ಆಧ್ಯೋತ್ ಸುದ್ದಿನಿಧಿ:
ಗ್ರಾಮ ಪಂಚಾಯತ್ ಚುನಾವಣೆ ಪ್ರಯುಕ್ತ ಭಾರತೀಯ ಜನತಾ ಪಕ್ಷವು ರಾಜ್ಯಾದ್ಯಂತ ಗ್ರಾಮಸ್ವರಾಜ್ ಸಮಾವೇಶ ನಡೆಸಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬೇರೆ ಬೇರೆ ತಂಡಗಳಲ್ಲಿ ಮುಖಂಡರು ಸಂಚರಿಸುತ್ತಿದ್ದಾರೆ ಮತ್ತು ಸಮಾವೇಶಗಳನ್ನು ನಡೆಸುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಡಿ-3 ರಂದು ಸಿರ್ಸಿ ಮತ್ತು ಕುಮಟಾದಲ್ಲಿ ಗ್ರಾಮಸ್ವರಾಜ ಸಮಾವೇಶ ನಡೆಯಲಿದೆ.
ಘಟ್ಟದ ಮೇಲಿನ ತಾಲೂಕಿನವರಿಗೆ ಡಿಸಂಬರ-3 ರಂದು ಬೆಳಿಗ್ಗೆ 10 ಗಂಟೆಗೆ ಶಿರಸಿಯ ಅಂಬೇಡ್ಕರ ಭವನದಲ್ಲಿ ಸಮಾವೇಶ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಘಟ್ಟದ ಕೆಳಗಿನ ತಾಲೂಕುಗಳಿಗೆ ಕುಮಟಾದ ಹೊಳಗದ್ದೆಯ ” ಗೋ-ಗ್ರೀನ್ ಹೋಟೆಲ್” ಆವರಣದಲ್ಲಿ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಉ.ಕ. ಸಂಸದ ಅನಂತಕುಮಾರ್ ಹೆಗಡೆ, ಸಚಿವ ಬಸವರಾಜ ಬೊಮ್ಮಾಯಿ, ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಸಿ ಸಿ ಪಾಟೀಲ್, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಮತ್ತು ಜಿಲ್ಲೆಯ ಶಾಸಕರು ಹಾಗೂ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ ಎಂದು ಉ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.