ಜನವರಿ-14 ರಿಂದ 17 ರವರೆಗೆ ಸಿದ್ದಾಪುರ ಭಾನ್ಕುಳಿಮಠ ಗೋ ಸ್ವರ್ಗ ದಲ್ಲಿ ಗೋ ದಿನ ಹಾಗೂ ಆಲೆಮನೆ ಹಬ್ಬ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಭಾನ್ಕುಳಿಮಠದ ಗೋ ಸ್ವರ್ಗದಲ್ಲಿ .14 ರಿಂದ .17ರವರೆಗೆ ಗೋ ದಿನ ಹಾಗೂ ಆಲೆಮನೆ ಹಬ್ಬ ನಡೆಯಲಿದೆ.
ಈ ಕುರಿತು ಶನಿವಾರ ಕಾರ್ಯಕ್ರಮ ಸಮಿತಿಯ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಸುದ್ದಿಗೋಷ್ಠಿ ನಡೆಸಿದರು

ತಾಲೂಕಿನ ಭಾನ್ಕುಳಿಯ ಗೋಸ್ವರ್ಗದಲ್ಲಿ ಜನವರಿ 14 ಸಂಕ್ರಾತಿಯಿಂದ ಜ.17ರವರೆಗೆ ನಾಲ್ಕು ದಿನಗಳ ಕಾಲ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಗೋ ದಿನ ಹಾಗೂ ಆಲೆಮನೆ ಹಬ್ಬ ನಡೆಯಲಿದೆ
ಕಳೆದ ನಾಲ್ಕು ವರ್ಷದಿಂದ ಗೋದಿನವನ್ನು ಗೋಸ್ವರ್ಗದಲ್ಲಿ ಆಚರಿಸಲಾಗುತ್ತಿದ್ದು ದೀಪಾವಳಿಯ ದಿನ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಗೋದಿನ ಆಚರಿಸಲಾಗುತ್ತಿದೆ.
ಗೋವು ನಮ್ಮ ಜೀವನದ ಅವಿಬಾಜ್ಯ ಅಂಗವಾಗಿದೆ ಇದನ್ನು ಉಳಿಸಬೇಕಾಗಿದೆ ಇದಕ್ಕಾಗಿ ಜನರಿಗೆ ಗೋವು ಹಾಗೂ ಅದರ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಆ ದಿಸೆಯಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಗೋದಿನ ಆಚರಣೆ ನಡೆಯುತ್ತಿದೆ. ಕಾರ್ಯಕ್ರಮವನ್ನು ಮೂರು ಭಾಗವಾಗಿ ವಿಭಾಗಿಸಲಾಗಿದೆ ಗೋ ಸೇವೆ,ವಿಚಾರಗೋಷ್ಠಿ,ಹಾಗೂ ಸಾವಯವ ಕೃಷಿಯಿಂದ ಬೆಳೆದ ಕಬ್ಬಿನಿಂದ ತಯಾರಿಸಲಾಗುವ ಕಬ್ಬಿನಹಾಲಿನ ಉತ್ಪನ್ನಗಳ ಆಲೆಮನೆ ಹಬ್ಬವನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಸಮಿತಿಯ ಅಧ್ಯಕ್ಷ ಎಂ.ಜಿ.ರಾಮಚಂದ್ರ ಮಾತನಾಡಿ, ಗೋವುಗಳ ವಿಶ್ರಾಂತಿಯ ಕಾಲ ಪ್ರಾರಂಭವಾಗುವ ಮಕರ ಸಂಕ್ರಾತಿ ದಿನದ ಮಧ್ಯಾಹ್ನ 12 ಗಂಟೆಗೆ ಗೋದಿನ ಉದ್ಘಾಟನೆ ಗೊಳ್ಳಲಿದೆ. ಮಧ್ಯಾಃನ 2-30ಗಂಟೆಗೆ ಧರ್ಮ ಮತ್ತು ಗೋವು ವಿಚಾರಗೋಷ್ಠಿ ನಡೆಯಲಿದೆ. ದಿ.15ರಂದು ಮಧ್ಯಾಹ್ನ 12 ಗಂಟೆಯಿಂದ ಗೋಸೇವೆ,ಗೋಪೂಜೆ,ಗೋಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2-30ಕ್ಕೆ ಮಲೆನಾಡು ಗೋತಳಿ ವಿಚಾರಗೋಷ್ಠಿ ನಡೆಯಲಿದೆ.ದಿ.16ರಂದು ಬೆಳಿಗ್ಗೆ 9-00ಗಂಟೆಗೆ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳ ಆರಂಭ,10-30ಕ್ಕೆ ಕೃಷಿ ಮತ್ತುಗೋವು, ವಿಚಾರಗೋಷ್ಠಿ,ಮಧ್ಯಾಹ್ನ 12 ಗಂಟೆಗೆ ಗೋಸೇವೆ, 3-30ಕ್ಕೆ ಹರಿಕಥೆ,ಸಂಜೆ 4-00ಗಂಟೆಗೆ ಗುರುವಿನೊಂದಿಗೆ ಛಾತ್ರರು ವಿದ್ಯಾರ್ಥಿಗಳ ಸಂವಾದ,ಸಂಜೆ 5ಕ್ಕೆ ಸಾಲಂಕೃತ ಗೋದಾನ,ದಿ.17ಕ್ಕೆ ಮುಂಜಾನೆ 5 ಗಂಟೆ ಸ್ವರ್ಗಸಂಗೀತ,7 ಗಂಟೆಗೆ ದಾಸಸಂಕೀರ್ತನ,ಬೆಳಿಗ್ಗೆ 10-30ಕ್ಕೆ ಆಹಾರ,ಆರೋಗ್ಯ ಮತ್ತು ದೇಶಿಯ ಗೂವು ವಿಚಾರಗೋಷ್ಠಿ,ಮಧ್ಯಾಃನ 12 ಗಂಟೆಗೆ ಗೋಸೇವೆ,2-30ಕ್ಕೆ ಸಾಲಂಕೃತ ಗೋದಾನ 3-00ಗಂಟೆಗೆ ಮಾತೃತ್ವಂ ಸಮಾವೇಶ ನಡೆಯಲಿದೆ ಗೋಸೇವೆ ಪ್ರತಿದಿನ ನಡೆಯಲಿದ್ದು ಸಂಜೆ 4 ಗಂಟೆಯಿಂದ ಆಲೆಮನೆ ಹಬ್ಬ ಪ್ರಾರಂಭಾವಗುತ್ತದೆ ಮತ್ತು ಸಂಜೆ 6 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಡಾ.ರವಿ ಮಾತನಾಡಿ, ಸುಮಾರು 700ಕ್ಕೂ ಅಧಿಕ ಗೂವುಗಳಿರುವ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗವಾಗಿದ್ದು ಗೋವಿನ ಬಗ್ಗೆ ಅರಿವು ಮೂಡಿಸಲು ಗೋದಿನದ ಆಚರಣೆ ಮಾಡಲಾಗುತ್ತಿದೆ ಕೃಷಿಗೆ ಅವಶ್ಯಕವಿರುವ ಗೋವಿನ ಹಬ್ಬದ ಗೋದಿನದ ಆಚರಣೆಯ ಸಂದರ್ಭದಲ್ಲಿ ಕೊವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಗೋಮೂತ್ರದಿಂದ ತಯಾರಿಸಲಾದ ಸ್ಯಾನಿಟೈಸರ್‍ನಿಂದ ಈಡೀ ದೇಹವನ್ನು ಸ್ಯಾನಿಟೈಸ್ ಮಾಡಿ ಒಳಗೆ ಬಿಡಲಾಗುವುದು. ಮಾಸ್ಕ ಧರಿಸುವುದನ್ನು ಕಡ್ಡಾಯಗೋಳಿಸಲಾಗುವುದು ಗೋಸೇವೆ ಮಾಡಬಯಸುವವರು ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಸೇವೆ ನಡೆಸಲು ಅನಕೂಲವನ್ನು ಕಲ್ಪಿಸಲಾಗುವುದು. ಸಾಂಪ್ರದಾಯಿಕ ಆಲೆಮನೆ ಇರಲಿದ್ದು ಕಬ್ಬಿನ ಹಾಲಿನಿಂದ ತಯಾರಾಗುವ ಉತ್ಪನ್ನಗಳ ಮಾರಾಟವೂ ಇರುತ್ತದೆ ಇವೆಲ್ಲವುಗಳ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೋದಿನ ಕಾರ್ಯಕ್ರಮದ ಸಮಿತಿಯ ವಿವಿಧ ಪದಾಧಿಕಾರಿಗಳಾದ ಎಂ.ಎಂ.,ಹೆಗಡೆಮಗೆಗಾರ,ವೀಣಾ ಭಟ್ಟ,ಮಧು ಭಟ್ಟ,ರಾಮಚಂದ್ರ ಅಜ್ಜೆಕಾನು ಮುಂತಾಧವರು ಉಪಸ್ಥಿತರಿದ್ದರು.

About the author

Adyot

Leave a Comment