ಸಿದ್ದಾಪುರ ಟಿಎಂಎಸ್ ಸಭಾಂಗಣದಲ್ಲಿ ದಿ.ಷಣ್ಮುಖ ಗೌಡರ್ ಗೆ ಶ್ರದ್ಧಾಂಜಲಿ

ಆದ್ಯೋತ್ ಸುದ್ದಿನಿಧಿ:
ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಹಿರಿಯ ಸಹಕಾರಿ ದಿ.ಷಣ್ಮುಖ ಗೌಡರ್ ನಿಧನರಾಗಿದ್ದು ಅವರ ಶ್ರದ್ಧಾಂಜಲಿ ಸಭೆಯನ್ನು ಶುಕ್ರವಾರ ಟಿಎಂಎಸ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿಗಳಲ್ಲೂ ದೋಷವಿರುತ್ತದೆ ಇದರ ಮಧ್ಯಯೇ ಜನರಿಗೆ ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎನ್ನುವ ಮನಸ್ಥಿತಿ ಕೆಲವರಲ್ಲಿ ಮಾತ್ರವಿರುತ್ತದೆ. ಅಂತಹವರ ಸಾಲಿನಲ್ಲಿ ಷಣ್ಮೂಖ ಗೌಡರು ನಿಲ್ಲುತ್ತಾರೆ. ಅವರು ಭೌತಿಕವಾಗಿ ನಮ್ಮ ಜೊತೆಗೆ ಇಲ್ಲ ಆದರೆ ಅವರ ಆದರ್ಶ,ಸಮಾಜದ ಬಗ್ಗೆ ಅವರಿಗಿರುವ ಖಾಳಜಿ ನಮ್ಮ ಮುಂದಿದೆ ಇದನ್ನು ನಾವು ಪಾಲಿಸಬೇಕಾಗಿರುವುದೇ ನಿಜವಾದ ಶ್ರದ್ಧಾಂಜಲಿ, ಸಹಕಾರಿ ಕ್ಷೇತ್ರದ ಮೂಲಕ ತಾಲೂಕಿನ ಜನತೆಗೆ ಒಳ್ಳೆಯದನ್ನು ಮಾಡಬೇಕು ಎಂಬ ಅಭಿಲಾಷೆ ಹೊಂದಿದ್ದ ಗೌಡರು ಅಪೇಕ್ಸ್ ಬ್ಯಾಂಕ್ ಮೂಲಕ,ಕೆಡಿಸಿಸಿ ಬ್ಯಾಂಕ ಹಾಗೂ ಟಿಎಂಎಸ್,ಎಪಿಎಂಸಿ ಮೂಲಕ ಸಾಕಷ್ಟು ಒಳ್ಳೆಯದನ್ನು ಮಾಡಿದ್ದಾರೆ. ಎಂದು ಹೇಳಿದರು.

ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಮಾತನಾಡಿ,ಸಹಕಾರಿ ಕ್ಷೇತ್ರಕ್ಕೆ ನನ್ನ ಜೊತೆಗೆ ಬಂದ ಷಣ್ಮುಖ ಗೌಡರು ಬಡವರ ಬಗ್ಗೆ ಅಪಾರ ಖಾಳಜಿ ಹೊಂದಿದ್ದರು. ಸಹಕಾರಿ ಕ್ಷೇತ್ರದ ಎಲ್ಲಾ ಪಟ್ಟುಗಳನ್ನು ಅವರು ಅರಿತಿದ್ದರು. ಟಿಎಂಎಸ್ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ಎಪಿಎಂಸಿ ಅಧ್ಯಕ್ಷ ಕೆ.ಕೆ.ನಾಯ್ಕ ಸುಂಕತ್ತಿ,ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡು ಮುಂತಾಧವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಿರಸಿ ಜಿಲ್ಲಾ ಸಮಿತಿಯ ತಾಲೂಕು ಅಧ್ಯಕ್ಷ ಸಿ.ಎಸ್.ಗೌಡರ್ ಹಾಗೂ ಇತರ ಪದಾಧಿಕಾರಿಗಳು ಶಿರಸಿ ಜಿಲ್ಲೆಯನ್ನಾಗಿ ಮಾಡುವಂತೆ ಸರಕಾರವನ್ನು ಒತ್ತಾಯಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಸಲ್ಲಿಸಿದರು.
*******
ನಾ.ಸು.ಭರತನಹಳ್ಳಿ ಇನ್ನಿಲ್ಲ

ಹಿರಿಯ ಸಾಹಿತಿ, ಸಂಸ್ಕೃತ ವಿದ್ವಾಂಸ, ಖ್ಯಾತ ಅಂಕಣಕಾರ ಹಾಗೂ ಯಲ್ಲಾಪುರ ತಾಲೂಕಾ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ನಾ.ಸು ಭರತನಳ್ಳಿ (84)ಅವರು ಶುಕ್ರವಾರ ನಿಧನರಾಗಿದ್ದಾರೆ.

ಸಾಹಿತಿ, ರಂಗಕರ್ಮಿ, ಪತ್ರಕರ್ತ, ಪ್ರಕಾಶಕರಾಗಿ 60 ಕ್ಕೂ ಹೆಚ್ಚು ವರ್ಷ ಸಾಹಿತ್ಯದ ಸೇವೆ ಮಾಡಿದ್ದರು. ಕಥೆ, ಕಾದಂಬರಿ, ಕವನ, ಪ್ರವಾಸಿ ಕಥನ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಬರಹ ಸೇರಿದಂತೆ 26 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಸಿದ್ದಾಪುರದಲ್ಲಿ ನಡೆದ ಜಿಲ್ಲಾ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.

ದಿನಪತ್ರಿಕೆಯ ಅಂಕಣಕಾರರಾಗಿದ್ದರಲ್ಲದೆ ಸ್ವರ್ಣವಲ್ಲಿ ಸಂಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರದಲ್ಲಿ ಸೇ

About the author

Adyot

Leave a Comment