ಸಿದ್ದಾಪುರ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೆ ಮಹೋತ್ಸವ ಹಾಗೂ ಮಕರಜ್ಯೋತಿ ಉತ್ಸವ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನವಂಬರ್ 15ರಿಂದ ಡಿಸಂಬರ್ 31ರವರೆಗೆ ಮಂಡಲಪೂಜೆ ಮಹೋತ್ಸವ ಹಾಗೂ ಜನವರಿ- 1-2021 ರಿಂದ ಜನವರಿ-15-2021 ರವರೆಗೆ ಮಕರಜ್ಯೋತಿ ಉತ್ಸವ ನಡೆಯಲಿದೆ.

ಕೊವಿಡ್ ಮಹಾಮಾರಿಯ ಕಾರಣದಿಂದ ಶಬರಿಮಲೆಯಲ್ಲಿ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳಲು,ವ್ರತಾಚರಣೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ವ್ರತಭಂಗವಾಗಲಿದೆ ಇದನ್ನು ತಪ್ಪಿಸುವ ಸಲುವಾಗಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದಲ್ಲಿ ಇರುಮುಡಿ ಹೊತ್ತು ಬರುವ ಭಕ್ತರಿಗೆ ಶಾಸ್ತ್ರೋಕ್ತವಾಗಿ 18 ಮೆಟ್ಟಿಲುಗಳನ್ನು ಏರಿ ಕಲಿಯುಗವರದನ ದರ್ಶನ,ತುಪ್ಪಾಭೀಷೇಕ ಮತ್ತು ವಿಶೇಷ ಪೂಜೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


ನವಂಬರ 15 ರಂದು ಸಂಜೆ ಅಯ್ಯಪ್ಪಸ್ವಾಮಿ ಮಂಡಲ ಪೂಜೆ ಹಾಗೂ 18 ಮೆಟ್ಟಲುಗಳ ಪಡಿಪೂಜೆಯನ್ನು ಶಾಸ್ತ್ರೋಕ್ತವಾಗಿ ನಡೆಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ ಅಯ್ಯಪ್ಪ ಭಕ್ತರು ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

*****

*****

About the author

Adyot

Leave a Comment