ಆದ್ಯೋತ್ ಸುದ್ದಿನಿಧಿ:
ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವಾಲಯಕ್ಕೆ ಚಿತ್ರನಟ ಪುನಿತ್ ರಾಜಕುಮಾರ್ ಆಗಮಿಸಿ, ಆತ್ಮಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಿದರು.ದೇವಾಲಯದ ಆಡಳಿತ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ; ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಮಾಹಿತಿ ಪಡೆದರು.
ನಂತರ ಪುನೀತ್ ರಾಜಕುಮಾರ ಆಪ್ತರೊಬ್ಬರ ವಿವಾಹದಲ್ಲಿ ಭಾಗಿಯಾಗಲು ಉತ್ತರಕನ್ನಡ ಜಿಲ್ಲೆಯ ಕುಮಟಾಕ್ಕೆ ಭೇಟಿ ನೀಡಿದರು.
ಪಟ್ಟಣದ ದೇವರಹಕ್ಕಲ ಸಭಾಭವನದಲ್ಲಿ ಪುನೀತ್ ಅವರ ಕಛೇರಿಯ ಅಕೌಂಟ್ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಗುರುರಾಜ್ ಎಂಬುವವರ ಮದುವೆ ನಿಮಿತ್ತ ಆಗಮಿಸಿದ ಅಪ್ಪು ವಧು-ವರರಿಗೆ ಶುಭಕೋರಿ ತೆರಳಿದರು.
ಇನ್ನು ಪವರ್‌ಸ್ಟಾರ್ ಆಗಮನದ ಸುದ್ದಿ ತಿಳಿದು ಅಭಿಮಾನಿಗಳು ಸಭಾಭವನದ ಹೊರಗೆ ಕಿಕ್ಕಿರಿದು ತುಂಬಿದ್ದು ಪುನೀತ್ ರಾಜಕುಮಾರ ಆಗಮಿಸುತ್ತಿದ್ದಂತೆ ಘೋಷಣೆಗಳನ್ನ ಕೂಗಿ, ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದರು. ಮದುವೆಯಲ್ಲಿ ಭಾಗವಹಿಸಿ ಅಪ್ಪು ವಾಪಸ್ ತೆರಳುವವರೆಗೂ ಅಭಿಮಾನಿಗಳು ಕಾದು ಕುಳಿತಿದ್ದು ಪುನೀತ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದಕ್ಕೆ ಮುಗಿಬಿದ್ದರು.ತಮ್ಮ ಊರಿನಲ್ಲಿ ನೆಚ್ಚಿನ ನಟನನ್ನ ಕಂಡು ಪವರ್‌ಸ್ಟಾರ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದು ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.