ಶಿರಸಿಯಲ್ಲಿ ಸಚೀವ ಶೆಟ್ಟರ ಸಚೀವ ಹೆಬ್ಬಾರ ಸುದ್ದಿಗೋಷ್ಠಿ: ವಿಶ್ವನಾಥ ತಾಳ್ಮೆವಹಿಸಬೇಕು–ಸಚೀವ ಶಿವರಾಮ ಹೆಬ್ಬಾರ, ಪಕ್ಷದ ಅಡಿಯಲ್ಲಿ ಬರುವವರು ಬಹಿರಂಗ ಹೇಳಿಕೆ ನೀಡಬಾರದು- ಜಗದೀಶ ಶೆಟ್ಟರ್

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಗ್ರಾಮಸ್ವರಾಜ್ ಸಮಾವೇಶದ ನಂತರ ಸಚೀವ ಜಗದೀಶ ಶೆಟ್ಟರ್ ಹಾಗೂ ಶಿವರಾಮ ಹೆಬ್ಬಾರ ಸುದ್ದಿಗೋಷ್ಠಿ ನಡೆಸಿದರು.
ಶಿವರಾಮ ಹೆಬ್ಬಾರ ಮಾತನಾಡಿ,ಹೆಚ್.ವಿಶ್ವನಾಥ ಹಿರಿಯ ರಾಜಕಾರಣಿಗಳಾಗಿದ್ದು,ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದವರು ಸಚೀವ ಸ್ಥಾನ ಸಿಗುವವರೆಗೆ ತಾಳ್ಮೆ
ಕಳೆದುಕೊಳ್ಳಬಾರದು. ಇದು ಸತ್ಸಂಪ್ರದಾಯವೂ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜಿನಾಮೆ ನೀಡಿ ಬಿಜೆಪಿಗೆ ಬಂದಿರುವ 17 ಶಾಸಕರು ಎಲ್ಲರೂ ಜೊತೆಯಾಗಿದ್ದೇವೆ ಎಂದು ಹೆಬ್ಬಾರ್ ಹೇಳಿದರು.

ಒಂದು ಉದ್ದೇಶದಿಂದ ಬಿಜೆಪಿಗೆ ಬಂದಿರುವ ಎಲ್ಲರೂ ಇಂದು, ನಾಳೆ ಯಾವಾಗಲೂ ಜೊತೆಯಾಗಿ ಇರುತ್ತೇವೆ. ಅಲ್ಲದೇ ವಿಶ್ವನಾಥ ಅವರು ಚುನಾವಣೆಯಲ್ಲಿ ಸೋತರೂ ಬಿಜೆಪಿ ಪರಿಷತ್ ಸದಸ್ಯರನ್ನಾಗಿ ಮಾಡಿದೆ ಬಿಜೆಪಿ ವಿಶ್ವನಾಥ ಅವರನ್ನು ಮಂತ್ರಿ ಮಾಡುವುದನ್ನು ಅಲ್ಲಗಳೆದಿಲ್ಲ. ನ್ಯಾಯಾಲಯದಲ್ಲಿ ಅವರ ವಿರುದ್ಧ ತೀರ್ಪು ಬಂದಿದೆ. ಇದರಿಂದ ವಿಶ್ವನಾಥ ಅವರು ಅಸಮಧಾನಗೊಂಡು ಮಾತನಾಡಿದ್ದಾರೆ ನಾವೆಲ್ಲರೂ ನಿಮ್ಮ ಜೊತೆಯಲ್ಲಿ ಇದ್ದೇವೆ ಎಂದು ವಿಶ್ವನಾಥ ಅವರಿಗೆ ಸಂದೇಶ ನೀಡಿದರು.

ಜಗದೀಶ ಶೆಟ್ಟರ್ ಮಾತನಾಡಿ,
ಪಕ್ಷದ ಅಡಿಯಲ್ಲಿ ಬರುವವರು ಹೇಳಿಕೆ ನೀಡುವಾಗ ಬಹಿರಂಗವಾಗಿ ಮಾತನಾಡದೇ ಪಕ್ಷದಲ್ಲಿ ಚರ್ಚಿಸುವುದು ಉತ್ತಮ. ನಮ್ಮ ಮಾತುಗಳು ನಾಲ್ಕು ಗೋಡೆಗಳ ಮಧ್ಯೆ ಇರಬೇಕು ಎಲ್ಲರಿಗೂ ಅವರ ವಿಚಾರ ಹೇಳಲು ಅವಕಾಶವಿದೆ. ಆದರೆ ಬಹಿರಂಗ ಹೇಳಿಕೆ ನೀಡಬಾರದು. ಪಕ್ಷದ ಹಿತದೃಷ್ಟಿಯಿಂದ ವಿಚಾರ ಮಾಡಬೇಕು ಎಂದು ಹೇಳಿದ ಶೆಟ್ಟರ್, ವಿಶ್ವನಾಥ ಇರಲಿ ಇಲ್ಲ ಮತ್ತೋಬ್ಬರಿರಲಿ ಯಾವುದೇ ವಿಷಯಕ್ಕೆ ಬೇಸರವಿದ್ದಲ್ಲಿ ರಾಜ್ಯಾಧ್ಯಕ್ಷರ ಬಳಿ ಹೋಗಲಿ. ಮುಖ್ಯಮಂತ್ರಿಗಳಿಗೆ ತಿಳಿಸಲಿ. ಬಹಿರಂಗ ಚರ್ಚೆಗೆ ಅಂತಿಮ ಇರುವುದಿಲ್ಲ. ಆದ ಕಾರಣ ಸಂಯಮ ಕಾಯ್ದುಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

About the author

Adyot

Leave a Comment