ಆದ್ಯೋತ್ ಸುದ್ದಿನಿಧಿ:
ತೇರದಾಳ ಕ್ಷೇತ್ರದಲ್ಲಿ ಶಾಸಕ ಸಿದ್ದು ಸವದಿ ಒಬ್ಬ ಮಹಿಳೆಯನ್ನು ಹಿಡಿದು ಎಳೆದಾಡಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದರೂ ಇನ್ನೂ ಅವರನ್ನು ಬಂಧನ ಮಾಡಲು ಸರ್ಕಾರದಿಂದ ಆಗಿಲ್ಲ.ಬಿಜೆಪಿ ಸರಕಾರದಿಂದ ಮಹಿಳೆಯರ ರಕ್ಷಣೆ ಸಾಧ್ಯವಿಲ್ಲ.ಯಾರು ಬೇಕಾದರೂ ಮಹಿಳೆಯರನ್ನು ಎಳೆದಾಡಬಹುದೇ? ಸರಕಾರ ಸುಮ್ಮನಿರುತ್ಯದೆಯೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶನಿವಾರ ಶಿರಸಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಸರ್ಕಾರ ಸವದಿ ತಮ್ಮ ಪಕ್ಷದ ಪ್ರತಿನಿಧಿ ಎಂದು ಬಾಯಿ ಮುಚ್ಚಿ ಕುಳಿತಿದೆ.ಮುಖ್ಯಮಂತ್ರಿಗಳು, ಗೃಹ ಸಚಿವರು ಎಲ್ಲಾ ಮಹಿಳೆಯರ ವಿಚಾರದಲ್ಲಿಗೂ ಹೀಗೆ ಇರುತ್ತಾರೆಯೇ? ಅಂತ ಪ್ರಶ್ನಿಸಿದ ಡಿ.ಕೆ. ಕಾಂಗ್ರೆಸ್ ಸರ್ಕಾರ ಬಂದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಮಾನ ಸಿಗಲಿದೆ
ಬಿಜೆಪಿಯು ರಾಜ್ಯದಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ. ಆದರೆ ಕಾಂಗ್ರೆಸ್ ಗೆ ಅಭಿವೃದ್ಧಿಯೇ ಜಾತಿ,ಧರ್ಮವಾಗಿದೆ. ಬಡವರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು ಎಂದು ಹೇಳಿದರು.
ಅಲ್ಲದೇ ನವೆಂಬರ್ 30 ರಂದು ಪಕ್ಷದ ಹಿರಿಯ ನಾಯಕರು, ಶಾಸಕರೊಂದಿಗೆ ಸಭೆ ನಡೆಸಿ ಮೀಸಲಾತಿಯ ಕುರಿತು ನಿರ್ಧಾರ ಪ್ರಕಟಿಸಲಾಗುವುದು ಕಾಂಗ್ರೆಸ್ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಬೂತಲ್ಲೇ 20-25 ಜನರ ಸಮಿತಿ ಮಾಡಿಕೊಂಡು ಕೆಲಸ ಮಾಡಬೇಕಿದೆ. ಕೇಡರ್ ಕೇವಲ ಬಿಜೆಪಿಯದ್ದಲ್ಲ ಎಂದು ತೋರಿಸಬೇಕು,ಬಿಜೆಪಿ ಆಡಳಿತದಿಂದ ಈಗಾಗಲೇ ರಾಜ್ಯ 20 ವರ್ಷ ಹಿಂದಕ್ಕೆ ಹೋಗಿದೆ. ಕಾರಣ ಕಾಂಗ್ರೆಸ್ ಕಾರ್ಯಕರ್ತರಿಂದ ಪುನಃ ನಮ್ಮ ಸರ್ಕಾರ ಮರಳಿ ಬರಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಮುಖರಾದ ಸತೀಶ ಜಾರಕಿಹೊಳೆ, ಆರ್.ವಿ.ದೇಶಪಾಂಡೆ ಮುಂತಾದವರು ಇದ್ದರು. ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
****
ಸಿಡಿ ವಿಚಾರದ ಗೊಂದಲದಿಂದ ಸಂತೋಷ ಆತ್ಮಹತ್ಯೆಗೆ ಮುಂದಾಗಿದ್ದಾರೆ
ಒಂದು ಸಿಡಿ ವಿಚಾರದಲ್ಲಿ ಗೊಂದಲದಲ್ಲಿ ಯಡಿಯೂರಪ್ಪ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆಗೆ ಮುಂದಾಗಿದ್ದಾರೆ ಇದನ್ನು
ಸಂತೋಷ್ ಹೆಂಡತಿಯೇ ಬಹಿರಂಗಪಡಿಸಿದ್ದಾರೆ ಸಿಡಿ ಇಟ್ಟುಕೊಂಡು ಯಾರೋ ಒಬ್ಬರಿಗೆ ತಲುಪಿಸಿದರು,ಅದನ್ನು ಇಟ್ಟುಕೊಂಡು ವ್ಯಾಪಾರ ಮಾಡಲು ಪ್ರಯತ್ನ ಮಾಡಿದರು ಆದರೇ ಅದು ಆಗಿಲ್ಲ ಎಂದು ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ನನಗೆ ಮಾಹಿತಿ ಬಂದಿದೆ. ಸಂತೋಷ್ ಅವರು ಆ ಸಿ.ಡಿಯನ್ನು ಬೇರೆಯೊಬ್ಬರಿಗೆ ಕೊಟ್ಟಿದ್ದಾರೆ. ಅವರು ಬ್ಲಾಕ್ ಮೇಲ್ ಮಾಡಲು ಹೋದರು ಎಂಬ ಮಾಹಿತಿ ಮಾಧ್ಯಮ ಸ್ನೇಹಿತರಿಂದಲೇ ಬಂದಿದೆ.ಇದಾದಮೇಲೆ ದೆಹಲಿಗೆ ಆ ಸಿಡಿ ಕೊಟ್ಟಿದ್ದಾರೆ. ತಾನು ಕೊಟ್ಟಿರುವುದು ತಪ್ಪು ಎಂದು ಸಂತೋಷ್ ಗೆ ಅನಿಸಿ ಹೀಗೆ ಮಾಡಿಕೊಂಡಿದ್ದಾರೆ ಎಂದರು.
ಯಾವ ಸಿಡಿ ಏನು ಎನ್ನುವ ಬಗ್ಗೆ ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಸಿಡಿಯನ್ನ ಕೆಲವರು ಹೈಕಮಾಂಡ್ ಗೆ ತಲುಪಿಸಿರುವ ಬಗ್ಗೆ ಮಾಹಿತಿ ಇದೆ ಕೆಲವು ದಿನದ ಹಿಂದೆ ಮುಖ್ಯಮಂತ್ರಿಗಳ ಮಾದ್ಯಮ ಕಾರ್ಯದರ್ಶಿ ರಾಜೀನಾಮ ಕೊಡುತ್ತಾರೆ ಇನ್ನೊಬ್ಬ ಮಾದ್ಯಮ ಕಾರ್ಯದರ್ಶಿಯನ್ನು ಕೆಲಸದಿಂದ ತೆಗೆಯುತ್ತಾರೆ. ಇದು ಮೂರನೆಯದು.ಆದ ಕಾರಣ ಇದರ ಬಗ್ಗೆ ವ್ಯಾಪಕ ತನಿಖೆ ಆಗಬೇಕು ಎಂದರು.
ಈ ಹೇಳಿಕೆಗೆ ಪ್ರತಿಯಾಗಿ ಈಶ್ವರಪ್ಪ ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ
ಹೌದಾ ಬಹಳ ಸಂತೋಷ ಹಿಂದೆ ಅವರ ಪಿ.ಎ.ಗಳ ವಿಚಾರ ಏನಾಯಿತು ಎಂದು ಈಶ್ವರಪ್ಪ ಸೇರಿದಂತೆ ರಾಜ್ಯದ ಜನತೆಗೆ ಗೊತ್ತಿದೆಯಲ್ಲ ಎಂದು ಪ್ರತಿಕ್ರಯಿಸಿದರು.
ಕಾರವಾರದಿಂದ ಮಧ್ಯಾಹ್ನ12 ಗಂಟೆಗೆ ಶಿರಸಿಗೆ ಆಗಮಿಸಿದ ಡಿ.ಕೆ.ಶಿವಕುಮಾರ ಕಾಂಗ್ರೆಸ್ ಕಾರ್ಯಾಲಯಕ್ಕೆ ಭೇಟಿ ನೀಡಿದರು.ನಂತರ ರಾಜ್ಯದ ಪ್ರಸಿದ್ದ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕಾರ್ಯಕ್ರಮ ಮುಗಿಸಿ ಉಡುಪಿಗೆ ತೆರಳುವಾಗ ಹೊನ್ನಾವರ
ತಾಲ್ಲೂಕಿನ ಒಕ್ಕಲಿಗರ ನೂತನ ಸಮುದಾಯ ಭವನಕ್ಕೆ ಭೇಟಿ ನೀಡಿ, ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕ ಮಂಕಾಳ ವೈದ್ಯ, ಹೊನ್ನಾವರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಜೆ. ಗೌಡ ಮುಂತಾದವರು ಉಪಸ್ಥಿತರಿದ್ದರು.