ವಿಧಾನಸಭಾಧ್ಯಕ್ಷ ಕಾಗೇರಿಯವರಿಂದ ಲೋಕಸಭಾಧ್ಯಕ್ಷ ಬಿರ್ಲಾ ಭೇಟಿ: ಮೈಸೂರಿನಲ್ಲಿ ದಾಸೋಹ ದಿನಾಚರಣೆ

ಆದ್ಯೋತ್ ಸುದ್ದಿನಿಧಿ:
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗುರುವಾರ ನವದೆಹಲಿಯಲ್ಲಿ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರನ್ನು ಬೇಟಿ ಮಾಡಿ ಸಂಸದೀಯ ವಿಷಯಗಳ ಕುರಿತಂತೆ ಚರ್ಚಿಸಿದರು.



ಅಲ್ಲದೆ ಕಾಗೇರಿಯವರು, ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್, ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಹಾಗೂ ದೆಹಲಿ ವಿಧಾನ ಸಭೆ ಅಧ್ಯಕ್ಷ ರಾಮ ನಿವಾಸ್ ಗೋಯಲ್ ರವರನ್ನು ಬೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಮುಂಬರುವ ಅಧಿವೇಶನದಲ್ಲಿ ವಿಧಾನ ಮಂಡಲದ ಉಭಯ ಸದನವನ್ನು ಉದ್ದೇಶಿಸಿ ಮಾನ್ಯ ರಾಜ್ಯಪಾಲರು ಭಾಷಣ ಮಾಡಲಿದ್ದು, ಈ ಕುರಿತಂತೆ ಇತ್ತೀಚೆಗೆವಿಧಾನಸೌಧದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

#######################################
ಮೈಸೂರುನಲ್ಲಿ ಶತಾಯುಷಿ ಪ್ಮಭೂಷಣ,ನಾಡುಕಂಡ ಮಹಾಚೇತನ,ತ್ರೀವಿಧ ದಾಸೋಹಿ ಶ್ರೀ ಶಿವಕುಮಾರಸ್ವಾಮೀಜಿಯವರ ಎರಡನೇ ಪುಣ್ಯಸಂಸ್ಪರಣೋತ್ಸವದ ಅಂಗವಾಗಿ ದಾಸೋಹ ದಿನಾಚರಣೆ ಆಚರಿಸಲಾಯಿತು.

ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಹರ್ಷಾನಂದ ಮಹಾಸ್ವಾಮೀಜಿ,ಆಲಮಟ್ಟಿಯ ಪುರವಲ ಹಿರೇಮಠದ ಡಾ.ರುದ್ರಮುನಿ ಮಹಾಸ್ವಾಮೀಜಿ ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.

ನೂರಾರು ಜನರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಪೂಜೆ ಹಾಗೂ ಅನ್ನದಾಸೋಹ ನಡೆಸಲಾಯಿತು.

About the author

Adyot

Leave a Comment