ಡಿ.21ಕ್ಕೆ” ನೆಲೆಮಾವು ಮಠದ ಶ್ರೀ ಗುರುಪರಂಪರೆ” ಕೃತಿ ಬಿಡುಗಡೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ನೆಲೆಮಾವು ಗ್ರಾಮದ ಶ್ರೀಮನ್ನೆಲೆಮಾವು ಮಠದ ಗುರುಪರಂಪರೆಯನ್ನು ಪರಿಚಯಿಸುವ ನೆಲೆಮಾವುಮಠದ ಶ್ರೀಗುರುಪರಂಪರೆ ಎಂಬ ಮೌಲಿಕ ಕೃತಿಯು ಡಿ.21 ರಂದು ಮಠದ ಆವಾರದಲ್ಲಿ ಬಿಡುಗಡೆಗೊಳ್ಳಲಿದೆ.
ಸಿದ್ದಾಪುರ ತಾಲೂಕಿನ ಅಣಲೇಬೈಲು ಗ್ರಾಮದ ನೆಲೆಮಾವಿನಲ್ಲಿರುವ ಶ್ರೀಮನ್ನೆಲೆಮಾವು
ಮಠವು ಹೇರೂರು ಸೀಮೆಯ ಏಕೈಕ ಧರ್ಮಸಂಸ್ಥಾನವಾಗಿದೆ.
ಸುಮಾರು 700 ವರ್ಷಗಳಷ್ಟು ಪ್ರಾಚೀನವಾದ ಈ ಪೀಠದಲ್ಲಿ ತಪಸ್ವಿಗಳೂ ಸಾಧಕರೂ ಆದ 25 ಯತಿವರೇಣ್ಯರು ವಿರಾಜಮಾನರಾಗಿದ್ದರೂ ಪರಂಪರೆಯನ್ನು ಕ್ರಮವಾಗಿ ಪರಿಚಯಿಸುವ ಕೃತಿಯೊಂದು ಈವರೆಗೂ ಬೆಳಕು ಕಂಡಿರಲಿಲ್ಲ.
ನೆಲೆಮಾವಿನವರೇ ಆದ ತತ್ವಚಿಂತಕರು,ಲೇಖಕರುವಿದ್ವಾನ್ ಗಣೇಶ ಭಟ್ಟ ಹೋಬಳಿಯವರು ಈ ಕೃತಿ ರಚನಕಾರರು
ತಮ್ಮ ಪ್ರಾಸ್ತಾವಿಕ ಬರವಣಿಗೆಯಲ್ಲಿ ಮಠಮಾನ್ಯಗಳ ಬಗ್ಗೆ ಮತ್ತು ಗುರುವಿನ ಬಗ್ಗೆ ವಿಶೇಷವಾದ ಬೆಳಕನ್ನು ಚಲ್ಲುತ್ತದೆ. ಹಿಂದಿನ ಮಠಗಳ ಧ್ಯೇಯೋದ್ದೇಶವು ಇಂದಿನ ಮಠಗಳಿಗಿಂತ ಹೇಗೆ ವಿಭಿನ್ನವಾಗಿತ್ತು? ಮಠಗಳ ನೈಜ ಸಂಪತು ್ತ
ಯಾವುದು? ಗುರು ಅಂದರೆ ಯಾರು? ಅವರು ಮಾಡುವ ಉಪಕಾರ ಎಂತಹದ್ದು? ಅವರು ಏಕೆ
ವಂದ್ಯರು? ಈ ಎಲ್ಲ ವಿಷಯಗಳು ಇಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ.
ನೆಲೆಮಾವು ಪೀಠದಲ್ಲಿ 21 ಮತ್ತು 23ನೆಯ ಯತಿವರೇಣ್ಯರಾಗಿ ವಿರಾಜಮಾನರಾಗಿದ್ದ ಪರಮ ತಪಸ್ವಿಗಳೂ ಪ್ರಕಾಂಡ ಪಂಡಿತರೂ ಶಾಸ್ತ್ರವೇತ್ತರೂ ಆದ ಶ್ರೀಕಮಲಾನಂದನೃಸಿಂಹಭಾರತೀ
ಸ್ವಾಮಿಗಳ ಮತ್ತು ಪೂಜ್ಯ ಶ್ರೀಪುರುಷೋತ್ತಮನೃಸಿಂಹಭಾರತೀ ಸ್ವಾಮಿಗಳವರಿಂದಾಗಿ ಶ್ರೀಮಠದ ಕೀರ್ತಿವಿಸ್ತಾರವು ತಮಿಳುನಾಡಿನ ಕಾವೇರೀ ತೀರದವರೆಗೂ ಹರಡಿದ್ದು,
ಅವರ ಅಗಾಧವಾದ ತಪಃಶಕ್ತಿಯನ್ನು ಅಧ್ಯಾತ್ಮ ಲೋಕಕ್ಕೆ ಸಾರುತ್ತದೆ. ಈ ಎಲ್ಲ ವಿಷಯಗಳನ್ನು ಲೇಖಕರು ತಮ್ಮದೇ ಆದ ಶೈಲಿಯಲ್ಲಿ ಈ ಗ್ರಂಥದಲ್ಲಿ ತಿಳಿಸಲಾಗಿದೆ.
ಸುಂದರವಾದ ಚಿತ್ರಸಂಪುಟವನ್ನೊಳಗೊಂಡ ಈ ಕೃತಿಯು 294 ಪುಟಗಳನ್ನು ಹೊಂದಿದ್ದು ಮಠಗಳು ಇಂದು ನಮಗೆ ಏಕೆ ಅವಶ್ಯಕ? ಎಂಬುದನ್ನು ಕೃತಿಯ ಮುನ್ನುಡಿಯಲಿ ್ಲ
ಕರ್ನಾಟಕದ ಹಿರಿಯ ವಿದ್ವಾಂಸರಾದ ವಿದ್ವಾನ್ ಅನಂತಶರ್ಮಾ ಭುವನಗಿರಿ ಅವರು ಸುಂದರವಾಗಿ
ವಿವರಿಸಿದ್ದಾರೆ.
ಎಮ್. ಆರ್.ಹೆಗಡೆ, ಹೆಗ್ಗನೂರು (ಗೋವಾ) ಇವರ ಸೇವಾ
ಸಹಕಾರದೊಂದಿಗೆ ಶ್ರೀಮಠದ ಆಡಳಿತಮಂಡಳಿಯು ಕೃತಿಯನ್ನು ಪ್ರಕಾಶನಗೊಳಿಸುತ್ತಿದೆ.ಒಳಪುಟಗಳಲ್ಲಿರುವ ಹಲವಾರು ಉತ್ತಮ ವಿಚಾರಗಳು ಕೃತಿಯ ಮೌಲಿಕತೆಯನ್ನು ಎತಿ ್ತ
ಹಿಡಿದಿದೆ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾನ್ ಸದಾಶಿವ ರಾಮಭಟ್ಟ ಹೋಬಳಿ ಇವರಿಂದ, ಸ್ವರ್ಣವಲ್ಲಿ ಶ್ರೀಗಳವರ ಆಶೀರ್ವಚನ ಶ್ರವಣದೊಂದಿಗೆ, ನೆಲೆಮಾವು ಮಠದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.
(ಆಸಕ್ತರು ಪ್ರತಿಗಳಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು:– (08389)254924,)

About the author

Adyot

Leave a Comment