ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಗುರುವಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪಟ್ಟಣದ ಹೊಸೂರು ಕಾನಕೇರಿಯ ಬೊಮ್ಮಾದೇವಸ್ಥಾನದ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಮಾಡಿ ಸ್ಥಳೀಯ ವೀರಭದ್ರ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿದ್ದಾಪುರ ತಾಲೂಕಿನ ಅಭಿವೃದ್ಧಿಗೆ ಅವಶ್ಯಕವಾಗಿರುವ ಅನುದಾನವನ್ನು ತರಲಾಗಿದೆ ಕೊವಿಡ್ ಹಾಗೂ ಅತಿವೃಷ್ಟಿಯ ಕಾರಣದಿಂದ ತಡವಾಗಿದೆ.ಪಟ್ಟಣಕ್ಕೆ 1ಕೋಟಿರೂ.ನ 12 ಕಾಮಗಾರಿಗೆ ವಿಶೇಷ ಅನುದಾನವನ್ನು ತರಲಾಗಿದೆ.ಅದರಲ್ಲಿ ಹೊಸೂರು ಕಾಂಕ್ರೀಟ್ ರಸ್ತೆ ಸೇರಿದಂತೆ ಹಲವು ಕೆಲಸಗಳು ಮುಗಿಸಲಾಗಿದೆ. ಇದಲ್ಲದೆ ಹೊನ್ನೆಗುಂಡಿ ಗಟಾರ ಪೂರ್ಣಗೊಳಿಸಲು 40ಲಕ್ಷರೂ. ನೀಡಲಾಗಿದೆ.
ಬೆಳೆಯುತ್ತಿರುವ ಪಟ್ಟಣಕ್ಕೆ ಅನುಕೂಲವಾಗುವಂತೆ ಕುಡಿಯುವ ನೀರಿನ ಕೊರತೆ ನೀಗಿಸಲು ಶರಾವತಿ ಹಿನ್ನೀರಿನಿಂದ ನೀರುವ ತರುವ ಯೋಜನೆಗೆ ಚಾಲನೆ ನೀಡಲಾಗಿದೆ.ಹೊಸೂರು ಭಾಗದಲ್ಲಿ ನಡೆಯಬೇಕಾದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಕಾಗೇರಿ ಹೇಳಿದರು.
ಪಪಂ ಸದಸ್ಯ ಮಾರುತಿ ನಾಯ್ಕ ಮಾತನಾಡಿ,ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಧಿಕಾರಕ್ಕೆ ಬಂದ ನಂತರ ತಾಲೂಕಿನ ಅಭಿವೃದ್ಧಿ ವೇಗವನ್ನು ಪಡೆದುಕೊಂಡಿದೆ. ಪಟ್ಟಣದ ಅಭಿವೃದ್ದಿಗಂತೂ ಸಾಕಷ್ಟು ಅನುದಾನವನ್ನು ನೀಡಿದ್ದಾರೆ ಆದರೂ ಇನ್ನೂ ಹಲವು ಸಮಸ್ಯೆಗಳಿವೆ ಹೊಸೂರು ಶಾಲೆ,ಇಲ್ಲಿಯ ಸ್ಮಶಾನ ಸಮಸ್ಯೆ ಬಗೆಹರಿಸಬೇಕಾಗಿದೆ.ಅಲ್ಲದೆ ಇನ್ನೂ ಸಾಕಷ್ಟು ರಸ್ತೆಗಳ ನಿರ್ಮಾಣವಾಗಬೇಕಾಗಿದೆ ನಮ್ಮ ನಾಯಕರಾದ ಕಾಗೇರಿಯವರು ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾರೆ ಬ ನಂಬಿಕೆ ಇದೆ ಎಂದು ಹೇಳಿದರು.
ಇದಕ್ಕೂ ಮೊದಲು ವಿಶ್ವೇಶ್ವರ ಹೆಗಡೆ ಕಾಗೇರಿಯವರು ರವೀಂದ್ರನಗರದ ಲಿಟಲ್ ಪ್ಲವರ್ ಶಾಲೆಯ ಎದುರು 14 ಲಕ್ಷರೂ. ವೆಚ್ಚದಲ್ಲಿ ನಿರ್ಮಾಣವಾಗುವ ಗಟಾರಕ್ಕೆ ಹಾಗೂ ಸಾಯಿ ನಗರದ ಮುಂಡಿಗೆಹಳ್ಳಕ್ಕೆ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದರು.ರಾಜಮಾರ್ಗದಲ್ಲಿ ಅಳವಡಿಸಲಾಗಿರುವ ಕಾಂಕ್ರೀಟ್ ಮುಚ್ಚುಗೆಯನ್ನು ಹಾಗೂ ಸಂಪೆಕೇರಿ ಡಾಂಬರ್ ರಸ್ತೆಯನ್ನು ಉದ್ಘಾಟನೆ ಮಾಡಿದರು.