ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಜೋಡುಕೆರೆ ಕ್ರಾಸ್ ನಲ್ಲಿ ಬುಧವಾರ ಯಾವುದೇ ದಾಖಲಾತಿ ಇಲ್ಲದ 50ಲಕ್ಷರೂ.ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಯಿಂದ ಮಂಗಳೂರು ಕಡೆಗೆ ಹೋಗುವ ಖಾಸಗಿ ಬಸ್ ನಲ್ಲಿ ಹಣವನ್ನು ಸಾಗಾಟ ಮಾಡಲಾಗುತ್ತಿತ್ತು.
ಮಧ್ಯರಾತ್ರಿ 1-15 ರ ಸುಮಾರಿಗೆ ಯಲ್ಲಾಪುರ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿಗಳು ದಿನೇಶ ದಿಲೀಪ್ ಪ್ರಭಾತಜಿ ಠಾಕೂರು ಎನ್ನುವವನನ್ನು ಬಂಧಿಸಿ ಅವನಿಂದ 50ಲಕ್ಷರೂ.ಹಾಗೂ ವಿವಿಧ ಕಂಪನಿಗಳ 23 ಸಾವಿರರೂ. ಬೆಲೆಬಾಳುವ 6 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ನೀಡಿದ ಸುಳಿವಿನ ಮೇರೆಗೆ ಇನ್ನಿತರ ಆರೋಪಿಗಳಾದ ಪಂಕಜಕುಮಾರ ಪ್ರಭಾತಜಿ ಠಾಕೂರು,ಗೋವಿಂದಬಾಯಿ ನಾಥೂದಾನ್ ಪಟೇಲ್,ಮುಖೇಶಬಾಯಿ ಚತುರಬಾಯಿ ಪಟೇಲ್,ಉಪೇಂದ್ರ ನಾರಾಯಣಬಾಯಿ ಪಾಟೇಲ್ ಎನ್ನುವವರನ್ನು ವಶಕ್ಕೆ ಪಡೆದು
ಎ.ಎಸ್.ಐ.ಪುಟ್ಟೆಗೌಡ ಪ್ರಕರಣ ದಾಖಲಿಸಿದ್ದಾರೆ.