ಉ.ಕ.ಜಿಲ್ಲಾ ಹಿಂದೂ ದೇವಾಲಯಗಳ ಮಹಾಮಂಡಳದ ಸಭೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಕಲ್ಯಾಣಮಂಟಪದಲ್ಲಿ ಹಿಂದೂ ಧಾರ್ಮಿಕ ದೇವಾಲಯಗಳ ತಾಲೂಕು ಘಟಕದ ಅಧ್ಯಕ್ಷ ಎಲ್.ವಿ.ಶಾನಭಾಗ ನೇತೃತ್ವದಲ್ಲಿ ಮುಖಂಡರ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಉತ್ತರಕನ್ನಡಜಿಲ್ಲಾ ಹಿಂದೂ ದೇವಾಲಯಗಳ ಮಹಾಮಂಡಳದ ಕಾರ್ಯಾಧ್ಯಕ್ಷ ಡಾ.ವೆಂಕಟೇಶ ನಾಯ್ಕಮಾತನಾಡಿ,ದೇವಾಲಯಗಳ ಸ್ವಾಯತ್ತತೆ ಸಂಬಂಧ ರಾಜ್ಯ ಸರ್ಕಾರವು ಸುಪ್ರಿಂ ಕೋರ್ಟ್ ನಲ್ಲಿ ದಾಖಲಿಸಿರುವ ಎರಡು ಮೇಲ್ಮನವಿಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕು ಹಿಂದೂ ದೇವಾಲಯಗಳ ಮೇಲೆ ಆಡಳಿತವು ಪ್ರಹಾರ ಮಾಡುತ್ತಿದೆ. ಯಾವುದೇ ಸರ್ಕಾರವಿದ್ದರೂ ಮುಜರಾಯಿ ಇಲಾಖೆ ಮೂಲಕ ದೇವಾಲಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿವೆ. ಇದು ಅಕ್ಷಮ್ಯವಾಗಿದೆ ಎಂದು ಹೇಳಿದ ಡಾ.ನಾಯ್ಕ,ಎಲ್ಲ ದೇವಾಲಯಗಳು ಮಹಾಮಂಡಳದ ಸದಸ್ಯತ್ವ ಹೊಂದಬೇಕು. ಸಂಘಟನಾತ್ಮಕವಾಗಿ, ಏಕರೂಪವಾಗಿ ಹೋರಾಟ ಮಾಡಬೇಕು. ಏಕರೂಪದ ಒಂದು ಕಾನೂನನ್ನು ದೇವಾಲಯಗಳ ಸಂಬಂಧ ಜಾರಿಗೊಳಿಸಬೇಕು. ಮುಸ್ಲಿಂ ಸಮುದಾಯಕ್ಕೆ ವಕ್ಫ್ ಬೋರ್ಡ್ ಮಾಡಿದಂತೆಯೇ ಹಿಂದೂ ದೇವಾಲಯಗಳಿಗೂ ಒಂದು ಸ್ವತಂತ್ರ ಬೋರ್ಡ್ ನಿರ್ಮಾಣವಾಗುವದರಿಂದ ದೇವಾಲಯಗಳ ಸ್ವಾಯತ್ತತೆ ಕಾಪಾಡಿಕೊಳ್ಳಬಹುದು ಎಂದರು.

ಮುಂದಿನ ದಿನಗಳಲ್ಲಿ ದೇವಾಲಯಗಳ ಕಾನೂನು ಹೋರಾಟಕ್ಕೆ ಆರ್ಥಿಕ ಅನೂಕೂಲತೆಗೋಸ್ಕರ ಶಿರಸಿ ತಾಲೂಕಾ‌ಮಟ್ಟದ ಹಿಂದೂ ಧಾರ್ಮಿಕ ದೇವಾಲಯ ಹಾಗೂ ಧಾರ್ಮಿಕ ಸಂಸ್ಥೆಗಳ ಕಮೀಟಿ ರಚನೆ ಮಾಡಲಾಯಿತು.
ಸಮಿತಿಯ ಉದ್ದೇಶ ಮತ್ತು ನಿರ್ಣಯ
ಕಮೀಟಿ ಮೂಲಕ ಎಕರೂಪ ಹೋರಾಟ ಮಾಡಬೇಕು.ಎಲ್ಲ ದೇವಾಲಯಗಳನ್ನು ಸಮಿತಿಯ ಒಳಗಡೆ ತರಬೇಕು.
ಸರ್ಕಾರ ವಕ್ಪ ಬೋರ್ಡ ರೀತಿಯಲ್ಲಿ ಹಿಂದೂ ದೇವಾಲಯಗಳ ಬೋರ್ಡ ರಚನೆ ಮಾಡಬೇಕು.
ಹಿಂದೂ ಧರ್ಮದ ದೇವಾಲಯಗಳಲ್ಲಿ ಯಾವುದೇ ರೀತಿಯ ಸರ್ಕಾರದ ಹಸ್ತಕ್ಷೇಪ ಬೇಡ.ನಮ್ಮ ಸ್ವಾಯತ್ತತೆಗೆ ದಕ್ಕೆ ಬರದಂತೆ ಶಾಸನ ರಚನೆಮಾಡಬೇಕು
ದೇವಾಲಯದ ತಾಲೂಕು, ಜಿಲ್ಲಾ,ರಾಜ್ಯ ಕಮಿಟಿಯ ಮುಖ್ಯಸ್ಥರು ಅಧಿಕಾರಿಗಳಾಗಬಾರದು,ನಿವೃತ್ತ ನ್ಯಾಯಾದೀಶರಾಗಬೇಕು.

About the author

Adyot

Leave a Comment