ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಕುಳವೆ ಜನತಾ ವಿದ್ಯಾಲಯದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತದಾನ ಮಾಡಿದರು.
ಯಲ್ಲಾಪುರ ಅರೇಬೈಲ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಚೀವ ಶಿವರಾಮ ಹೆಬ್ಬಾರ ಪತ್ನಿ ಪುತ್ರ ವಿವೇಕ ಹೆಬ್ಬಾರ್ ಜೊತೆಗೆ ಆಗಮಿಸಿ ಮತದಾನ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮ ಹೆಬ್ಬಾರ್,ಬಿಜೆಪಿ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಯಾರೇ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಒಂದು ವೇಳೆ ನಮ್ಮ ಸೈದ್ದಾಂತಿಕ ಹಿನ್ನಲೆ ಒಪ್ಪಿ ಜೆಡಿಎಸ್ ನಮ್ಮ ಜೊತೆ ವಿಲೀನವಾಗುವುದಾದರೆ ಖಂಡಿತಾ ಸ್ವಾಗತಿಸಲಾಗುವುದು
ಜೆಡಿಎಸ್ ನವರು ನಾವು ನಿಮ್ಮ ಪಕ್ಷ ಸೇರುತ್ತೇವೆ ಎಂದು ಮುಂದೆ ಬಂದರೆ ಸೇರಿಸಿಕೊಳ್ಳುವುದಿಲ್ಲ ಎನ್ನುವಷ್ಟು ಮೂರ್ಖರು ನಾವಲ್ಲ ಆದರೆ ಅವರು ಒಮ್ಮೆ ಬಿಜೆಪಿ ಎನ್ನುತ್ತಾರೆ ಇನ್ನೊಮ್ಮೆಕಾಂಗ್ರೆಸ್ ಎನ್ನುತ್ತಾರೆ ಎಂದು ಹೇಳಿದರು.
,ರಾಜ್ಯದಲ್ಲಿ ಕೊವಿಡ್ ಎರಡನೇ ಅಲೆಯೂ ಪ್ರಾರಂಭವಾಗಿದ್ದು ಕೊವಿಡ್ ಲಸಿಕೆ ನೀಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಲಸಿಕೆ ಸಂಗ್ರಹದ ಕೊಠಡಿ ಸಿದ್ದವಾಗಿದ್ದು ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ.ರಾಜ್ಯದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲು ನಮ್ಮ ಸರಕಾರ ತೀರ್ಮಾನಿಸಿದೆ ಎಂದು ಹೇಳಿದರು.