ಆದ್ಯೋತ್ ಸುದ್ದಿನಿಧಿ:
ತಾಂತ್ರಿಕ ದೋಷದಿಂದಾಗಿ ಇಳಿದ ನೌಕಾಸೇನೆಯ ಹೆಲಿಕಾಪ್ಟರ್
ಭಾರತ ಸರ್ಕಾರದ ನೌಕಾಸೇನೆಗೆ ಸೇರಿದ ಹೆಲಿಕಾಪ್ಟರ್ ಒಂದು ತಾಂತ್ರಿಕ ದೋಷದಿಂದ ಶಿರಸಿ ತಾಲೂಕಿನ ದಾಸನಕೊಪ್ಪ ಬಳಿಯಲ್ಲಿ ಇಳಿದಿದ್ದು ಹೆಲಿಕಾಪ್ಟರ್ ನೋಡಲು ಸ್ಥಳೀಯ ಜನರು ಮುಗಿಬಿದ್ದರು.
8 ಜನರು ಪ್ರಯಾಣಿಸುತ್ತಿದ್ದ ಕಾಪ್ಟರ್ ಲ್ಯಾಂಡ್ ಆಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ದಾಸನಕೊಪ್ಪದ ಎಪಿಎಂಸಿ ಮೈದಾನದಲ್ಲಿ ತುರ್ತಾಗಿ ಇಳಿಸಲಾಗಿದೆ.
ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಇದು ಎನ್ನಲಾಗಿದ್ದು, ತಾಂತ್ರಿಕ ದೋಷ ಸರಿಪಡಿಸಲು ಗೋವಾದಿಂದ ತಜ್ಞರ ತಂಡವೊಂದು ದಾಸನಕೊಪ್ಪಕ್ಕೆ ಆಗಮಿಸುತ್ತಿದೆ ಎನ್ನಲಾಗಿದೆ.