐಸೋಲೇಷನ್‍ಲ್ಲಿದ್ದರೆ 3 ಜನರು ಬೇರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 13 ಜನರು ಮನೆಯಲ್ಲೆ ಐಸೋಲೇಷನ್‍ಲ್ಲಿದ್ದಾರೆ. 7 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ ಡಾ.ಶರದ ನಾಯಕ ಮಂಗನಖಾಯಿಲೆಗೆ
ಸಂಬಂಧಿಸಿದಂತೆ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಅವಶ್ಯಕವಿರುವ ವಾಹನ,ಅಂಬುಲೆನ್ಸ್,ಮೆಥಾಲಿನ್ ಪೌಡರ್,ಡಿಎಂಪಿ ತೈಲ ನೀಡಲಾಗುವುದು,ಮಣಿಪಾಲದಲ್ಲಿ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಮಾತನಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ,ಎರಡು ವರ್ಷದ ಹಿಂದೆ ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಂಗನಖಾಯಿಲೆ ಕಂಡುಬಂದಿತ್ತು ಆಗಿನಿಂದಲೂ ಲಸಿಕೆ ನೀಡಲು ಪ್ರಾರಂಭಿಸಲಾಗಿದೆ ಅದು ಈಗ ಪರಿಣಾಮ ಬೀರುತ್ತಿದ್ದು ಈ ವರ್ಷ ಇಲ್ಲಿಯವರೆಗೆ ಯಾವುದೇ ಮಂಗನಖಾಯಿಲೆ ಪ್ರಕರಣ ಕಂಡುಬಂದಿಲ್ಲ. ಈಗಾಗಲೇ ಲಸಿಕೆ ನೀಡಲು ಪ್ರಾರಂಭಿಸಲಾಗಿದ್ದುಇಲ್ಲಿಯವರೆಗೆ 10226 ಡೋಸ್‍ಗಳನ್ನು ನೀಡಲಾಗಿದೆ.ಸರ್ವೆ ಕಾರ್ಯಪ್ರಾರಂಭಿಸಲಾಗಿದೆ ತಾಲೂಕಿನ 7 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 6 ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮಂಗನಖಾಯಿಲೆ ಕಾಣಿಸಿಕೊಂಡಿದೆ ಆದ್ದರಿಂದ ಜನರು ಲಸಿಕೆಯನ್ನು ಸ್ವಯಂಸ್ಪೂರ್ತಿಯಿಂದ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕೆ.ಎಪ್.ಡಿ.ವೈದ್ಯಾಧಿಕಾರಿ ಸತೀಶ ಶೆಟ್ಟಿ ಮಾತನಾಡಿ,ಕೆ.ಎಪ್.ಡಿ.ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ ಹಿಂದೆ ಮಂಗ ಸತ್ತರೆ 50 ಮೀ.ವ್ಯಾಪ್ತಿಯಲ್ಲಿ ಮೆಥಾಲಿನ್ ಸಿಂಪಡಿಸಬೇಕಿತ್ತು ಆದರೆ ಈಗ 50ಫೂಟ್ ಸಿಂಪಡಿಸಿದರೆ ಸಾಕು ಮಂಗ ಸಾಯುತ್ತಿದ್ದರೆ ನಿರ್ಲಕ್ಷವಹಿಸುವುದು ಬೆಡ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಜನವಸತಿ ಇರುವಲ್ಲಿ ಮಂಗ ಸತ್ತರೆ ಅದನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ವಿಲೇವಾರಿ ಮಾಡುಬೇಕು,ಅರಣ್ಯ ಪ್ರದೇಶದಲ್ಲಿ ಸತ್ತರೆ ಅರಣ್ಯ ಇಲಾಖೆಯವರು ಮಾಡಬೇಕು ಉಣ್ಣೆ ನಿಯಂತ್ರಣಕ್ಕೆ ಬೇಕಾಗುವ ಔಷಧಗಳನ್ನು ನೀಡಲಾಗಿದೆ. ಡಿಎಂಪಿ ತೈಲವೂ ಇದೆ.ಈಗ ಮೂರು ತಿಂಗಳಿಗೊಮ್ಮೆ ಕೆಎಪ್‍ಡಿ ಸಮಿತಿಯ ಸಭೆ ನಡೆಯುತ್ತಿತ್ತು, ಇನ್ನು ಮುಂದೆ ತಿಂಗಳಿಗೊಮ್ಮೆ ಸಭೆ ನಡೆಯಬೇಕು ಎಲ್ಲಾ ಇಲಾಖೆಯವರ ಸಹಕಾರವನ್ನು ಪಡೆಯ ಬೇಕು ನವಂಬರ ಅಂತ್ಯದೊಳಗೆ ಲಸಿಕೆ ನೀಡುವ ಕಾರ್ಯ ಮುಗಿಯಬೇಕು ಎಂದು ಹೇಳಿದರು.
ತಹಸೀಲ್ದಾರ ಮಂಜುಳಾ ಭಜಂತ್ರಿ ಅಧ್ಯಕ್ಷತೆವಹಿಸಿದ್ದರು.ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ,ಆಡಳಿತ ವೈದ್ಯಾಧಿಕಾರಿ ಡಾ.ಪ್ರಕಾಶ ಪುರಾಣಿಕ,ಶಿಕ್ಷಣ ಇಲಾಖೆಯ ಚೈತನ್ಯಕುಮಾರ,ಕಮಲಾಕರ ನಾಯ್ಕ ಮತ್ತು ತಾಲೂಕಿನ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.