ಗೊಂದಲದ ಗೂಡಾಗಿರುವ ಬಿಜೆಪಿ ಸರಕಾರ– ಸಂತೋಷ ಲಾಡ್

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಪಂಚವಟಿ ಸಭಾಭವನದಲ್ಲಿ ಮಾಜಿ ಸಚೀವ ಹಾಗೂ ಕಾಂಗ್ರೆಸ್ ಪಕ್ಷದ ಯಲ್ಲಾಪುರ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಂತೋಷ್ ಲಾಡ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಗೊಂದಲದ ಗೂಡಾಗಿದೆ.ಕೊವಿಡ್ ಪ್ರಾರಂಭವಾದಾಗಿನಿಂದ ಸರಕಾರದ ನಿರ್ಧಾರ ತಪ್ಪು ನಿರ್ಧಾರವೇ ಆಗಿದೆ ಒಬ್ಬೊಬ್ಬ ಸಚೀವರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ
ಕರ್ಫ್ಯೂ ಯಾವಾಗ ಹಾಕಬೇಕು? ಎನ್ನುವುದೇ ಸರಕಾರಕ್ಕೆ ತಿಳಿದಿಲ್ಲ ಎರಡು ದಿನದಲ್ಲಿ ಮೂರು ಆದೇಶವನ್ನು ನೀಡುವ ಮೂಲಕ ಸರಕಾರಕ್ಕೆ ಕೊವಿಡ್ ನಿರ್ವಹಣೆ ಮಾಡಲು ಬರುತ್ತಿಲ್ಲ ಎಂದು ಒಪ್ಪಿಕೊಂಡಂತಾಗಿದೆ ಎಂದು ಸಂತೋಷ್ ಲಾಡ್ ಹೇಳಿದರು.
ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಶಿವರಾಮ ಹೆಬ್ಬಾರ್, ಬಿಜೆಪಿ ಸೇರಿದ ನಂತರ ನಡೆದ ಉಪಚುನಾವಣೆಯಲ್ಲಿ ಸರ್ಕಾರದ ಎಲ್ಲಾ ಸಚಿವರು ಬಂದು 25-30 ಕೋಟಿ ಖರ್ಚು ಮಾಡಿ ಈ ಕ್ಷೇತ್ರವನ್ನು ಗೆದ್ದಿದ್ದಾರೆ. ಅದಾದ ನಂತರ ನಮ್ಮ ಪಕ್ಷದ ಬಹಳಷ್ಟು ಮುಖಂಡರು ಅವರ ಜೊತೆ ಹೋದರೂ ಕೂಡ ಪಕ್ಷವನ್ನ ಸ್ಥಳೀಯ ಮುಖಂಡರು ಸಂಘಟನೆ ಮಾಡಿದ್ದಾರೆ
ಕಾಂಗ್ರೆಸ್ ಕೇವಲ ಮುಖಂಡರನ್ನು ನಂಬಿಕೊಂಡಪಕ್ಷವಲ್ಲ ಇಲ್ಲಿ ತಳಮಟ್ಟದಲ್ಲಿ ಕಾರ್ಯಕರ್ತರಿದ್ದಾರೆ.ಇವರೆನ್ನೆಲ್ಲ ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಗೆಲುವನ್ನು ಕಾಣಬೇಕು ಎಂದು ಹೇಳಿದ ಲಾಡ್,ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷ ಯಾವ ಕ್ಷೇತ್ರದಲ್ಲಿ ನಿಲ್ಲಲು ಆದೇಶಿಸುತ್ತದೆಯೋ ಅಲ್ಲಿ ಚುನಾವಣೆಗೆ ನಿಲ್ಲಬೇಕಾಗುತ್ತದೆ. ಆದರೆ ನನ್ನ ಮೊದಲ ಆಯ್ಕೆ ಕಲಘಟಗಿಯೇ ಆಗಿದೆ
ನನ್ನನ್ನು ಯಾರೂ ಬದಿಗೆ ಸರಿಸಿಲ್ಲ ಆದರೆ ಚುನಾವಣೆಯ ಸೋಲಿನ ನಂತರ ಒಂದಿಷ್ಟು ಸೈಲೆಂಟ್ ಆಗಿರುವುದು ನಿಜ ಅತ್ಯಂತ ಕಿರಿಯ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದವನು ನಾನು ಕಳೆದ ಚುನಾವಣೆಯ ಸೋಲು ನೋವುಂಟು ಮಾಡಿದೆ
ಎಂದು ಹೇಳಿದರು.

ಕುಮಾರಸ್ವಾಮಿಯವರು ನನಗೆ ಆತ್ಮೀಯರು ಆದರೆ ಈಗ ಅವರು ನೀಡುತ್ತಿರುವ ಹೇಳಿಕೆಗಳಿಗೆ ಅವರೇ ಉತ್ತರ ನೀಡಬೇಕು.ದೇವೆಗೌಡರು ಪ್ರಧಾನಿಯಾಗಲು,ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಕಾರಣ.
ಇನ್ನು ವಿಜಯನಗರ ಜಿಲ್ಲೆ ಮಾಡಿರೋದು ನನಗೆ ಸಂತಸ ತಂದಿದೆ. ಭೂ ವಿಸ್ತಾರ ಇದ್ದಾಗ ಜಿಲ್ಲೆ ಆಗಲೇ
ಬೇಕು. ಆದರೆ ಎಲ್ಲಿ ಮಾಡಬೇಕು ಅನ್ನೋದನ್ನ ಸರ್ಕಾರ ಸ್ವಲ್ಪ ಗಮನ ತೆಗೆದುಕೊಂಡು ಮಾಡಬೇಕು. ಇನ್ನೊಂದು ತಾಲೂಕನ್ನ ಗುರುತಿಸಿಕೊಡೋಕೆ ಆಗಲ್ಲ. ಅದು ತಪ್ಪಾಗುತ್ತೆ. ಆದ್ರೆ ಆನಂದ್ ಸಿಂಗ್ ಮಾಡಿರೋದು ಖುಷಿ ಇದೆ ಎಂದು ಲಾಡ್ ಹೇಳಿದರು.

About the author

Adyot

Leave a Comment