ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶುಕ್ರವಾರ ಎರಡು ಪ್ರಮುಖ,ಪರಸ್ಪರ ವಿರುದ್ದವಿರುವ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಮಂಚೂಣಿ ನಾಯಕರಾದ ಆರ್.ವಿ.ದೇಶಪಾಂಡೆ ಹಾಗೂ ಸಚೀವ ಶಿವರಾಮ ಹೆಬ್ಬಾರ
ಸುದ್ದಿಗೋಷ್ಠಿ ನಡೆಸಿದರು.
ಶಿರಸಿಯ ಸಾಮ್ರಾಟ್ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಗೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ,ಸಿದ್ದರಾಮಯ್ಯ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಹಲವಾರು ಕಾಮಗಾರಿಗಳಿಗೆ ಶಂಕುಸ್ಥಾಪನೆ ಆಗಿದೆ. ಈಗ ಬಂದಿರೋ ಯಡಿಯೂರಪ್ಪ ಸರ್ಕಾರ ಜಿಲ್ಲೆಗೆ ಏನು ಯೋಜನೆಗಳನ್ನ ಕೊಟ್ಟಿದೆ ಅಂತ ಶ್ವೇತಪತ್ರ ಹೊರಡಿಸ್ಬೇಕು ಚುನಾವಣಾ ಸಮಯದಲ್ಲಿ ಕೆಲವೊಂದು ಕ್ಷೇತ್ರಗಳಿಗೆ ಅನುದಾನ ನೀಡಿದ್ದರು, 16 ಕ್ಷೇತ್ರಗಳಿಗೆ 40-50 ಕೋಟಿರೂ.ಕೊಟ್ಟಿದ್ದರು
ಆದರೆ ಆ ಹಣ ಈಗ ಎಲ್ಲಿ ಹೋಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದು ಅಭಿವೃದ್ಧಿ ಉದ್ದೇಶ ಅಲ್ಲ, ಚುನಾವಣೆ ಗೆಲ್ಲೋ ಉದ್ದೇಶಕ್ಕಾಗಿ ಕೊಟ್ಟ ಅನುದಾನ. ಜಿಲ್ಲಾ ಸಚಿವರು ಕೆಲಸ ಮಾಡ್ತಾಇಲ್ಲಾ ಎಂದು ನಾನು ಹೇಳುತ್ತಿಲ್ಲ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದ ದೇಶಪಾಂಡೆ
ನನಗೆ ಆರೋಗ್ಯ ಸರಿ ಇಲ್ಲ, ಹದಗೆಟ್ಟಿದೆ. ಆದ್ದರಿಂದ ಎಲ್ಲೂ ಪ್ರವಾಸ ಮಾಡೋಕೆ ಆಗುತ್ತಿಲ್ಲ. ಕಾರ್ಯಕರ್ತರು ಬೇಸರ ಮಾಡಿಕೊಳ್ಳಬಾರದು ಎಂದು ಹೇಳಿದರು.
ವಿಧಾನ ಪರಿಷತ್ ನ ಗಲಾಟೆ ಬಗ್ಗೆ ಮಾತನಾಡಿದ ದೇಶಪಾಂಡೆಯವರು, ವಿಧಾನಪರಿಷತ್ ನಲ್ಲಿ ನಡೆದಿರುವ ಸರಿಯಲ್ಲ ಅದು ನಮ್ಮಪಕ್ಷದವರೆ ಆಗಲಿ ಅಥವಾ ಇತರೆ ಪಕ್ಷದವರಾಗಲಿ ಅದು ತಪ್ಪು.ಪ್ರಜಾಪ್ರಭುತ್ವಕ್ಕೆ ಇದು ಮಾರಕವಾದುದು. ಸಭಾಪತಿಯವರ ಬಗ್ಗೆ ಅವಿಶ್ವಾಸ ಮಂಡಿಸುವ ತುರ್ತು ಅಗತ್ಯ ಏನಿತ್ತು? ಮೇಲ್ಮನೆಯಲ್ಲಿ ಪಾಸ್ ಆಗದ ಕಾಯ್ದೆಯನ್ನು ಪುನಃ ಕೆಳಗಿನಮನೆಗೆ ತಂದು ಪಾಸ್ ಮಾಡುವ ಅವಕಾಶವಿತ್ತು ಅದು ಬಿಟ್ಟು ವಾಮ ಮಾರ್ಗದ ಮೂಲಕ ,ಜೆಡಿಎಸ್ ಕೈ-ಕಾಲು ಹಿಡಿದು ಒಂದಾಗಿ ಗಲಾಟೆ ಎಬ್ಬಿಸುವುದು ಎಷ್ಟು ಸರಿ?ಮುಖ್ಯಮಂತ್ರಿಗಳಿಗೆ ಒಳ್ಳೆಯ ಅನುಭವವಿದೆ ಇದು ಕಾಂಗ್ರೆಸ್,ಬಿಜೆಪಿ ಪ್ರಶ್ನೆಯಲ್ಲ ಕರ್ನಾಟಕದ ಮರ್ಯಾದೆಯ ಪ್ರಶ್ನೆ ಇವನ್ನೆಲ್ಲ ನೋಡಿದರೆ ಮನಸ್ಸಿಗೆ ನೋವಾಗಿತ್ತದೆ ಎಂದು ಹೇಳಿದರು.
*****
ಮಧ್ಯಾಹ್ನ 12 ಗಂಟೆಗೆ ಶಿರಸಿಯ ಕೆಡಿಸಿಸಿ ಬ್ಯಾಂಕ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚೀವ ಶಿವರಾಮ ಹೆಬ್ಬಾರ,
ವಿಧಾನಪರಿಷತ್ ನಲ್ಲಿ ನಡೆದ ಘಟನೆಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯೇ ನೇರ ಕಾರಣ. ತನಗೆ ಬಹುಮತ ಇಲ್ಲ ಎಂದು ತಿಳಿದಿದ್ದರೂ ರಾಜಿನಾಮೆ ಕೊಡಲಿಲ್ಲ ಇದರಿಂದಲೇ ಇಂತಹ ಘಟನೆ ನಡೆದಿದ್ದು ಇದಕ್ಕೆ ಅವರೆ ಹೊಣೆಗಾರರು ಎಂದು ಆರೋಪಿಸಿದರು.
ವಿಧಾನ ಪರಿಷತ್ ನಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರ. ಕಾಂಗ್ರೆಸ್ ನವರು ತಮಗೆ ಬಹುಮತ ಇಲ್ಲಾ ಅಂತ ಗೊತ್ತಾದಾಗ ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಮೊದಲನೇ ದಿನವೇ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು ಆದರೆ ಟೆಕ್ನಿಕಲ್ ಕಾರಣಕ್ಕಾಗಿ 1 ದಿನ ಕಡಿಮೆಯಾಗಿತ್ತು. ಸ್ಪೀಕರ್ ಬಂದವರೇ ಯಾವ ಕಾರಣವೂ ಇಲ್ಲದೇ ಸದನವನ್ನ ದಿಢೀರ್ ಮುಂದೆ ಹಾಕಿದರು ಸಭಾಪತಿಯವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಇದ್ದಾಗ ಉಪಸಭಾಪತಿ ಸದನ ನಡೆಸೋದು ಸಂಪ್ರದಾಯ. ಆದರೆ
ಸಭಾಪತಿಯವರ ಅತಿಯಾದ ಅಧಿಕಾರದ ಲಾಲಸೆ ಈ ಪರಿಸ್ಥಿತಿಗೆ ಬಂದೊದಗಿದೆ. ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ಹೇಳಿದ ಸಚೀವ ಹೆಬ್ಬಾರ್, ಜಿಲ್ಲೆಯ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸೋ ಮಾತನ್ನು
ದೇಶಪಾಂಡೆ ಹೇಳಿದ್ದಾರೆ.ಅಂದು ಸಿದ್ದರಾಮಯ್ಯ ಬಂದು ಪೂಜೆ ಮಾಡಿ ಹೋಗಿದ್ದಷ್ಟೇ. ಚುನಾವಣೆ ಬಂದ ಕಾಲದಲ್ಲಿ ಮಂಜೂರಿ ಮಾಡಿದ್ದು, ಪೂಜೆ ಮಾಡಿದ್ದು ಅಷ್ಟೇ ಆಯ್ತು, ಆದ್ರೆ ಆ ಯೋಜನೆಗಳಿಗೆಲ್ಲ ಹಣ ಕೊಟ್ಟಿದ್ದು ನಾವೇ. 2 ನೇ ಹಂತದ ಹಣ ಬಿಡುಗಡೆ ಕಾಲಕ್ಕೆ ಕೋವಿಡ್ ಬಂದು ಅಭಿವೃದ್ಧಿಯ 70 ಪ್ರತಿಶತ ಪಾಲನ್ನು ನುಂಗಿತು. ಹಿರಿಯರಾದ ದೇಶಪಾಂಡೆಯವರಿಗೆ ಗೊತ್ತಿದೆ. ಅವರ ಆತ್ಮಕ್ಕೆ ಇದೆಲ್ಲ ಗೊತ್ತಿದೆ. ಅವರು ಅನುಭವಿ ರಾಜಕಾರಣಿ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ದೇಶಪಾಂಡೆಯವರಿಗೆ ತಿರುಗೇಟು ನೀಡಿದರು.
ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಯಾರನ್ನ ಸಚಿವರನ್ನಾಗಿ ಮಾಡ್ಬೇಕು, ಯಾವಾಗ ಮಾಡ್ಬೇಕು ಅನ್ನೋದನ್ನ ಯಡಿಯೂರಪ್ಪ ನಿರ್ಧರಿಸುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದರು