ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಶಂಕರಮಠದಲ್ಲಿ ಉ.ಕ.ಜಿಲ್ಲೆ ಹಿಂದೂಧಾರ್ಮಿಕ ದೇವಾಲಯಗಳ ಮಹಾಮಂಡಳಿ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಮಹಾಮಂಡಳದ ಕಾರ್ಯಾಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ,ಆಡಳಿತ ನಡೆಸಿದ ಎಲ್ಲಾ ಸರಕಾರಗಳು ಹಿಂದೂದೇವಾಲಯಗಳನ್ನು ಸರಕಾರೀಕರಣಗೊಳಿಸಲು ಹೊರಟಿದ್ದು ಎಲ್ಲಾ ದೇವಾಲಯಗಳ ಮುಖ್ಯಸ್ಥರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸದಿದ್ದರೆ ನಮ್ಮ ಧಾರ್ಮಿಕತೆಯು ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.ಕಳೆದ 40-50ವರ್ಷಗಳಿಂದ ಆಡಳಿತ ಎಲ್ಲಾ ಸರಕಾರಗಳು ಹಿಂದೂದೇವಾಲಯಗಳ ಮೇಲೆ ಅಧಿಪತ್ಯ ಸ್ಥಾಪಿಸಲು ಪ್ರಯತ್ನ ನಡೆಸುತ್ತಿವೆ. ಈ ಬಗ್ಗೆ ಮಹಾಮಂಡಳವು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಉಚ್ಚನ್ಯಾಯಾಲಯವು ಎರಡು ಬಾರಿ ಸರಕಾರದ ನಡೆ ಧಾರ್ಮಿಕ ಸ್ವಾತಂತ್ರ್ಯವನ್ನು ಹರಣ ಮಾಡುವಂತಿದೆ ಎಂದು ತೀರ್ಪು ನೀಡಿದೆ. ಹಿಂದಿನ ಸರಕಾರದಿಂದ ಪ್ರತಿದೇವಾಲಯಕ್ಕೂ ಸಮಿತಿ ನೇಮಕ ಮಾಡಲಾಗುವುದು ಮತ್ತು ದೇವಾಲಯದ ಸಮಸ್ತ ಮಹಾತಿ ನೀಡಲು ಸೂಚಿಸಿದಾಗ ಪುನಃ ಕೋರ್ಟ್‍ಗೆ ಹೋದಾಗ ತೀರ್ಪು ನಮ್ಮ ಮಹಾಮಂಡಳಿ ಪರವಾಗಿ ಬಂದಿತು ಅಲ್ಲಿಗೆ ನಮ್ಮ ದೇವಾಲಯ ನಮ್ಮ ಸುಪರ್ದಿಯಲ್ಲಿರುತ್ತದೆ ನಮ್ಮ ನಂಬಿಕೆಯಂತೆ ನಡೆಸಬಹುದು ಎಂದುಕೊಂಡಾಗ ಈಗಿನ ಸರಕಾರ ಈ ಆದೇಶ ಪ್ರಶ್ನಿಸಿ ಸುಪ್ರಿಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಇದರಿಂದ ಪುನಃ ಆತಂಕ ಮೂಡಿದ್ದು ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು ಪ್ರತಿ ತಾಲೂಕಿನಲ್ಲಿ ಧಾರ್ಮಿಕ ದೇವಾಲಯಗಳ ಮಂಡಳಿ ರಚಿಸಿ ಎಲ್ಲಾ ದೇವಾಲಯಗಳನ್ನು ಮಂಡಳಿಯ ವ್ಯಾಪ್ತಿಗೆ ತಂದು ಸುಪ್ರಿಂ ಕೋರ್ಟನಲ್ಲಿ ಕಾನೂನು ಹೋರಾಟ ನಡೆಸಬೇಕು ಎಂದು ತೀರ್ಮಾನಿಸಲಾಯಿತು ಎಂದು ಹೇಳಿದರು.
ಸಂವಿಧಾನ ಬಾಹಿರ ಕ್ರಮದ ಬಗ್ಗೆ ಎರಡು ಬಾರಿ ಉಚ್ಚನ್ಯಾಯಾಲಯವು ತೀರ್ಪು ನೀಡಿದರು. ಕೋಟ್ಯಂತರ ಹಿಂದೂ ಬಾಂಧವರು ಮತ್ತು ಮಠಾಧೀಶರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡದ,ಸರಕಾರದ ಹಸ್ತಕ್ಷೇಪವಿಲ್ಲದೆ ಸರ್ವಸಮ್ಮತ ಕಾನೂನನ್ನು ಜಾರಿ ಮಾಡಬೇಕೆಂದು ಆಗ್ರಹಿಸುತ್ತಿದ್ದರೂ ಕೂಡ ಸರಕಾರ ಇದನ್ನು ಪ್ರತಿಷ್ಠೆಯಾಘಿ ತೆಗೆದುಕೊಮಡಿರುವುದು ಸರಿಯಲ್ಲ ರಾಜ್ಯ ಸರಕಾರವು ಸುಪ್ರಿಂಕೋರ್ಟನಲ್ಲಿ ಸಲ್ಲಿಸಿರುವ ಮೇಲ್ಮನವಿಯನ್ನು ಬೇಷರತ್ತಾಗಿ ಹಿಂತೆಗೆದುಕೊಮಡು ಎಲ್ಲಾ ಹಿಂದೂಗಳಿಗೂ ಸರ್ವಸಮ್ಮತವಾದ,ಸರಕಾರದ ಹಸ್ತಕ್ಷೇಪವಿಲ್ಲದ, ದೇವಾಲಯಗಳ ಪರಂಪರೆ,ಸ್ವಾತಂತ್ರ್ಯಕ್ಕೆ ದಕ್ಕೆ ಬರದಂತೆ,ಹಿಂದೂಗಳ ಭಾವನೆಗೆ ದಕ್ಕೆ ಬಾರದ ರೀತಿಯಲ್ಲಿ ಸರ್ವಸಮ್ಮತ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿ,ನಮ್ಮ ದೇವಾಲಯಗಳು ನಮ್ಮ ಪರಂಪರೆಯನ್ನು,ಸಂಸ್ಕೃತಿಯನ್ನು ಸಾರುವ ಕೇಂದ್ರಗಳಾಗಿವೆ ಇಂತಹ ಸ್ಥಳದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಜನಪ್ರತಿನಿಧಿಗಳ ಈ ಬಗ್ಗೆ ಯೋಚಿಸಿ ದೇವಾಲಯಗಳ ಸರಕಾರಿಕರಣಗೊಳಿಸುವುದುನ್ನು ನಿಲ್ಲಿಸಬೇಕು ಎಂದು ಹೇಳಿದರು.
ನಂತರ ಹಿಂದೂ ಧಾರ್ಮಿಕ ಮಹಾಮಂಡಳದ ತಾಲೂಕು ಘಟಕವನ್ನು ರಚಿಸಲಾಯಿತು ಇಟಗಿ ಶ್ರೀರಾಮೇಶ್ವರ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ಹೆಗಡೆ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಹೆಗಡೆ,ಈಗಾಗಲೆ ಮುಜಾರಾಯಿ ಇಲಾಖೆಯವರು ನಡೆಸುತ್ತಿರುವ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಅವೆಲ್ಲವೂ ವ್ಯಾಪಾರಿಕೇಂದ್ರಗಳಾಗಿವೆ ನಮ್ಮ ನಂಬಿಕೆ,ಪರಂಪರೆ ಇವೆಲ್ಲವನ್ನು ಉಳಿಸಿಕೊಳ್ಳಲು ನಮ್ಮದೆ ಆದ ಸಮಿತಿ ರಚನೆಯಾಗಬೇಕು ಅವ್ಯವಹಾರಗಳು ನಡೆದಿವೆ ಎಂದು ದೂರುಗಳು ಬಂದರೆ ಆಗ ಸರಕಾರ ತನಿಖೆ ನಡೆಸಿ ಸರಿಪಡಿಸಲಿ
ಎಲ್ಲೋ ಒಂದುಕಡೆ ತಪ್ಪು ನಡೆದಿದೆ ಎಂದರೆ ಎಲ್ಲಾ ದೇವಾಲಯಗಳ ಮೇಲೆ ಪ್ರಹಾರ ನಡೆಸುವುದು ಸರಿಯಲ್ಲ
ಎಂದು ಹೇಳಿದರು.
ಗಜಾನನ ಹೆಗಡೆ ನಿರೂಪಣೆ ಮಾಡಿದರು.ವೆಂಕಟರಮಣ ಹೆಗಡೆ ಸ್ವಾಗತಿಸಿದರು.
ಹಿಂದೂಧಾರ್ಮಿಕದೇವಾಲಯಗಳ ಮಹಾಮಂಡಳದ ತಾಲೂಕುಘಟಕದ ಪದಾಧಿಕಾರಿಗಳು;
ಚಂದ್ರಶೇಖರ ಹೆಗಡೆ ಕೊಡ್ತಗಣಿ ಅಧ್ಯಕ್ಷ,ಮಹಾಬಲೇಶ್ವರ ನಾಯ್ಕ ಕರಮನೆ-ಉಪಾಧ್ಯಕ್ಷ,ವಿನೋದ ಮಹಾಲೆ-ಕಾರ್ಯದರ್ಶಿಯಾಗಿ ಆಯ್ಕೆಯಾದರು ಸದಸ್ಯರಾಗಿ,ಐ.ಎಸ್.ಭಟ್ಟ ಹೇರೂರು,ಶ್ರೀದರ ಹೆಗಡೆ ನೆರಗಾಲ,ಶ್ರೀಕಾಂತ ಹೆಗಡೆ ಗುಂಜಗೋಡ,ಆರ್.ಐ.ನಾಯ್ಕ ಹೊಸೂರು,ಜಿ.ಎಂ.ಹೆಗಡೆ ಹೆಗ್ನೂರು,ಆರ್ದ.ಎನ್.ಹೆಗಡೆ ಮನಿಗಾರ,ಎಸ್.ಎ.ಹೆಗಡೆ ಜೋಗಿನಮನೆ,ನಾಗರಾಜ ಧೋ ಶೆಟ್ಟಿ,ಎನ್.ವಿ.ಹೆಗಡೆ ಮುತ್ತಗಿ,ಗಜಾನನ ಹೆಗಡೆ ಮಟ್ಟೆಮನೆ
—–
ಸಭೆಯಲ್ಲಿ ಪಡೆದ ತೀರ್ಮಾನಗಳು;
ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಸರಕಾರ ಸುಪ್ರಿಂಕೋರ್ಟ್‍ಗೆ ಸಲ್ಲಿಸಿರುವ ಮೆಲ್ಮನೆವಿಯನ್ನು ಹಿಂಪಡೆಯುವಂತೆ ಒತ್ತಾಯಿಸುವುದು,ವಕ್ಪಮಮಡಳಿಯಂತೆ ಹಿಂದೂ
ದೇವಾಲಯಗಳಿಗೆ ಪ್ರತ್ಯೇಕ ಮಂಡಳಿ ರಚಿಸುವುದು,ಜನಪ್ರತಿನಿಧಿಗಳ ಸಭೆ ನಡೆಸಿ ಅವರು ಸದನದಲ್ಲಿ ಈ ವಿಷಯ ಚರ್ಚಿಸುವಂತೆ ಮಾಡುವುದು,ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆ ಬರದಂತೆ ನೊಡಿಕೊಳ್ಳುವಂತೆ ಒತ್ತಾಯಿಸುವುದು,ಎಲ್ಲಾ ಮಠಾಧೀಶರನ್ನು ಹೊರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡುವುದು.