ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜ.9 ಶನಿವಾರ ದಿಂದ ಜ.13 ಬುಧವಾರದವರೆಗೆ ಐದು ದಿನಗಳ ಕಾಲ ಉದ್ಯಮಿಸಂತೆ ನಡೆಯಲಿದೆ.
ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ್ ಈ ಉದ್ಯಮಿ ಸಂತೆಯನ್ನು ನಡೆಸಲಿದ್ದು ಇದರ ಮುಖ್ಯಸ್ಥ ಪ್ರಸನ್ನ ಕುಲಕರ್ಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಸಣ್ಣ ಉದ್ದಿಮೆದಾರರನ್ನ ಗುರಿಯಾಗಿಸಿ ಈ ಪ್ರದರ್ಶನ ಏರ್ಪಡಿಸಲಾಗಿದೆ.
ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡೋ ದೃಷ್ಟಿಯಿಂದ ಹಾಗೂ ಸ್ಥಳೀಯ ಬೆಳೆಗಳನ್ನ ಆಧಾರವಾಗಿಟ್ಟುಕೊಂಡು ಮಲೆನಾಡಿನ ಉತ್ಪನ್ನಗಳನ್ನು ದೇಶ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಈ ಸಂತೆಯನ್ನು ಆಯೋಜಿಸಲಾಗಿದೆ.ಮಲೆನಾಡಿನಲ್ಲಿ
ಹಲಸು,ಬಾಳೆಹಣ್ಣು,ಅನಾನಸ್,ಕೊಕಂ ಹೆಚ್ಚಾಗಿ ಬೆಳೆಯಲಾಗುತ್ತಿದೆ ಅಲ್ಲದೆ ಸಾಂಬಾರ್ ಪದಾರ್ಥಗಳು ದೊರಕುತ್ತದೆ ಇದಕ್ಕೆ ದೇಸೀಯ ಮಾರುಕಟ್ಟೆಯ ಜೊತೆಗೆ ವಿದೇಶಿ ಮಾರುಕಟ್ಟೆಯೂ ದೊರಕುವಂತೆ ಪ್ರಯತ್ನ ಮಾಡುವ ಗುರಿಯನ್ನು ಫೌಂಡೇಶನ್ ಹೊಂದಿದೆ ಎಂದು ಕುಲಕರ್ಣಿ ತಿಳಿಸಿದರು.
ನಮ್ಮ ಫೌಂಡೇಶನ್ ಇಂದ ಇಲ್ಲಿಯವರೆಗೆ 150 ಉದ್ಯಮ ಸಂತೆಗಳನ್ನ ಮಾಡಲಾಗಿದೆ. 2 ಕೋಟಿಗೂ ಅಧಿಕ ವ್ಯಾಪಾರವನ್ನ ಮಾಡಲಾಗಿದೆ. ಹಲವಾರು ಸಣ್ಣ ಉದ್ದಿಮೆಗಳು ಇದರ ಲಾಭ ಪಡೆದುಕೊಂಡಿವೆ.ಕಳೆದ ಬಾರಿ ಈ ಭಾಗದಲ್ಲಿ ಸಂತೆ ನಡೆಸಲಾಗಿತ್ತು ಸುಮಾರು 15ಲಕ್ಷರೂ.ವ್ಯವಹಾರ ಮಾಡಲಾಗಿತ್ತು ಈ ಬಾರಿ 30ಲಕ್ಷರೂ.ಗಳ ಗುರಿ ಹೊಂದಲಾಗಿದೆ.ಸಂತೆಯಲ್ಲಿ 50 ಮಳಿಗೆ ಹಾಕಲಾಗುವುದು ಅದರಲ್ಲಿ 30 ಮಳಿಗೆಯನ್ನು ಜಿಲ್ಲೆಯ ಉದ್ದಿಮೆದಾರರಿಗೆ ನೀಡಲಾಗುವುದು 20 ಮಳಿಗೆಯನ್ನು ಹೊರಜಿಲ್ಲೆಯ ಉದ್ದಿಮೆದಾರರಿಗೆ ನೀಡಲಾಗುವುದು ಎಂದು ಹೇಳಿದರು
ಸುದ್ದಿಗೋಷ್ಠಿಯಲ್ಲಿ ರೋಹಿಣಿ ಸೈಲ್, ಬಸವರಾಜ್, ಇಮ್ಯಾನುವೆಲ್ ಉಪಸ್ಥಿತರಿದ್ದರು.