ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಪ್ರತಿಷ್ಠಿತ ಸಾಮ್ರಾಟ್ ಹೋಟೆಲ್ ನ ವಸತಿಗೃಹದ ಕೊಠಡಿಯೊಂದರಲ್ಲಿ ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡು ಹೊತ್ತು ಉರಿದ ಕಾರಣ ಆತಂಕಕ್ಕೆ ಕಾರಣವಾಯಿತು.
ವಸತಿಗೃಹದ ಮೂರನೇ ಮಹಡಿಯ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಜೆ ಸುಮಾರು ಎಂಟುಗಂಟೆಗೆ
ಬೆಂಕಿ ಹೊತ್ತಿಕೊಂಡಿದ್ದು ಅಗ್ನಿಶಾಮಕದಳದವರು ಧಾವಿಸಿ ಬಂದು ನಂದಿಸುವಲ್ಲಿ ಸಫಲರಾದರು.
ಯಾವುದೇ ಪ್ರಾಣಾಪಾಯವಾಗಿರುವುದಿಲ್ಲ ಸಾಕಷ್ಟು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.