ಜನವರಿ- 10 ರಿಂದ 12 ರವರೆಗೆ ಯುವಕಾಂಗ್ರೆಸ್ ಅಧ್ಯಕ್ಷರ ಚುನಾವಣೆ: ಉತ್ತರಕನ್ನಡ ಜಿಲ್ಲೆಯಲ್ಲಿ ಜ.11ಕ್ಕೆ ಚುನಾವಣೆ

ಆದ್ಯೋತ್ ಸುದ್ದಿನಿಧಿ
ಜನವರಿ-10 ರಿಂದ ಜನವರಿ-12ರವರೆಗೆ ಮೂರು ದಿನಗಳ ಕಾಲ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಡೆಯಲಿದೆ.
ಕೋವಿಡ್ ಕಾರಣದಿಂದ ಇದೇ ಮೊದಲ ಬಾರಿಗೆ ಆನ್‍ಲೈನ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಯುವ ಕಾಂಗ್ರೆಸ್ ಸದಸ್ಯರು ಮತದಾನಕ್ಕೆ ಅರ್ಹರಿದ್ದಾರೆ. ಒಂದೇ ಸಮಯದಲ್ಲಿ ನಾಲ್ಕು ಮತ ನೀಡಲು ಸದಸ್ಯರಿಗೆ ಅವಕಾಶವಿದ್ದು ರಾಜ್ಯಅಧ್ಯಕ್ಷ, ರಾಜ್ಯ ಪ್ರದಾನಕಾರ್ಯದರ್ಶಿ,ಜಿಲ್ಲಾಧ್ಯಕ್ಷ ಹಾಗೂ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಮತದಾನ ಮಾಡಲು ಅವಕಾಶವಿದೆ.

ಹೆಚ್.ಎಸ್.ಮಂಜುನಾಥ

ಮಿಥುನ್ ರೈ

ಎಂ.ಡಿ.ನಲಪಾಡ್

ರಕ್ಷಾ ರಾಮಯ್ಯ
ರಾಜ್ಯ ಯುವಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟೂ 7 ಜನರು ಚುನಾವಣೆಯ ಕಣದಲ್ಲಿದ್ದಾರೆ.ಎನ್‍ಎಸ್‍ಐಯು ಅಧ್ಯಕ್ಷ ಎಚ್.ಎಸ್.ಮಂಜುನಾಥ,ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮಿಥುನ ರೈ,ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಎಂ.ಡಿ.ನಲಪಾಡ್,ಮಾಜಿ ಸಚೀವ ಎಂ.ಆರ್.ಸೀತಾರಾಂ ಪುತ್ರ ರಕ್ಷಾ ರಾಮಯ್ಯ,ಸಂದೀಪ್ ನಾಯಕ್,ಖಾಲಿದ್ ಹಾಗೂ ಭವ್ಯ ಸ್ಪರ್ಧಾಕಣದಲ್ಲಿದ್ದಾರೆ.
ಮೊದಲ ನಾಲ್ಕು ಜನರಲ್ಲಿ ತೀವ್ರ ಪೈಪೋಟಿ ಇದ್ದರೂ ಕೊನೆಯ ಹಂತದಲ್ಲಿ ಎಂ.ಡಿ.ನಲಪ್ಪಾಡ್ ಹಾಗೂ ಎಚ್.ಎಸ್.ಮಂಜುನಾಥ ನಡುವೆ ಪೈಪೋಟಿ ಏರ್ಪಡಲಿದೆ ಹಾಗೂ ಹೆಚ್ಚಿನ ಹಿರಿಯ ನಾಯಕರ ಕೃಪಾಕಟಾಕ್ಷವಿದೆ ಆದ್ದರಿಂದ ಇಬ್ಬರಲ್ಲಿ ಒಬ್ಬರು ಅಧ್ಯಕ್ಷರಾಗುವುದು ಖಚಿತ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.
—-
ಉತ್ತರಕನ್ನಡ ಜಿಲ್ಲೆಯಲ್ಲಿ ಜನವರಿ-11 ಕ್ಕೆ ಯುವ ಕಾಂಗ್ರೇಸ್ ಅಧ್ಯಕ್ಷರ ಆಯ್ಕೆಯ ಚುನಾವಣೆ ನಡೆಯಲಿದೆ. 6200 ಯುವಕಾಂಗ್ರೆಸ್ ಸದಸ್ಯರಿದ್ದಾರೆ ಇವರೆಲ್ಲರೂ ಮತದಾನಕ್ಕೆ ಅರ್ಹರಾಗಿದ್ದಾರೆ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಐವರು ಸ್ಪರ್ಧಿಗಳಿದ್ದು ನಿಕಟಪೂರ್ವ ಅಧ್ಯಕ್ಷ ಸಂತೋಷ ಶೆಟ್ಟಿ ಪುನಃ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಇವರಲ್ಲದೆ ಕುಮಾರ ಜೋಷಿ,ಮಲ್ಲಿಕ ಕೆ. ಸುಬ್ರಹ್ಮಣ್ಯ ಸಿರ್ಸಿಕರ,ಸೂರಜ್ ನಾಯ್ಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಜಿಲ್ಲೆಯಲ್ಲಿ 14 ಬ್ಲಾಕ್‍ನಲ್ಲಿ ಯುವ ಕಾಂಗ್ರೆಸ್ ಘಟಕವಿದ್ದು 6 ಬ್ಲಾಕ್‍ನಲ್ಲಿ ಯಾರೂ ಸ್ಪರ್ಧಿಸುತ್ತಿಲ್ಲ ಉಳಿದ 8 ಬ್ಲಾಕ್‍ನಲ್ಲಿ ಸಿದ್ದಾಪುರ ಬ್ಲಾಕ್‍ಗೆ- ಪ್ರಶಾಂತ ಸದಾನಂದ ನಾಯ್ಕ,ಬನವಾಸಿ ಬ್ಲಾಕ್‍ಗೆ- ಅನಿಲಕುಮಾರ ಗೌಡರ್,ಹೊನ್ನಾವರ ಬ್ಲಾಕ್‍ಗೆ- ಸಂದೇಶ ಶೆಟ್ಟಿ,ಕುಮಟಾ ಬ್ಲಾಕ್‍ಗೆ -ಸಂದೀಪ ಮಧುಕರ ನಾಯ್ಕ ಮಂಕಿ ಬ್ಲಾಕ್‍ಗೆ -ಹರೀಶ ಗೌಡ ಅವಿರೋಧ ಆಯ್ಕೆಯಾಗಿದ್ದಾರೆ ಆದರೆ ಶಿರಸಿ ಬ್ಲಾಕ್‍ಗೆ -ಅಜೀರುದ್ದೀನ್ ಇಲಿಯಾಸ್,ಫಹದ್ ಖಾನ್, ,ಹಳಿಯಾಳ ಬ್ಲಾಕ್‍ಗೆ -ರವಿ ತೋರಣಗಟ್ಟಿ,ಯಶವಂತ ಪಟ್ಟೇಕರ್,
ಕಾರವಾರಬ್ಲಾಕ್‍ಗೆ-ಮೊಹಮ್ಮದ್ ಹನೀಪ್,ನೂತನ ಶೆಟ್ಟಿ, ಸ್ಪರ್ಧಿಸಿದ್ದಾರೆ.

About the author

Adyot

Leave a Comment