ಕಣ್ಣಿಗೆ ಹಬ್ಬವನ್ನುಂಟು ಮಾಡುವ
ಜೋಯಿಡಾದ
ಪತಂಗದ ಪಾಕ್೯
ಎಲ್ಲಿ ನೋಡಿದರೂ ಹಾರುತ್ತಿರೋ ಪತಂಗಗಳೇ ಕಣ್ಣಿಗೆ ಕಾಣುತ್ತಿವೆ. ಹೂವಿನಿಂದ ಹೂವಿಗೆ ಹಾರುತ್ತ ಕಣ್ಣಿಗೆ ಹಬ್ಬವನ್ನುಂಟು ಮಾಡೋ ಪತಂಗಗಳ ಸಾಲು. ಇವೆಲ್ಲ ಕಂಡುಬಂದಿದ್ದು ಜೋಯಿಡಾ ತಾಲೂಕಿನ ಕೇಂದ್ರ ಸ್ಥಳ ಜೊಯಿಡಾದಲ್ಲಿ. ಅರಣ್ಯ ಇಲಾಖೆ ನಿರ್ಮಿಸಿದ ಸಾಲು ಮರದ ತಿಮ್ಮಕ್ಕ ಉದ್ಯಾನವನ ದೊಳಗೆ ಈ ಪತಂಗ ಪಾರ್ಕ್ ಇದೆ.
ಈ ಪಾರ್ಕ್ ನಲ್ಲಿ ಹಲವಾರು ಬಗೆಯ ಪತಂಗಗಳನ್ನ ನೋಡಬಹುದಾಗಿದೆ. ಕಳೆದ ವರ್ಷ ಈ ಪತಂಗ ಪಾರ್ಕ್ ನಿರ್ಮಾಣ ಕೈಗೊಂಡ ಅರಣ್ಯ ಇಲಾಖೆ ಈವರೆಗೂ ನೂರಕ್ಕೂ ಹೆಚ್ಚು ನಮೂನೆಯ ಪತಂಗಗಳನ್ನ ಗುರುತಿಸಿದೆ.
ಈ ಪತಂಗ ಪಾರ್ಕ್ ನಲ್ಲಿ Angled Pierrot Grey count, Grass demon, Tawny coster, Peacock pansy, Grey pansy, Paris peacock, Commander, Dark blue tiger, Lime butterfly, Plain tiger ಮೊದಲಾದ ಜಾತಿಯ ಪತಂಗಗಳು ಇವೆ. ಇನ್ನೂ ಹಲವಾರು ಬಗೆಯ ಹೂವಿನ ಗಿಡ ನೆಡುವ ಮೂಲಕ ಮತ್ತಷ್ಟು ಪತಂಗಗಳನ್ನ ಆಕರ್ಷಿಸುವ ಗುರಿ ಇಟ್ಟು ಕೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿ ಸಿ ಆರ್ ನಾಯ್ಕ ತಿಳಿಸಿದ್ದಾರೆ.
ಜೋಯಿಡಾ ಅಂದ ಕೂಡಲೇ ನೆನಪಾಗುವುದು
ಇಲ್ಲಿನ ಅರಣ್ಯ ಮತ್ತು ಪರಿಸರ, ಪ್ರಾಣಿ ಪಕ್ಷಿಗಳು. ಅವುಗಳ ಜೊತೆಗೆ ಈ ಪತಂಗ ಪಾರ್ಕ್ ಜೊಯಿಡಾದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ.
ಸಾಲು ಮರದ ತಿಮ್ಮಕ್ಕ ಉದ್ಯಾನ ವನ ಜೊಯಿಡಾದ ಕೇಂದ್ರದಲ್ಲಿಯೆ ಇದ್ದು, ದಾಂಡೇಲಿಯಿಂದ ಜೊಯಿಡಾ ಪ್ರವೇಶಿಸುವ ದಾರಿಯಲ್ಲೇ ಇದೆ,ಪ್ರವಾಸಿಗರು ಇದರ ಸೌಂದರ್ಯವನ್ನ ಸವಿಯಬಹುದಾಗಿದೆ.
***ಶ್ರೀಧರ ಮದ್ದಿನಕೆರೆ